ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಜಸ್ವಂತ್ ಸಿಂಗ್.

ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಜಸ್ವಂತ್ ಸಿಂಗ್.

ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಜಸ್ವಂತ್ ಸಿಂಗ್. 

ಈ ದೇಶ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿ ದೇಶವೇ ಮೆಚ್ಚುವಂಥಹ ಸೇವೆಯನ್ನು ಸಲ್ಲಿಸಿ, ಸರ್ವರ ಪ್ರಶಂಸೆಗೆ ಪಾತ್ರರಾದವರು ಎಂದರೆ ಅವರೇ ಲಿಂಗೈಕ್ಯ ಜಸ್ವಂತ್ ಸಿಂಗ್ ರವರು.

 ಸಿಂಗ್ ರವರು  ವಿಶೇಷವಾಗಿ ಮಾಜಿ ಪ್ರಧಾನಿ ಲಿಂ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ NDA ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿ . ತಮ್ಮ ಸುದೀರ್ಘ ರಾಜಕೀಯದಲ್ಲಿ  ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಂತಹ ಅತ್ಯಂತ ಪ್ರಮುಖ ನಿರ್ಣಾಯಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದು. ಇಂದು ಶ್ರೀಯುತರ ಪುಣ್ಯ ಸ್ಮರಣೆ, ಪ್ರಯುಕ್ತ ಗೌರವ ನಮನವನ್ನು ಸಲ್ಲಿಸುತ್ತಾ. ಇವರ ಕುರಿತು ಸಣ್ಣದಾಗಿ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಮೇಜರ್ ಜಸ್ವಂತ್ ಸಿಂಗ್ ಅವರು ಭಾರತೀಯ ಸೇನೆಯ ಹಿನ್ನೆಲೆಯಿಂದ ಬಂದು, ದೇಶದ ರಾಜಕೀಯದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ ಅಪರೂಪದ ವ್ಯಕ್ತಿತ್ವ. 3 ಜನವರಿ , 1938 ರಂದು ರಾಜಸ್ಥಾನದಲ್ಲಿ ಜನಿಸಿ, ಮೇಯೋ ಕಾಲೇಜು ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1957 ರಲ್ಲಿ ಭಾರತೀಯ ಸೇನೆಗೆ ಸೇರಿ, ಸಶಸ್ತ್ರ  ಪಡೆಯ ಪ್ರತಿಷ್ಠಿತ ರೆಜಿಮೆಂಟ್ ಆದ 'ಸೆಂಟ್ರಲ್ ಇಂಡಿಯಾ ಹಾರ್ಸ್'ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಮೇಜರ್ ಶ್ರೇಣಿಯಲ್ಲಿ ನಿವೃತ್ತರಾದರು. ಭಾರತೀಯ ಜನಸಂಘದ ಮೂಲಕ ರಾಜಕೀಯ ಜೀವನ ಆರಂಭಿಸಿದವರು. 1960 ರ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಮತ್ತು ಸಕ್ರೀಯ ಕಾರ್ಯಕರ್ತರಾಗಿ ತಮ್ಮನ್ನು ತಾವು ಸಮಾಜಕ್ಕೆ ತೊಡಗಿಸಿಕೊಂಡರು.

ತರುವಾಯ 1980 ರಿಂದ 2014 ರವರೆಗೆ ಬಹುತೇಕ ನಿರಂತರವಾಗಿ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಿ ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಸಂಸದೀಯ ಸದಸ್ಯರಲ್ಲಿ ಒಬ್ಬರಾಗಿದ್ದರು.

ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಬಾರ್ಮರ್-ಜೈಸಲ್ಮೇರ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿತು . ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಅವರನ್ನು ಬಿಜೆಪಿಯಿಂದ ಹೊರಹಾಕಲಾಯಿತು. ಈ ಚುನಾವಣೆಯಲ್ಲಿ ಪರಾವುಭವ ಕೊಂಡರು.

ತರುವಾಯ ರಾಜಕಾರಣದಿಂದ ಹೆಚ್ಚು ಕಡಿಮೆ ದೂರವಾದರು.

