ಸಾಹಿತ್ಯ ಚಿಲುಮೆ ವಿದ್ಯಾವತಿ ಬಲ್ಲೂರ

ಸಾಹಿತ್ಯ ಚಿಲುಮೆ ವಿದ್ಯಾವತಿ ಬಲ್ಲೂರ

ಸಾಹಿತ್ಯ ಚಿಲುಮೆ ವಿದ್ಯಾವತಿ ಬಲ್ಲೂರ

  ""ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ..

ಫಲಮಾಗುವಂದು ತುತ್ತೂರಿ ಧ್ವನಿಯಿಲ್ಲ.

ಬೆಳಕೀವ ಸೂರ್ಯ, ಚಂದ್ರರುದಯದಂದು ಸದ್ದಿಲ್ಲ.

ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ- ಡಿ. ವಿ. ಜಿ. ಯವರ ಸಾಹಿತ್ಯದ ಸಾಲುಗಳು ನೆನಪಿಗೆ ಬರುತ್ತದೆ. ಅದರ ಹಾಗೆ ಸಾಧನೆ ಪಥದಲ್ಲಿ ಸಾಗುತ್ತಿರುವ, ಸದ್ವವಿನಯದ ಖಣಿ,ನೇರ ಮಾತಿನ ಧಣಿ, ಮೃದು ಹೃದಯದ ಸತ್ಯ ಶುದ್ಧ ಕಾಯಕ ಜೀವಿಗಳು, ಕಲ್ಯಾಣ ನಾಡಿನ ಸಾಹಿತಿ ಶ್ರೀಮತಿ ವಿದ್ಯಾವತಿ ಬಲ್ಲೂರರವರು.

ಮೂಲತಃ ಬೀದರ ಜಿಲ್ಲೆ, ಔರಾದ ತಾಲೂಕಿನ ಠಾಣಕೂಷನೂರ ಗ್ರಾಮದ ಖೇಮಶೆಟ್ಟಿ ಪರಿವಾರದ ತಂದೆ ಚಂದ್ರಪ್ಪ ತಾಯಿ ಪಾರಮ್ಮ ದಂಪತಿಗಳ ಮಗಳಾಗಿ ದಿ. ೧೦. ೬. ೧೯೭೦ ರಲ್ಲಿ ಜನಸಿದರು.

ಬಾಲ್ಯದಿಂದಲೂ ಬಸವಾದಿ ಶರಣರ ತತ್ವ ವಿಚಾರಗಳನ್ನು ಅವರ ಜೀವನದಲ್ಲಿ ಅಳವಡಿಸಿಕೊಂಡು ಶರಣರ ಪಥದಲ್ಲಿ ನಡೆಯುವ ಕಾಯಕ ಯೋಗಿಣಿ ವಿದ್ಯಾವತಿ ಬಲ್ಲೂರವರು,

ಪ್ರಾಥಮಿಕ ಪ್ರೌಢ ಶಿಕ್ಷಣ ಠಾಣಾಕೂಶನೂರ ಗ್ರಾಮದಲ್ಲಿ, ಬಿ. ಎ. ಪದವಿ ಗೋದುತಾಯಿ ಕಾಲೇಜು ಕಲಬುರಗಿ ಯಲ್ಲಿ, ಬಿ. ಎಡ್, ಬಿಲಾಲ್ ಕಾಲೇಜು ಬೀದರ್, ಎಂ. ಎಡ್. ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯ, ಪಿ. ಜಿ. ಪದವಿ ಕಲಬುರಗಿ ವಿಶ್ವವಿದ್ಯಾಲಯೂ ಪೂರ್ಣಗೊಳಿಸಿದರು.

ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ, ಅನ್ನುವ ಹಾಗೆ ಬಲ್ಲೂರ ಗ್ರಾಮದ ಬಸವರಾಜರವರ ಬಾಳಸಂಗಾತಿಯಾಗಿ ಅವರ ಬಾಳಿಗೆ ಬೆಳಕಾದರು, ಇವರಿಗೆ ಅನಿಮೆಷಾ, ಮತ್ತು ನೀಲವೀರ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಎಂ. ಎ. ಎಂಎಡ್ ಪದವಿ ಪಡೆದ ವಿದ್ಯಾವತಿಯವರು ಪ್ರಸ್ತುತ ಬೀದರನ ಎಂ ಎಸ್ ಮುದ್ದಣ್ಣ ಕಾಲೇಜನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ವೃತ್ತಿ ಬದುಕಿನೊಂದಿಗೆ ಬರಹವನ್ನು ಪ್ರವೃತ್ತಿ ಯಾಗಿಸಿಕೊಂಡು ಉತ್ತಮ ಸಾಹಿತಿಗಳಾಗಿ, ಅನೇಕ ಕಡೆ, ಉಪನ್ಯಾಸಕರಾಗಿ, ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿ, ಅಧ್ಯಕ್ಷರಾಗಿ, ಗೋಷ್ಠಿಗಳ ಸಂವಾದಖರಾಗಿ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 ಇವರು ಚೆನ್ನಬಸವ ಪಟ್ಟದೇವರ, ಅಸ್ಪೃಶ್ಯತೆ ಕೃತಿ , ಡಾ. ಬಸವರಾಜ. ಜಿ. ಪಾಟೀಲರವರ ಜೀವನಘಾತೆ ಕುರಿತು ಕೃತಿಗಳನ್ನು ಪ್ರಕಟಿಸಿರುವರಲ್ಲದೆ .

ಇವರು ರಚಿಸಿದ ಕವನಗಳು ಪ್ರಜಾವಾಣಿ, ಮತ್ತು ವಿಜಯವಾಣಿ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇವರ ಸಾಹಿತ್ಯ ಹಾಗೂ ಕನ್ನಡ ಸೇವೆಗಳನ್ನು ಗುರುತಿಸಿ ಜಿಲ್ಲಾಡಳಿತದಿಂದ ""ರಾಜ್ಯೋತ್ಸವ ಪ್ರಶಸ್ತಿ,""

೧೮ ನೇ ಅಖಿಲ ಭಾರತೀಯ ಕವಿತ್ರಿಯರ ಸಮ್ಮೇಳನದಲ್ಲಿ ""ಅಮೃತಾ ಪ್ರೀತಮ್ ಪ್ರಶಸ್ತಿ"",

ದೇಶಪಾಂಡೆ ಪ್ರತಿಷ್ಟಾನದ ವತಿಯಿಂದ ""ಕಾವ್ಯ ರತ್ನoಜಲಿ ಪ್ರಶಸ್ತಿ"", ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ "ಸಾಹಿತ್ಯ ಸಿರಿ ಪ್ರಶಸ್ತಿ, ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ.ಇವರ ಸಾಹಿತ್ಯ ಕೃಷಿ ಹೀಗೆ ಮುಂದುವರಿಯಲೆಂದು ಹಾರೈಸುವೆ.

ಓಂಕಾರ ಪಾಟೀಲ

(ಕಾರ್ಯದರ್ಶಿಗಳು :-ಜಿಲ್ಲಾ ಮಕ್ಕಳ ಸಾಹಿತ್ಯ ಬೀದರ)