ಡಾ. ಕರುಣಾ ಜಮದರಖಾನಿ
ಡಾ. ಕರುಣಾ ಜಮದರಖಾನಿ
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಡಾ. ಕರುಣಾ ಜಮದರಖಾನಿಯವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಾಲಹಳ್ಳಿಯಲ್ಲಿ ಮುಗಿಸಿ. ಪದವಿ ಹಾಗೂ ಸ್ನಾತಕೊತ್ತರ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದು ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ 'ಎಲ್. ಬಿ.ಕೆ ಆಲ್ದಾಳ ಅವರ ಬದುಕು ಬರಹ' ಕುರಿತು ಸಂಶೋಧನೆ ಕೈಗೊಂಡು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಇವರು ಕಲಬರಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಲಕ್ಷ್ಮಯ್ಯ ಜಾಜಿ ಪದವಿ ಮಹಾವಿದ್ಯಾಲಯ ಹಾಗೂ ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಬೋಧಕಿಯಾಗಿ ಕಾರ್ಯನಿರ್ವಹಿಸಿ. ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಯನ ಮತ್ತು ಅಧ್ಯಾಪನದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಡಾ. ಕರುಣಾ ಅವರು ಬೋಧನೆಯ ಜೊತೆಗೆ ಹಲವಾರು ಸಾಹಿತಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಲ್. ಬಿ.ಕೆ ಆಲ್ದಾಳ ಹಾಗೂ ನಡೆಯೊಳಗಿನ ನುಡಿ ಎನ್ನುವ ಎರಡು ಪುಸ್ತಕಗಳನ್ನು ಪ್ರಕಟಿಸಿರುವ ಡಾ.ಕರುಣಾ ಅವರು ನಮ್ಮ ನಡುವಿನ ಸೃಜನಶೀಲ ಬರಹಗಾರರು ಹಾಗೂ ಉತ್ತಮ ವಾಗ್ಮಿಗಳು. ಅನೇಕ ರಾಜ್ಯ,ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿ ವಿಧ್ವತ್ ಪೂರ್ಣ ಪ್ರಬಂಧವನ್ನು ಮಂಡಿಸಿ ಸಂಶೋಧಕರ ಗಮನ ಸೆಳೆದ ಡಾ. ಕರುಣಾ ಜಮದರಖಾನಿ ಅವರು ಸಮೂಹ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡ ಲೇಖಕಿ. ಇವರ ಹಲವು ಭಾಷಣಗಳು, ಚಿಂತನೆಗಳು, ಕಲಬುರಗಿ ಆಕಾಶವಾಣಿಯಲ್ಲಿ ಪ್ರಸಾರಗೊಂಡಿದ್ದು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಸಾಹಿತಿಕ ಮತ್ತು ಸಾಂಸ್ಕೃತಿಕ ಸಾಧನೆಯನ್ನು ಗುರುತಿಸಿ ವಿಶ್ವಕರ್ಮ ಶಿಕ್ಷಣ ಸಂಸ್ಥೆಯವರು "ದೇವನಾoಪ್ರಿಯ ಪ್ರಶಸ್ತಿ" ನೀಡಿ ಗೌರಸಿದ್ದರ ಜೊತೆಗೆ ,ಸಾಹಿತ್ಯ ಶ್ರೀ ಪ್ರಶಸ್ತಿ ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವಾರ್ಡ್, ಯುನೈಟೆಡ್ ಇಂಡಿಯಾ ನ್ಯಾಷನಲ್ ಅವಾರ್ಡ್, ಟೀಚರ್ ಆಫ್ ಎಕ್ಸಲೆಂಟ್ ಅವಾರ್ಡ್ ಹೀಗೆ ಹಲವು ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದ್ದು ಹೆಮ್ಮೆಪಡುವ ಸಂಗತಿ.
ಡಾ. ಶರಣಬಸಪ್ಪ ವಡ್ಡನಕೇರಿ