ಸರ್ವ ಜನಾಂದ ತೋಟ: ರುಕ್ಮೋದ್ದಿನ್ ಇಸ್ಲಾಂಪುರ

ಸರ್ವ ಜನಾಂದ ತೋಟ: ರುಕ್ಮೋದ್ದಿನ್ ಇಸ್ಲಾಂಪುರ
ಬೀದರ್ ಜಿಲ್ಲೆ ಸಾಮರಸ್ಯದಿಂದ ಕೂಡಿದ ನೆಲವಾಗಿದೆ. ಇಲ್ಲಿಯೇ 12ನೇ ಶತಮಾನದ ಶರಣರ ನಾಡಾಗಿ ,ಸೂಫಿ ಸಂತರು ಬೀಡಾದ ಪ್ರದೇಶ.ಅದರಂತೆ ಹಲವು ಮತ -ಧರ್ಮಗಳು, ರಾಜಕೀಯ ,ಸಾಮಾಜಿಕ ಆರ್ಥಿಕ ,ಶೈಕ್ಷಣಿಕ ಕೊಡುಗೆಯನ್ನು ನೀಡಿದೆ. ಮಹಮ್ಮದ ಗವಾನನ ಮದರಸಾ ವಿಶ್ವವಿದ್ಯಾಲಯ ನೆಲೆಗೊಂಡ ಸ್ಥಳ. ಕನ್ನಡದ ಮೊಟ್ಟಮೊದಲ ಬ್ರಾಜಿಷ್ಣುವಿನ ಕರ್ನಾಟಕ ಆರಾಧನಾ ಟೀಕೆ,ವಚನ,ಸೂಫಿ,ತತ್ತ್ವ ಪದ ವಿಜ್ಞಾನೇಶ್ವರರ ಹಿಂದೂ ಕಾನೂನು ಗ್ರಂಥ ರಚನೆಕಾರ ನೆಲ. ಅದರಂತೆ ಸಾಹಿತ್ಯಿಕವಾಗಿಯು ಹತ್ತು ಹಲವು ವೈಶಿಷ್ಟತೆಗಳನ್ನು ಪಡೆದುಕೊಂಡ ಅನೇಕ ಸಾಹಿತಿಗಳು ಇಲ್ಲಿದ್ದಾರೆ. ಅಂತಹ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಮಾಡಿದ ಹಿಂದೂ ಮುಸ್ಲಿಂ ಮತ್ತು ಸಾಮರಸ್ಯ ಬೆಸೆದು, ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವೀಯತೆಯ ಮೂಲಕ ತಮ್ಮ ಬರವಣಿಗೆಗೆ ತೊಡಗಿಕೊಂಡವರು ರುಕ್ಮೋದ್ದೀನ್ ಇಸ್ಲಾಂಪುರವರು.
ಹುಟ್ಟು ಇಸ್ಲಾಂ-ವಿಶ್ವ ಮಾನವ ಪ್ರಜ್ಞೆ:
ಇವರು ಮೂಲತಃ ಬೀದರದ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದವರು. ಇಲ್ಲಿಯಪಾಷಾಮೀಯಾ ಮತ್ತು ಮಸ್ತಾನಬೀ ದಂಪತಿಗಳ ಮಗನಾಗಿ 18 -07-1966 ರಲ್ಲಿ ಜನಿಸಿದರು. ಇವರ ಶಿಕ್ಷಣ ಅಭ್ಯಾಸವು ಪ್ರಾರಂಭದಲ್ಲಿ ಇಸ್ಲಾಂಪುರ, ರಾಜೇಶ್ವರ ಹುಮ್ನಾಬಾದ್ಗಳಲ್ಲಿ ಪದವಿಯನ್ನು ಪಡೆದವರು. ನಂತರ ಬಾಹ್ಯವಾಗಿ ಎಂ.ಎ. ಪತ್ರಿಕೋದ್ಯಮ, ಎಂ.ಎ. ಕನ್ನಡ , ಎಂ.ಎ ಇತಿಹಾಸ., ಎಲ್.ಎಲ್.ಬಿ., ಬಿ.ಎಲ್.ಐ,ಎಸ್ಸಿ. ಡಿಪ್ಲೋಮೋ ಇನ್ಬ ಜರ್ನಲಿಸಂ ,ಪಿ.ಜಿ.