ಸಿಂಗ್ ರವರು ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಂತಹ ಮೂರು ಅತ್ಯಂತ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ನಾಯಕರಾಗಿದ್ದಾರೆ. ವಿಶೇಷವಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. 1998 ರ ಪರಮಾಣು ಪರೀಕ್ಷೆಗಳ ನಂತರ ಭಾರತದ ಮೇಲೆ ಹೇರಲಾಗಿದ್ದ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ನಿವಾರಿಸಲು ಅವರು ಅಮೆರಿಕದೊಂದಿಗೆ ನಡೆಸಿದ ಸುದೀರ್ಘ ರಾಜತಾಂತ್ರಿಕ ಮಾತುಕತೆಗಳು (Strobe Talbott dialogue) ಅವರಿಗೆ ಜಾಗತಿಕ ರಾಜತಾಂತ್ರಿಕರಾಗಿ ದೊಡ್ಡ ಮನ್ನಣೆ ತಂದುಕೊಟ್ಟವು. ಅಲ್ಲದೆ, ಕಾರ್ಗಿಲ್ ಯುದ್ಧದ ನಂತರ ರಕ್ಷಣಾ ಖಾತೆಯನ್ನು ಮತ್ತು 2002 ರಿಂದ 2004 ರವರೆಗೆ ಹಣಕಾಸು ಖಾತೆಯನ್ನು ನಿರ್ವಹಿಸಿ, ಮೌಲ್ಯವರ್ಧಿತ ತೆರಿಗೆ (VAT) ಪರಿಚಯ ಸೇರಿದಂತೆ ಅನೇಕ ಆರ್ಥಿಕ ಸುಧಾರಣೆಗಳಿಗೆ ಕಾರಣರಾದರು.

ಅವರ ಪಾಂಡಿತ್ಯ, ಸಜ್ಜನಿಕೆ ಮತ್ತು ಸಂಸದೀಯ ವ್ಯವಸ್ಥೆಯಲ್ಲಿನ ಆಳವಾದ ತಿಳುವಳಿಕೆಯಿಂದಾಗಿ ಅವರು ಪಕ್ಷಾತೀತ ಗೌರವಕ್ಕೆ ಪಾತ್ರರಾಗಿದ್ದರು. 2004 ರಲ್ಲಿ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಮಹತ್ವದ ಪಾತ್ರ ವಹಿಸಿದ್ದರು. 2014 ರಲ್ಲಿ ಮನೆಯಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟಾದ ಕಾರಣ ಅವರು ಕೋಮಾಗೆ ಹೋದರು ಮತ್ತು ಸುದೀರ್ಘ ಅನಾರೋಗ್ಯದ ನಂತರ ಸೆಪ್ಟೆಂಬರ್ 27, 2020 ರಂದು ನಿಧನರಾದರು. ರಾಜತಾಂತ್ರಿಕತೆಯ ಕಲಿ, ಅನುಭವಿ ಸಂಸದೀಯ ಪಟು ಮತ್ತು ದೇಶದ ಮೂರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಸಮರ್ಥ ಸಚಿವರಾಗಿ ಶ್ರೀ ಜಸ್ವಂತ್ ಸಿಂಗ್ ಅವರು ಭಾರತೀಯ ರಾಜಕೀಯದ ಇತಿಹಾಸದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ ಎನ್ನುವುದು ಯಾರು ಮರೆಯುವಂತಿಲ್ಲ.

ಜಸ್ವಂತ್ ಸಿಂಗ್ ಅವರು ಈ ದೇಶ ಕಂಡ ಒಬ್ಬ ಪ್ರಾಮಾಣಿಕ, ನಿಷ್ಠಾವಂತ ದೇಶ ಭಕ್ತ ವ್ಯಕ್ತಿತ್ವದವರು.ಅಟಲ್ ಜಿ ಅವರ ಸರ್ಕಾರದ ಅವಧಿಯಲ್ಲಿ ನಿರ್ಣಾಯಕ ಖಾತೆಗಳನ್ನು ನಿರ್ವಹಿಸಿದ್ದ ಜಸ್ವಂತ ಸಿಂಗ್ ಅವರು ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಖಾತೆಗಳಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪನ್ನು ಮೂಡಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. 

ಸೇನೆಯಲ್ಲಿ ಹಾಗೂ ನಂತರ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಜಸ್ವಂತ್ ಸಿಂಗ್ ರವರನ್ನು ದೇಶವು ಸದಾ ಸ್ಮರಿಸುತ್ತದೆ.

- ಸಂಗಮೇಶ ಎನ್ ಜವಾದಿ.

ಬರಹಗಾರರು, ಚಿಂತಕರು, ಬೀದರ ಜಿಲ್ಲೆ.