ಭಾರತಿ ವಸ್ತ್ರದ ಸಾಹಿತಿ

ಭಾರತಿ ವಸ್ತ್ರದ ಸಾಹಿತಿ

ಸಾಹಿತಿ ಶ್ರೀ ಮತಿ ಭಾರತಿ ವಸ್ತ್ರದ  

ಅವರ ಜನ್ಮ ಭೂಮಿ ಬಿಜಾಪುರವಾದರೂ ಅವರ ಕರ್ಮ ಭೂಮಿ ಬೀದರ.

   ವಸ್ತ್ರದರವರು. ಕರ್ನಾಟಕ ಲೇಖಕಿಯರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಸಾಹಿತ್ಯದ ಸೇವೆ ಸಲ್ಲಿಸುತ್ತಿದ್ದಾರೆ .

ತಂದೆ ಸಿದ್ದಲಿಂಗಯ್ಯ ಹಾಗು ತಾಯಿ ಅನ್ನಪೂರ್ಣ ದೇವಿ ದಂಪತಿಗಳ ಉದರದಲ್ಲಿ 1952 ರಂದು ಜನಸಿದರು.

ವಸ್ತ್ರದ ಅವರು ಶ್ರೀ ಶರಣಬಸಯ್ಯ ಜೊತೆ ದಂಪತ್ಯದ ಜೀವನಕ್ಕೆ ಕಾಲಿಟ್ಟರು ಇವರಿಗೆ ಗಿರೀಶ್ ಮತ್ತು ಸಂತೋಷ ಹಾಗೂ ರಶ್ಮಿ ಎಂಬ ಮೂರು ಮಕ್ಕಳಿದ್ದಾರೆ. ರಶ್ಮಿಯವರು ಪ್ರಜಾವಾಣಿ ಪತ್ರಿಕೆಯ ಮೂಲಕ ಸಮಾಜದಲ್ಲಿನ ಅಂಕು ಡೊಂಕು ತಿದ್ದುವ ಕೆಲಸ ಮಾಡುತ್ತಿದ್ದಾರೆ.

ಶ್ರೀಮತಿ ವಸ್ತ್ರದರವರು ಎಂ. ಎ. ಕನ್ನಡ, ಮತ್ತು ಪ್ರಾಚೀನ ಇತಿಹಾಸ , ಎಂ. ಎಡ್. ಪದವಿ ಪಡೆದು ಪ್ರೌಢ ಶಾಲಾ ಶಿಕ್ಷಕಿಯಾಗಿ, ಸರಕಾರಿ ಪದವಿ ಪೂರ್ವ ಕಾಲೇಜಿನ (ಬಾಲಕರ ) ಸಹ ಶಿಕ್ಷಕಿಯಾಗಿ, ಜಿಲ್ಲಾ ಸಾಕ್ಷರತಾ ಸಮಿತಿ ಬೀದರ ಕಾರ್ಯದರ್ಶಿ,

ಮುರಾರರ್ಜಿ ವಸತಿ ಶಾಲೆ ಬಗ್ದಲ್ ಪ್ರಾಂಶುಪಾಲರಾಗಿ, ಕನ್ನಡ ಸಂಸ್ಕೃತಿ ಇಲಾಖೆ ಬೀದರ ಪ್ರಭಾರಿ ನಿರ್ದೇಶಕರಾಗಿ, ಕಮಠಾಣಾ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ 31.5.2012 ವೃತ್ತಿಯಿಂದ ನಿವೃತ್ತಿ ಹೊಂದಿದರು, ಸಾಹಿತ್ಯದಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ.

ಇವರು ಸಾಹಿತ್ಯ, ಸಂಗೀತ, ದ್ವನಿ ಸುರುಳಿಗಳ ಸಂಗ್ರಹ, ಹಾಗೂ ಅನೇಕ ಪತ್ರಿಕೆಗಳಲ್ಲಿ ಕವನ, ವೈಚಾರಿಕತೆ ಲೇಖನಗಳು ,ಪ್ರಸ್ತುತ ವಿದ್ಯಾಮಾನಗಳ ಲೇಖನಗಳು ಮೂಡಿಬಂದಿವೆ.

ಪ್ರಕಟಣೆಗೊಂಡಿರುವ ಲೇಖನಗಳು.

1)ಬೀದರ ಸಾಕ್ಷರತಾ ಆಂದೋಲನ ಪ್ರಯುಕ್ತವಾಗಿ

ಪ್ರಕಟಣೆಗೊಂಡ ಲೇಖನಗಳು ಬೀದರ ದೀಪ 1.2.3.