ಡಿಪ್ಲೋಮೋ ಇನ್ ಜರ್ನಲೀಜಮ್.,ಡಿಪ್ಲೋಮಾ ಇನ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್.,ಪಿ.ಜಿ.ಡಿಪ್ಲೋಮಾ ಇನ್ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಹೀಗೆ ಎಂಟತ್ತು ಹಲವು ಪದವಿಗಳನ್ನು ತಮ್ಮ ಓದಿನೊಂದಿಗೆ ಜ್ಞಾನದ ಹಸಿವನ್ನು ತೀರಿಸಿಕೊಂಡವರು. ಅತ್ಯಂತ ಬಡತನದಲ್ಲಿ ಜನಿಸಿದರು,ಇವರಿಗೆ ಬಡತನ ಓದುವುದಕ್ಕೆ ಅಡ್ಡ ಬರಲಿಲ್ಲ. ಈ ಎಲ್ಲ ಪದವಿಗಳನ್ನು ಅವರು ಬಾಹ್ಯವಾಗಿ ಕುಳಿತು ಮೈಸೂರು ಮಾನಸ ಗಂಗೋತ್ರಿಯ ವಿಶ್ವವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ಉನ್ನತ ಶಿಕ್ಷಣವನ್ನು ಪಡೆದುಕೊಂಡು ಜ್ಜಾನ ಶಿಖರವೇರಿದವರು.
ವೃತ್ತಿ ಕಾಯಕ ಯೋಗಿ:
ತಮ್ಮ ವೃತ್ತಿಗೆ ಅನುಗುಣವಾಗಿ ಕೆ. ಎಸ್. ಆರ್. ಟಿ. ಸಿ ಯಲ್ಲಿ ಕಂಡಕ್ಟರ್ ನೌಕರರಾಗಿ ಅಲ್ಲಿಯೇ ತಮ್ಮ ವೃತ್ತಿ ಜೀವನದ ಸಾಧನಾ ಮೆಟ್ಟಿಲು ಏರಿದವರು.ಬಸವಕಲ್ಯಾಣ, ಹುಮನಾಬಾದ,ಬೀದರ,ಮನ್ನಾ ಎಖ್ಖೇಳಿ,ಮೊದಲಾದ ಕಡೆ
ವೃತ್ತಿ ಜೀವನ ಕಂಡವರು. ಬಡ್ತಿಯನ್ನು ಹೊಂದಿ AST ಬೀದರದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಬಹಳಷ್ಟು ಕಾಯಕಕ್ಕೆ ಮಹತ್ವವನ್ನು ನೀಡಿದವರು.ಕಾಯಕದಲ್ಲಿ ನಿರತತರಾಗಿ ಒಳ್ಳೆಯ ಕಾರ್ಯ ಮಾಡಿದ್ದಾರೆ.
ಮನೆ ಗೆದ್ದು- ಮಾರುಗೆದ್ಧವರು:
ಸದ್ಯ ಇವರ ತಾಯಿ ಇಸ್ಲಾಂಪೂರ ಗ್ರಾಮ ನಿವಾಸಿ. ಹೆಂಡತಿ ಸುಹೀಲಾ ಬೇಗಂ ಕಲಬುರಗಿಯಲ್ಲಿ ಖಾಸಗಿ ಶಾಲಾ ಶಿಕ್ಷಕಿ,ಮಗಳು ಟ್ರೇನ್ ಟೆಕ್ನಾಲಜಿಯ ಸಾಫ್ಟ್‌ವೇರ್ ಇಂಜಿನಿಯರ್ ರೋಶನ್, ಮಗ ನೂರ ಮೈಸೂರಿನ ಜೆ.ಎಸ್.ಎಸ್.ತಾಂತ್ರಿಕ ಕಾಲೇಜಿನಲ್ಲಿ ಬಿ.ಇ.ಸಿವಿಲ್ ಓದು ತ್ತಿದ್ದಾರೆ.ಇಂತಹ ಚಿಕ್ಕ ಚೊಕ್ಕ ಕುಟುಂಬ!. ಸದಾ ಮನೆಯ ಮಂದಿಗೆಲ್ಲಾ ಪ್ರೀತಿ ಋಣವನ್ನು ಇಟ್ಟು ಗೌರವಿಸುವರು.
ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಆದರ್ಶ ಬಾಳು ಬದುಕಿದವರು.ಮನೆ ಗೆದ್ದು ಮಾರು ಗೆದ್ದು; ಸಾಹಿತ್ಯ ಲೋಕ ಪ್ರವೇಶಿಸಿದ್ದರು.ಅವರ ಕೈಯಲ್ಲಿ ಯಾವಾಗಲೂ ಒಂದು ಬ್ಯಾಗ ಕೈ ನೋಯುತ್ತಿದ್ದ ವೋ ಒಇಲ್ಲ ಗೊತ್ತಿಲ್ಲ.ರಾತ್ರಿಯಾದರೆ ಇಸ್ಲಾಂಪುರ ಊರಿ ಗೆ ಹೋಗಬೇಕು. ಕರೆದವರನ್ನು ತಬ್ಬಿ ಅಪ್ಪುವರು.
ಸ್ನೇಹಕ್ಕೆ ಮತ್ತೊಂದು ಹೆಸರು:
ಇವರನ್ನು ನಾನು ಕಂಡದ್ದು 1996ರಲ್ಲಿ. ಅಂದಿನ ಒಂದು ಪರಿಚಯ ಇಂದಿಗೂ ಮಾಸದ ಹಾಗೆ ಕಾಪಿಟ್ಟುಕೊಂಡು ಬಂದವರು. ನನ್ನ ಬರವಣಿಗೆ, ಓದು, ಸಾಹಿತ್ಯ ರಚನೆ ಸಂಘಟನೆ ಪ್ರಾಧ್ಯಾಪಕ ಹುದ್ದೆ ಇವುಗಳೆಲ್ಲವನ್ನು ಕಣ್ಣಾರೆ ಮನಸಾರೆ ಕಂಡು ಹಿರಿಯಿರಿ ಹಿಗ್ಗಿ ಸಂತಸ ವ್ಯಕ್ತಪಡಿಸಿದವರು. ಸದಾ ಬಂದಿಲ್ಲೊಂದು ಕಾರ್ಯದಲ್ಲಿ ತೊಡಗಿಕೊಂಡಾಗ ಸಂಪೂರ್ಣವಾಗಿ ನಮ್ಮೊಂದಿಗೆ ಬೆರೆತುಕೊಂಡು ನಿಂತವರು. ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ನಡೆಯುವ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ನಾನು ಕರೆದಾಗಲೆಲ್ಲ ಬಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋಗುತ್ತಿದ್ದರು. ಅನೇಕ ಅಭಿನಂದನ ಗ್ರಂಥ, ಸಂಪಾದನೆಯಲ್ಲಿ ನಿಮ್ಮ ಲೇಖನ ಬೇಕು ಎಂದಾಗ ಸಂಪೂರ್ಣವಾಗಿ ಅದರ ಬಗ್ಗೆ ಮನನ ಮಾಡಿಕೊಂಡು ಬರೆದು ಮನೆಗೆ ತಂದು ಒಪ್ಪಿಸುವುದು ಅವರ ಜಾಯಮಾನ. ಅಲ್ಲವೇ ಪ್ರತಿಯೊಬ್ಬ ಲೇಖಕರ ಲೇಖನಗಳನ್ನು ಸಹ ತಂದು ಮನೆಗೆ ಮುಟ್ಟಿಸುತ್ತಿದ್ದರು. ಅನೇಕರನ್ನು ಮನೆಗೆ ಕರೆದುಕೊಂಡು ಬಂದು ಅವರ ಆತ್ಮೀಯತೆ ,ಸ್ನೇಹವನ್ನು ಕೂಡ ಬೆಳೆಸುವಲ್ಲಿ ಅವರ ಪಾತ್ರವೂ ಕೂಡ ಗಣನೀಯವಾಗಿದೆ. ನಾವು ಎಲ್ಲೇ ಕಾಣಲಿ ಬಸ್ಸಿನಲ್ಲಿರಲಿ, ಬೇರೆ ಊರಿನಲ್ಲಿರಲಿ, ತಾವು ಕಂಡಕ್ಟರ್ ಆಗಿ ಸೇವೆ ಸಲ್ಲಿಸುವ ಬಸ್ಸಿನಲ್ಲಾಗಲಿ ಅಥವಾ ಬಸ್ಸು ನಿಲ್ದಾಣದಲ್ಲಿ ಚಿಂತನೆ,ತುಂಬಿದ ಹೃದಯದಿಂದ ಅಪ್ಪಿಕೊಂಡು ಮಾತನಾಡಿಸುವ ಗುಣ ;ತಾಯ್ತನದ ಗುಣ ನಾನು ಕಂಡಿದ್ದೇನೆ ಭಾಗವಹಿಸುತ್ತಿದ್ದರು. ಒಂದು ವೇಳೆ ಬರದೇ ಆಗದಿದ್ದರೂ ಸಹ ಕಂಡಾಗ ನನಗೆ ಇಂಥ ಕೆಲಸ ಇತ್ತು ,ಹೀಗಾಗಿ ಬರಲಿಲ್ಲ ಎಂದು ಹೇಳುತ್ತಿದ್ದರು. ಕಾರ್ಯಕ್ರಮ ಮುಂದೆ ಇದ್ದಾಗ ನಾನು ಖಂಡಿತವಾಗಿ ಬರುತ್ತೇನೆ ಎಂದರೆ ಅಲ್ಲಿ ಖಂಡಿತವಾಗಿ ಅವರು ಹಾಜರಾಗುವುದು ಇಂತಹ ಒಂದು ಸೌಜನ್ಯ ಶೀಲ, ಸ್ನೇಹ ಜೀವಿ ಇಸ್ಲಾಂಪುರವರು ಆಗಿದ್ದರು. ಅದಲ್ಲದೆ ಅವರ ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ರಾತ್ರಿಯಾವಾಗಲೂ ಲಾಲಧರಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದ್ದರು. ಆ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾವಾನಿಸುತ್ತಿದ್ದರು. ನಮಗೆ ಗೌರವಿಸುತ್ತಿದ್ದರು.
ಅಲ್ಲಿ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭ, ಆಧ್ಯಾತ್ಮದ ಚಿಂತನೆ,ಸಾಹಿತ್ಯ-ಉಪನ್ಯಾಸಗಳನ್ನು ಮಾಡಿಸುತ್ತಿದ್ದರು. ನಿರೂಪಣೆ,;ಪ್ರಾಸ್ತಾವಿಕ, ಮುಖ್ಯ ಅತಿಥಿ, ಅಧ್ಯಕ್ಷತೆ, ಉದ್ಘಾಟನೆ ಹೀಗೆ ಎಲ್ಲದರಲ್ಲೂ ಕೂಡ ನಮ್ಮನ್ನು ಕರೆದು ಒಂದೊಂದು ಸ್ಥಾನವನ್ನು ಕೊಡುವುದರ ಮೂಲಕವಾಗಿ ಒಂದು ಬಳಗವನ್ನು ಅವರು ಕಟ್ಟಿಕೊಂಡಿದ್ದರು. ಇಸ್ಲಾಂಪುರದ ಮಾಣಿಕ ರೆಡ್ಡಿ ಅವರು ತಮ್ಮ ಅಣ್ಣನ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ನನಗೂ ಕೂಡ ಕೊಡಿಸುವ ಮೂಲಕ ನನ್ನ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಕೆಲಸವನ್ನು ಮಾಡಿದವರು ತಮಗೆ ಯಾವುದೇ ಪುಸ್ತಕ ಬೇಕೆಂದಾಗ ನೇರವಾಗಿ ಬಂದು ಮನೆಗೆ ಕುಳಿತುಕೊಂಡು ಆ ಪುಸ್ತಕವನ್ನು ಪಡೆದುಕೊಳ್ಳುತ್ತಿದ್ದರು.