ಪತ್ರಕರ್ತ,ಸಾಹಿತಿ,ಸಂಗಮೇಶ್ವರ ಎಸ್ ಮುರ್ಕೆಗೆ ಕನ್ನಡ ಸೇವಾ ರತ್ನ ಪ್ರಶಸ್ತಿ

ಪತ್ರಕರ್ತ,ಸಾಹಿತಿ,ಸಂಗಮೇಶ್ವರ ಎಸ್ ಮುರ್ಕೆಗೆ ಕನ್ನಡ ಸೇವಾ ರತ್ನ ಪ್ರಶಸ್ತಿ

ಪತ್ರಕರ್ತ,ಸಾಹಿತಿ,ಸಂಗಮೇಶ್ವರ ಎಸ್ ಮುರ್ಕೆಗೆ ಕನ್ನಡ ಸೇವಾ ರತ್ನ ಪ್ರಶಸ್ತಿ 

ಶ್ರೀ ಕೇತಕಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ)ಬೀದರ್ ಹಾಗೂ ಹಣ್ಣು ಪಾಜಿ ಗೆಳೆಯರ ಬಳಗ ವತಿಯಿಂದ ಶಿಕ್ಷಣ ,ಸಾಹಿತ್ಯ, ವೈದ್ಯಕೀಯ, ಮಾಧ್ಯಮ, ಪೊಲೀಸ,ಕಾನೂನು ,ಕಲೆ, ಕೃಷಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ 50 ವರ್ಷದ ಕರ್ನಾಟಕ ಸಂಭ್ರಮದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅಡಿಯಲ್ಲಿ "ಕನ್ನಡ ಸೇವಾ ರತ್ನ" ಪ್ರಶಸ್ತಿ ನೀಡುವ ಪ್ರಶಸ್ತಿಗೆ ಕಲ್ಯಾಣ ಕಹಳೆ ಪತ್ರಿಕೆ ವರದಿಗಾರರಾದ  ಸಂಗಮೇಶ್ವರ ಎಸ್ ಮುರ್ಕೆಯವರು ಆಯ್ಕೆಯಾಗಿದ್ದಾರೆ.

   ಇವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದವರು ತಂದೆ ಸೂರ್ಯಕಾಂತ , ತಾಯಿ ಲಕ್ಷ್ಮಿಬಾಯಿ ದಂಪತಿಗಳ ಉದರದಲ್ಲಿ ದಿನಾಂಕ1-6-1980ರಲ್ಲಿ ಜನಿಸಿದ್ದಾರೆ.

ಹೋಳೆಸಮುದ್ರ   ಈ ಗ್ರಾಮವು ಕರ್ನಾಟಕದಲ್ಲಿ ಇದ್ದರು ಮರಾಠಿಯ  ಪ್ರಭಾವ ಬೀರುತ್ತಿದೆ ಈ  ಗಡಿಭಾಗದಲ್ಲಿ ಇದ್ದುಕೊಂಡು ಕನ್ನಡ ನಾಡು ನುಡಿ ಸೌಹಾರ್ದನೆಯ  ಹೊಂದಿರುವ ಅಪರೂಪದ ಸಾಹಿತ್ಯ ಕನ್ನಡ,

ಇವರು ಕನ್ನಡ,ಮರಾಠಿ, ಹಿಂದಿ ಭಾಷ್ಯಾ ಪ್ರಾವೀಣ್ಯತೆ ಹೊಂದಿದ ಇವರು ಬಿ,ಎ, ಡಿ.ಇಡಿ, ಪದವಿಧರರಾಗಿದ್ದು ಸದ್ಯ ಕೃಷಿಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡವರು. ಜೊತೆಗೆ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಕೃಷಿ ಬದುಕಿನೊಂದಿಗೆ ಸಾಹಿತ್ಯ ಕೃಷಿ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವರು.

ಇದರ ಜೊತೆಗೆ ಪತ್ರಿಕೆ ರಂಗದಲ್ಲಿ ಕೆಲಸವನ್ನು ಮಾಡುತ್ತಾರೆ. ಕಮಲನಗರ ತಾಲೂಕಿನ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಮಲನಗರ ತಾಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಖಂಜಾಚಿಯಾಗಿ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದಾರೆ.