2)ಅಕ್ಷರ ಕಾರಂಜಿ (ಸ್ನಾತಕೋತ್ತರ ಪುಸ್ತಕ )

3)ಮಾರ್ಗ ಸೂಚಿ (ಸ್ನಾತಕೋತ್ತರ ಮತ್ತು ಮುಂದುವರಿಕೆ ಶಿಕ್ಷಣ)

4)ನವಚೇತನ (ನೂತನ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಕೈಪಿಡಿ )

5)ನಾನು ನನ್ನ ದೇಶ

6)ಒಡಪು ಕಲಿತಿಯೇನ ಗೆಳತಿ

7)ಹಿಪ್ಪು ನೇರಳೆ

8)ಬೆಳಕಿನೆಡೆಗೆ (ನಾಟಕ )

 ಇವರ ಬೆಳಕಿನೆಡೆಗೆ ನಾಟಕ ಆಕಾಶವಾಣಿ ಕಲ್ಬುರ್ಗಿಯಿಂದ ಪ್ರಸಾರವಾಗಿದೆ.

ತರಬೇತಿ ಸ್ಥಳಗಳು

1)ಸಾಕ್ಷಾರೋತ್ತರ ಹಾಗು ಅನೌಪಚಾರಿಕ ಶಿಕ್ಷಣ ಸಾಹಿತ್ಯ ರಚನಾ ಕಾರ್ಯಗಾರ ಮೈಸೂರು.1994

2)ಜನಸಂಖ್ಯೆ ಶಿಕ್ಷಣ ಯೋಜನೆ 1994

3)ಸಾಹಿತ್ಯ ರಚನೆ ಹೆಗ್ಗುಡು (ನಿನಾಸ):-ನ್ಯಾಷನಲ್ ಬುಕ್ ಟ್ರಸ್ಟ್ ವತಿಯಿಂದ

4)ಭಾಷಾ ಭೋದನೆ :-ಭಾರತೀಯ ಭಾಷಾ ಕೇಂದ್ರ ಮೈಸೂರು 1994

5)ಅನೌಪಚಾರಿಕ ಶಿಕ್ಷಣ ಕಾರ್ಯಾಗಾರ :-1994

6)ಪಾಠೋಪಕರಣ ರಚನೆ ಮತ್ತು ಬಳಕೆ ಕುರಿತು ಕಾರ್ಯಾಗಾರ :-ಲೋಕಶಿಕ್ಷಣ ನಿರ್ದೇಶನಾಲಯ ನವದೆಹಲಿ 1995

7)ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸದಸ್ಯರಿಗೆ ತರಬೇತಿ :-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು 1995

8)ಅಂಗವಿಕಲ ನ್ಯೂನತೆಯುಳ್ಳ ಮಕ್ಕಳಿಗೆ ಶಿಕ್ಷಣ ತರಬೇತಿ :-ಡಿ. ಎಸ್. ಈ. ಆರ್. ಟಿ.1995

9)ಭಾಷಾ ಭೋದನೆಯಲ್ಲಿ ಕೌಶಲ್ಯ ಮತ್ತು ಮೌಲ್ಯ ಮಾಪನ :-ಏನ್. ಸಿ. ಇ. ಆರ್. ಟಿ 1996

10)ಸಾಕ್ಷರೋತ್ತರ ಹಾಗು ಮುಂದುವರಿಕೆ ಶಿಕ್ಷಣ ಕುರಿತು 1997

11)ಜೆoಡರ ತರಬೇತಿ :-ಡಿ. ಎಸ್. ಇ. ಆರ್. ಟಿ. ಡಯಟ್ 1997

12)ಕನ್ನಡ ಆಢಳಿತ ಭಾಷೆ ತರಬೇತಿ :-ಡಿ ಪಿ ಇ ಪಿ, ಎನ್ ಇ ಪಿ 1997

ಹಾಗು ಲಿಂಗ ಸಮಾನತೆ, ಕನಿಷ್ಠ ಕಲಿಕಾ ಹಂತ, ಅಂಗವಿಕಲ ಮಕ್ಕಳಿಗೆ ವಿಶೇಷ ಕಲಿಕೆ, ಏಡ್ಸ್ ನಿಯಂತ್ರಣ ಮತ್ತು ಚಿಕಿತ್ಸೆ ಕುರಿತು ಜಾಗ್ರತೆ , ಕಮ್ಮಟ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸ ನೀಡಿದ್ದಾರೆ.

ಸಂಘ ಸಂಸ್ಥೆಗಳ ಪದಾಧಿಕಾರಿ

1)ಕಾರ್ಯದರ್ಶಿಗಳು :-ಜಿಲ್ಲಾ ಸಾಕ್ಷಾರತ ಸಮಿತಿ ಬೀದರ.