ನಮಗೆ ಇಂಥ ಪುಸ್ತಕ ದೊರಕಿಲ್ಲ ಎಂದರೆ ನಮ್ಮತ್ತರ ಇರುವುದಕ್ಕಿಂತ ನಿಮ್ಮಲ್ಲಿರಬೇಕು ಎಂದು ಆ ಪುಸ್ತಕವನ್ನು ತಂದುಕೊಡುವ ಕೆಲಸವನ್ನು ಕೂಡ ಮಾಡಿದ್ದಾರೆ. ನಾವು ಕಲಬುರ್ಗಿ ಬೇರೆ ಜಿಲ್ಲೆಗಳಲ್ಲಿ ಕೂಡ ಕಾರ್ಯಕ್ರಮದಲ್ಲಿ ಹಾಜರಾದಾಗ ಅಲ್ಲಿಯೂ ಕೂಡ ಬಂದು ಹಾರೈಸಿದ್ದು ಅವರ ವ್ಯಕ್ತಿತ್ವಕ್ಕೆ ಇದೊಂದು ಸಾಕ್ಷಿ!. ಇಂತಹ ಒಬ್ಬ ವ್ಯಕ್ತಿ ಯಾರಿಗೂ ನೋವನ್ನು ಕೊಡದ ಯಾರಿಗೂ ಸಿಟ್ಟನ್ನು ಬರಿಸದೆ ತಮ್ಮದೇ ಆದ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ತಮ್ಮ ಬದುಕಿನ ಪಯಣವನ್ನು ಮುನ್ನಡೆಸಿಕೊಂಡು ಬಂದವರು ಅವರೊಳಗೆ ಸಂತನಿದ್ದಾನೆ,ಅವರೊಳಗೊಬ್ಬ ಶರಣನಿದ್ದಾನೆ, ಅವರೊಳಗೊಬ್ಬ ಸೂಫಿ ಇದ್ದಾನೆ, ಅವರೊಳಗೊಬ್ಬ ಆಧ್ಯಾತ್ಮದ ಜೀವಿ ಇದ್ದಾನೆ,ತಾತ್ವಿಕ ಚಿಂತನೆಯ ಪುಣ್ಯ ಪುರುಷನಿದ್ದಾನೆ. ಅವರೊಳಗೊಬ್ಬ ಮನುಕುಲದ ಸಂದೇಶ ಸಾರುವ ಒಬ್ಬ ಲೇಖಕನು ಕೂಡ ಇದ್ದಾನೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿ ಬೆಳೆದು ಬಂದಿರುವ ಇವರು ಯಾವಾಗಲೂ ಇಸ್ಲಾಂ ಧರ್ಮದ ಒಳ್ಳೆಯದನ್ನು ಒಳ್ಳೆಯತನವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದರು. ಅದರಂತೆ ಹಿಂದೂ ಧರ್ಮದ ಅಧ್ಯಾತ್ಮದ ಚಿಂತನೆಗಳನ್ನು ಸದಾ ಹೊಂದಿದವರು. ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು. ಶರಣರ ಹಿಂದೂ ಧರ್ಮದ ಭಗವದ್ಗೀತೆ, ರಾಮಾಯಣ, ಮಹಾಭಾರತ ಮೊದಲಾದ ಎಲ್ಲ ಧರ್ಮಗಳನ್ನು ಪ್ರೀತಿಸುವ ಮೂಲಕ ಮನುಷ್ಯ ಧರ್ಮವನ್ನು ಪ್ರೀತಿಸಿದವರು ಸಕಲ ಜೀವಾತ್ಮರಿಗೆ ಲೇಸ ಬಯಸಿದಂತೆ ಎಲ್ಲ ಧರ್ಮಗಳ ಆಧ್ಯಾತ್ಮದ ವೈಚಾರಿಕ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದವರು. ಅವರಲ್ಲಿ ಎಂದೂ ಕೂಡ ಜಾತಿಯತೆ, ಅಸಮಾನತೆ, ವರ್ಗ, ವರ್ಣ ,ಲಿಂಗ ತಾರತಮ್ಯತೆ ನಾನೆಂದು ಕಾಣಲಿಲ್ಲ. ಆತನಲ್ಲಿರುವ ಒಂದು ವ್ಯಕ್ತಿತ್ವ ಸದಾ ಮನುಷ್ಯತ್ವ !. ಮನುಷ್ಯ ಧರ್ಮ ಮತ್ತು ಮಾನವೀಯತೆಗೆ ದುಡಿಯುವ ಮನಸ್ಸಾಗಿತ್ತು ಇಂಥವರು ಸಿಗುವದು ಅಪರೂಪ.
