ಯಡ್ರಾಮಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಕಲ್ಪಿಸಿ ಕೊಡುವಂತೆ ಆಗ್ರಹ

ಯಡ್ರಾಮಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಕಲ್ಪಿಸಿ ಕೊಡುವಂತೆ ಆಗ್ರಹ

ಯಡ್ರಾಮಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಕೆ ಆರ್ ಎಸ್ ತಾಲೂಕ ಅಧ್ಯಕ್ಷ ರಿಯಾಜ್ ಸಾಬ್ ಬಿಳವಾರ್ ಅವರಿಂದ ಮನವಿ...

ಯಡ್ರಾಮಿ ತಾಲೂಕಿನ ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರಿಯಾಜ್ ಸಾಬ್ ಬೀಳವಾರ್ ಅವರು ಕೂಡಲೆ ಯಡ್ರಾಮಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿ ಯಡ್ರಾಮಿ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು ಜೆವರ್ಗಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯಿದೆ ಆದರೆ ಯಡ್ರಾಮಿ ತಾಲೂಕಿನಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಜೆವರ್ಗಿ ತಾಲೂಕಿನಿಂದ ಅಗ್ನಿಶಾಮಕ ವಾಹನ ಬರಬೇಕಾದರೆ ತುಂಬಾ ಸಮಯ ಬೇಕಾಗುತ್ತದೆ ಈಗಾಗಲೇ ಯಡ್ರಾಮಿ ತಾಲೂಕಿನ ರೈತರ ಕಬ್ಬಿನ ಗದ್ದಿಗೆ ಬೆಂಕಿ ಬಿದ್ದಾಗ ತುಂಬಾ ಸಮಯವಾದ ಮೇಲೆ ಅಗ್ನಿಶಾಮಕ ವಾಹನ ಬಂದಿರುವುದನ್ನು ಈ ಸಮಯದಲ್ಲಿ ಉಲ್ಲೇಖಿಸಿ ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರಿಯಾಜ್ ಸಾಬ್ ಅವರು ಮಾತನಾಡಿದರು ಯಡ್ರಾಮಿ ತಾಲೂಕಿನ ರೈತರ ಹಿತದೃಷ್ಟಿಯಿಂದ ಅಗ್ನಿಶಾಮಕ ಠಾಣೆಗೆ ಶೀಘ್ರದಲ್ಲಿ ಸ್ಥಳ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ದೇವೇಂದ್ರಪ್ಪ ಗೌಡ ಪೋಲಿಸ್ ಪಾಟೀಲ್ ಹಾಗೂ ಶಂಕರ್ ಗೌಡ ಕನ್ನೊಳ್ಳಿ ಸುಂಬಡ ಕರವೇ ಉಸ್ತುವಾರಿ ಅಧ್ಯಕ್ಷರು ಯಡ್ರಾಮಿ ಮಹಾಂತಗೌಡ ಮಾಲಿ ಪಾಟೀಲ್ ಕರವೆ ಮಾಗಣಗೇರಾ ಗ್ರಾಮ ಘಟಕ ಅಧ್ಯಕ್ಷರು ಮತ್ತು ರೇವಣಸಿದ್ಧ ಸುಂಬಡ ಹಾಗೂ ಬಿಸಿಲು ನಾಡಿನ ಹಸಿರು ಸೇನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಲಾಳೆ ಸಾಬ್ ಮನಿಯರ್ ಹಾಗೂ ಮರಿಯಪ್ಪ ಬೀಳವಾರ ಸಿದ್ದು ಎಸ್ ಬಿಳವಾರ್ ಈ ಸಂದರ್ಭದಲ್ಲಿ ಭಾಗವಹಿಸಿದ್ದರು

ವರದಿ ಜೆಟ್ಟೆಪ್ಪ ಎಸ್ ಪೂಜಾರಿ