2)ಅಧ್ಯಕ್ಷರು :-ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ

3)ಸಲಹೆಗಾರರು :-ಭಾರತ, ಜ್ನ್ಯಾನ ವಿಜ್ಞಾನ ಸಮಿತಿ ಬೀದರ

4)ಗ್ರಹ ಪಾಲಕರು :-ಬಾಲಕಿಯರ ವಸತಿ ನಿಲಯ ಭಾಲ್ಕಿ 2001

5)ರಾಜ್ಯ ಸಂಪನ್ಮೂಲ ವ್ಯಕ್ತಿ :-ಲೋಕ ಶಿಕ್ಷಣ ಇಲಾಖೆ ಬೆಂಗಳೂರು

6)ಜಿಲ್ಲಾ ಸಂಪನ್ಮೂಲ ವ್ಯಕ್ತಿ :-ಜಿಲ್ಲಾ ಎಲ್ಲ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡುವುದು.

7)ಪ್ರಧಾನ ಸಂಪಾದಕಿ :-ಅಕ್ಷರ ಕಾರಂಜ (ಪಾಕ್ಷಿಕ ಪತ್ರಿಕೆ )

8)ವಾರ್ತಾ ವಾಚಕರು :-ಸುರಭಿ ಸಿಟಿ ಕೇಬಲ್ ಬೀದರ.

ಪ್ರಶಸ್ತಿಗಳು

1)ಸಾಕ್ಷರ ರತ್ನ :-ಜಿಲ್ಲಾ ಸಂಪನ್ಮೂಲ ವ್ಯಕ್ತಿ ಬೀದರ 1994

2)ಅತ್ಯುತ್ತಮ ಶಿಕ್ಷಕಿ :-ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ 1996

3)ರಾಜ್ಯೋತ್ಸವ ಪ್ರಶಸ್ತಿ :- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೀದರ 1996

4)ಅತ್ಯುತ್ತಮ ಶಿಭಿರ ನಿರ್ದೇಶಕಿ :-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ 1996

5)ರಾಜ್ಯೋತ್ಸವದ ಪ್ರಶಸ್ತಿ :-ಶಿಕ್ಷಣ ಸೇವೆ ಜಿಲ್ಲಾಢಳಿತ ಬೀದರ 1997

6)ಶಿಕ್ಷಣ ರತ್ನ ಪ್ರಶಸ್ತಿ :-ಕರ್ನಾಟಕ ರಾಜ್ಯ ಶಿಕ್ಷಣೋತ್ತಾನ ಪ್ರತಿಷ್ಟಾನ ಮೈಸೂರು 1998

7)ಶಿಕ್ಷಣ ಸಿರಿ ಪ್ರಶಸ್ತಿ :-2000

8)ಆದರ್ಶ ಶಿಕ್ಷಕಿ :-ಶಿವಾನುಭಾವ ಮಠ ಮುಕ್ತಿ ಮಂದಿರ ಬೀದರ.2002

9)ರಾಜ್ಯೋತ್ಸವದ ಪ್ರಶಸ್ತಿ :-ಜಿಲ್ಲಾಢಳಿತ ಬೀದರ 2004

10)ಸಾಹಿತ್ಯ ಚೂಡಾಮಣಿ ಪ್ರಶಸ್ತಿ :-ದೇಶಪಾಂಡೆ ಸಾಹಿತ್ಯ ಪ್ರತಿಷ್ಟಾನ ಬೆಂಗಳೂರು ಬೀದರ

11)ಪ್ರಭುರಾವ್ ಕಂಬಳಿವಾಲೆ ಪ್ರಶಸ್ತಿ :-ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವೆ ಪ್ರತಿಷ್ಟಾನ ಬೀದರ.

12)ಸಾಹಿತ್ಯ ಸಿರಿ ಪ್ರಶಸ್ತಿ :-ಸಾಹಿತ್ಯ ಸಂಘ ಬೀದರ.

13)ಶಿಕ್ಷಣ ಪ್ರಭಾ ರತ್ನ ಪ್ರಶಸ್ತಿ :-ಮಂದಾರ ಕಲಾವಿದರ ವೇದಿಕೆ ಬೀದರ.

14)ಭೂಮಿ ತಾಯಿ ಪ್ರಶಸ್ತಿ :-ಕನ್ನಡ ಸಾಹಿತ್ಯ ಪರಿಷತ್ ಬೀದರ.

ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಮತ್ತು ಗೌರವಗಳು ಲಭಿಸಿವೆ.

-ಓಂಕಾರ ಪಾಟೀಲ

(ಕಾರ್ಯದರ್ಶಿ:-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ )

ಮೊ :-6360413933