ಸಾಹಿತ್ಯ ರಚನೆ:
ಇಸ್ಲಾಂಪುರ ಅವರು ಕಳೆದ ಮೂತ್ತೈದು
ವರ್ಷಗಳಿಂದಲೇ ಸಾಹಿತ್ಯ ರಚನೆಗೆ ತೊಡಗಿಕೊಂಡವರು. ಬಿಡಿಬಿಡಿಯಾಗಿ ಲೇಖನ,ಕವನ,ವಿಮರ್ಶೆ ಬರೆಯುತ್ತಾ ಬಂದರು.ಪ್ರಕಟಣೆಗೆ ತೊಡಗಿದ್ದು ಸ್ವತಂತ್ರ ಕೃತಿ ಪ್ರಕಟಣೆಗೆ
ಬಹು ತಡವಾಗಿ.ಇದಕ್ಕೆ ಅವರ ವಯಕ್ತಿಕ ಜೀವನ ಸಮಸ್ಯೆ
ಸವಾಲುಗಳನ್ನು,ಸಂಘರ್ಷಮಯ ಜೀವನದ ನಡುವೆ ಸಾಕಷ್ಟು ಜರ್ಜರಿತವಾದರೂ ಬರಹ ಬರೆಯುವುದು ಬಿಡಲಿಲ್ಲ."ಕಾರ್ಗತ್ತಲಿಂದ ಮಂಜು ಬೆಳಕಿನಡೆಗೆ” ಎಂಬ ಕಥಾ ಸಂಕಲನವನ್ನು ಪ್ರಕಟಿಸಿದರು. ಆದರೆ ಇಲ್ಲಿ ಧಾರ್ಮಿಕವಾದ ಸಮುದಾಯದ ಕೆಲವು ಮೌಢ್ಯತೆ, ಅಲ್ಲಿರುವ ಕಂದಾಚಾರಗಳನ್ನು ಹೊರ ಹಾಕಿದರು.ಇದರಿಂದ ವಿವಾದಕ್ಕೆ ಕಾರಣವಾಗಿ ಜಾತಿ,ಸಮುದಾಯದ ವಿರುದ್ಧ ಎದೆಯೊಡ್ಡಿ ನಿಲ್ಲ ಬೇಕಾಯಿತು.
"ಎನ್ನೊಡಲಿಂದ ತಮ್ಮೊಡಲಿಗೆ” ಕವನ ಸಂಕಲನ,
ಈ ಸಂಕಲನದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಮಸ್ಯೆ ತಲ್ಣಣಗಳ ಚಿಂತನೆಯ ಪತಿಣಾಮಕಾರಿ ಕವನಗಳಿವೆ.ಇವು ಯಾವ ಪಂಥ ಹೊಂದಿಲ್ಲದಿದ್ದರೂ ಪ್ರಗತಿಪರ ಆಲೋಚನೆ, ಮನ ತುಡಿಯುವ ಕವನಗಳು ಓದಿಸಿಕೊಂಡು ಹೋಗುತ್ತವೆ.