ಇವರು ಬಾಲ್ಯದಿಂದಲೂ ಸಾಹಿತ್ಯ ದಲ್ಲಿ ಆಸಕ್ತರು , ೨೦೦೨ರಲ್ಲಿ 'ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ' ೨೦೧೧ರಲ್ಲಿ'ಸಂತ ಶ್ರೀ ಹರಿನಾಥ ಚರಿತ್ರೆ' ಪ್ರಕಟಿಸಿದ್ದರೆ, ೨೦೧೧ರಲ್ಲಿ 'ಶ್ರೀಸದ್ಗುರು ಹರಿನಾಥ ಮಹಾರಾಜ ಯಾತ್ರಾ ವಿಶೇಷಾಂಕ' ಎಂಬ ಮರಾಠಿ ಕೃತಿಯು

ಅನಂತ ಚಂಪಾಯಿ ಮಾಧವ ಕದಂ ಅವರೊಂದಿಗೆ ಸಂಪಾದಿಸಿದ್ದಾರೆ.೨೦೧೨ರಲ್ಲಿ'ಹನಿ ಹನಿ ಜೇನ ಹನಿ'ಎಂಬ ಹನಿಗವನ ಸಂಕಲನ, ೨೦೧೭ರಲ್ಲಿ ಸಾಧಕರು ಎಂಬ ವ್ಯಕ್ತಿ ಚಿತ್ರಗಳ ೨೦೨೧ರಲ್ಲಿ ಹೊಳೆಸಮುದ್ರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತ್ತು.

ಇದೀಗ ಬೀದರ ಜಿಲ್ಲೆಯ ಸಂಸ್ಕೃತಿ ಪರಂಪರೆ ಕೃತಿ ನವನೀತ ಪ್ರಕಾಶನ ಮೈಸೂರು ಇವರು ಪ್ರಕಟಿಸಿದ್ದಾರೆ. ಈ ಹೊತ್ತು ಹಲವು ಕೃತಿಗಳು ಪ್ರಕಟಣೆಯಾಗಿವೆ. 

 ಬರಹಗಳು ಸಂಯುಕ್ತಕರ್ನಾಟಕ, ಪ್ರಜಾವಾಣಿ, ಸುಧಾ, ಉತ್ತರ ಕರ್ನಾಟಕ ಸೇರಿದಂತೆ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.

ಸಂಗಮೇಶ್ವರ ಎಸ್ ಮುರ್ಕೆ ಯವರ ಸಾಹಿತ್ಯ ಕೃಷಿ ಗುರುತಿಸಿ ಅನೇಕ ಸಂಘ ಸಂಸ್ಥೆಗಳ ಜಿಲ್ಲಾ ಮತ್ತು ತಾಲೂಕ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಗೌರವಗಳಿಗೆ ಭಾಜನರಾಗಿದ್ದಾರೆ.

  ಮುರ್ಕೆ ಹೊಳೆಸಮುದ್ರ ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಶ್ರೀ ಕೇತಕಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಹಾಗೂ ಹಣ್ಣು ಪಾಜಿ ಗೆಳೆಯರ ಬಳಗ ವತಿಯಿಂದ ಇವರನ್ನು ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಹಣ್ಣುಪಾಜಿ ಪತ್ರಿಕೆಗೆ ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ

ನವೆಂಬರ್ 5 ರಂದು ಬೀದರ ನಗರದ ಡಾ! ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕನ್ನಡ ಸೇವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇವರ ಅಭಿಮಾನಿಗಳ ಬಳಗ ಮಸ್ಕಲ್ ನಲ್ಲಿರುವ ಭೀಮ್ ನೀಲಕಂಠರಾವ ಹಂಗರಗೆ, ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಶಾಂತ್ ಮಠಪತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿಎಂ ಗಳಿಗೆ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾಹಾದೇವ ಮಡಿವಾಳ,ಗೆ ಗ್ರಾಮದ ನಿವಾಸಿಗಳಾದ ಹಿರಿಯರಾದ ಆತ್ಮೀಯರಾದ ಗೆಳೆಯರಾದ ಹಾಗೂಸಾಹಿತಿಗಳು ಮತ್ತು ತಾಲೂಕಿನ ವರದಿಗಾರರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ತಿಳಿಸಿದ್ದಾರೆ.