ಕಾದಂಬರಿ ಕ್ಷೇತ್ರದಲ್ಲಿ ಸಾಮಾಜಿಕ ಸವಾಲುಗಳ ಮುಖವಾಣಿಯಂತೆ ಮೂಡಿ ಬಂದವುಗಳು ಕಣ್ಣಂಚಿನ ನೀರು, ಕರುಳ ಬಳ್ಳಿ ,ಭಗವತಿ,ಸುಮತಿ ಈ ನಾಲ್ಕು ಕಾದಂಬರಿಗಳು, ಈ ಕಾದಂಬರಿ ವಸ್ತು,ವಿಷಯ ಆಯ್ಕೆಯಲ್ಲಿ ತುಂಬಾ ಗಟ್ಟಿಯಾದ ನೆಲೆಗಟ್ಟು ಒದಗಿಸಿದ್ದಾರೆ.ಭಾಷೆ,ಶೈಲಿ,ತಂತ್ರಗಳ ಮೂಲಕ ಗಮನ ಸೆಳೆದಿವರರ.ಅಲ್ಲಲ್ಲಿ ಪ್ರಾದೇಶಿಕ ಭಾಷೆಯ, ಗಾದೆ,ಒಗಡು,ಹೇಳಿಕೆಗಳು ಓದುವ ಹೊತ್ತಿಗೆ ಗಮನ ಸೆಳೆದು ವಿಚಾರ ಚಿಂತನೆ ಮೂಡುತ್ತವೆ.
ಮಾನಸ ಗಂಗೋತ್ರಿಯ ಮಡಿಲಲ್ಲಿ..ಅರವತ್ತೊಂದು
ಲೇಖನಗಳಿವೆ.ಆರು ನೂರಾ ಇಪ್ಪತ್ತು ಪುಟಗಳ ಹೊಂದಿದ
ಬೃಹತ್ ಗ್ರಂಥ.ಇದರಲ್ಲಿ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ, ರಾಜಕೀಯ,ಪೀಠಾಧಿಪತಿ ಗಳು,ಕ್ಷೇತ್ರ ದರ್ಶನ,ಹಾರಕೂಡ ಹಿರೇಮಠದ ಧರ್ಮ ಸಮನ್ವಯ, ರಾಜೇಶ್ವರ ಸಾಂಸ್ಕೃತಿಕ ಅಧ್ಯಯನ, ಗೋಂಧಳಿ ಜನಾಂಗ,ಗಂಗೋತ್ರಿ ಮಡಿಲಲ್ಲಿ, ಅಲ್ಲದೇ ಸಾಹಿತಿ,ಲೇಖಕ,ಕವಿ,ಕಲಾವಿದರು ಇದ್ದಾರೆ. ಬೀದರ ಜಿಲ್ಲೆಯ ಸಾಂಸ್ಕೃತಿಕ, ಭಾಷೆ,ಕನ್ನಡ ನಾಡು,ನುಡಿ ಗಡಿ ಭಾಗದ ಹತ್ತಾರು ಮಗ್ಗುಲುಗಳನ್ನು ದಾಖಲಿಸಿದ್ದಾರೆ. ಇದೊಂದು ಇಸ್ಲಾಂಪುರ ಅವರ ಒಡನಾಟ-ಸಂಬಂಧಗಳ ಕೊಂಡಿಯಾಗಿ ನಿಲ್ಲುವ ಕೃತಿ.
ಇವರ ಬಹುಮುಖಿ ನೆಲೆಯ ವೈಚಾರಿಕ, ವೈಜ್ಞಾನಿಕ
ಚಿಂತನೆಯ ಲಾಲಧರಿ ವಿಚಾರಧಾರೆ,ವೈಚಾರಿಕ ಕೃತಿ, ಶೋಧ -ಭೋದ ಈ ಯೋಗಿ ವಾಸ್ತವವಾದಿ ಜೀವನ ಚರಿತ್ರೆ ಒಳಗೊಂಡ ಹತ್ತು ಕೃತಿಗಳನ್ನು ರಚಿಸಿದ್ದಾರೆ. ಇಲ್ಲಿನ ಎಲ್ಲಾ ಕೃತಿಗಳು ಮನದಾಳದಿಂದ ಬಂದವು.ಅವರ ಚಿಂತನೆ ಯೋಚನೆ,ಆಲೋಚನೆ, ಮುಖಾಂತರ ಓದುಗರ ಸೆರೆ ಹಿಡಿಯುತ್ತವೆ.ಹಲವು ಕೃತಿಗಳ ಸಂಪಾದನೆ ಮಾಡಿದ್ದಾರೆ,
ಆಕಾಶವಾಣಿ ಮತ್ತು ದೂರದರ್ಶನ ಪತ್ರಿಕೆ, ಸಮೂಹ
ಮಾಧ್ಯಮಗಳ ಮೂಲಕ ಅವರ ಬರಹ,ಚಿಂತನ,ಲೇಖನ,
ಪ್ರಸಾರವಸಗಿವೆ.ಜಿಲ್ಲಾ, ವಿಭಾಗ,ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿದ್ದರು ತಾಲೂಕಾ ಮತ್ತು ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಡಳಿತದಿಂದ ಪಡೆದವರು.ಹಾರಕೂಡ ಮಠದ ಶ್ರೀಚನ್ನ ರತ್ನ ಪ್ರಶಸ್ತಿ ಗೌರವ ಅಲ್ಲದೇ ಹಲವು ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿ, ಸನ್ಮಾನ ಮಾಡಿ ಗೌರವಿಸಿವೆ
ಯಾವುದೇ ಹುದ್ದೆ, ಅವಕಾಶ,ಪ್ರಶಸ್ತಿ, ಗೌರವಕ್ಕೆ
ಅವರು ಗಂಟು ಬಿದ್ದವರಲ್ಲ.ಅವರು ಸದಾ ಸಾಮಾನ್ಯರಂತೆ
ಬಾಳಿ ಬದುಕಿ ತಮ್ಮ ಜೀವನ ಸಾರ್ಥಕ್ಯಗೊಳಿಸಿದರು.ಈ
ಲಾಬಿಯಿಂದ ಬಹು ದೂರ.ತನ್ನ ಕೈಲಾದಮಟ್ಟಿಗೆ ಎಲ್ಲಾ ಕೆಲಸ ,ಕಾರ್ಯ, ಕರ್ತವ್ಯ ವನ್ನು ತಪ್ಪಸ್ಸಿನಂತೆ ಮಾಡಿ ತೋರಿ ಸಾಮಾನ್ಯರಂತೆ; ಸಾಮಾನ್ಯರಾಗಿ ಬದುಕಿದವರು.
ಎಷ್ಟೋ ಇವತ್ತು ಜಾತಿ ಹೆಸರಲ್ಲಿ,ಸಾಹಿತ್ಯದ ತಪ್ಪು, ತಪ್ಪು ಕಲ್ಪನೆಯಿಂದ ಬರೆದವರು ಏನೇನೋ ಆಗಿ ಹೋದರು ಪ್ರಾಮಾಣಿಕತೆ,ನಿಷ್ಠೆ,ಶ್ರಮದ ವ್ಯಕ್ತಿ ಗೆ ಅವು ದೂರವೇ ಸರಿ
ಇದ್ದುದ್ದರಲ್ಲಿ ತೃಪ್ತಿ; ಸಾಮಾಧಾನ,ಸಾಮರಸ್ಯ, ಐಕತೆ ಬೆಸೆದು ಸರ್ವ ಜನಾಂಗದ ತೋಟವಾದ ಶ್ರೀ ರುಕ್ಮುದ್ದಿನ ಇಸ್ಲಾಂಪುರ. ಅವರ ಬರಹಗಳು ಶಾಶ್ವತವಾಗಿ ನಮ್ಮೆದು ರಿಗಿವೆ.
ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ,
ಸಾಹಿತಿ,ಕಲಬುರಗಿ