ಶರಣ ಕಮ್ಮಟ ಉತ್ಸವಕ್ಕೆ ಮಹಾಲಿಂಗ ದೇವರು ಕರೆ

ಶರಣ ಕಮ್ಮಟ ಉತ್ಸವಕ್ಕೆ ಮಹಾಲಿಂಗ ದೇವರು ಕರೆ
ಅಫಜಲಪೂರ : ಪಟ್ಟಣದ ಅಫಜಲಪೂರ ತಾಲೂಕಿನ ಬಸವ ಮಂಟಪದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಮಹಾಲಿಂಗ ದೇವರು ಬಸವಕಲ್ಯಾಣ ವಹಿಸಿ ಮಾತನಾಡಿದ ಅವರು
45 ನೇ ಶರಣ ಕಮ್ಮಟ ಅನುಭವ ಉತ್ಸವ ಬಸವ ಕಲ್ಯಾಣದಲ್ಲಿ ದಿನಾಂಕ ನವೆಂಬರ್ 23 ಮತ್ತು 24 ರಂದು ಬಸವ ಕಲ್ಯಾಣದಲ್ಲಿ ನಡೆಯಲಿರುವ ಕಾರ್ಯಕ್ರಮವು ಪರಮ ಪೂಜ್ಯ ಶ್ರೀ ನಾಡೋಜ ಡಾ, ಬಸವಲಿಂಗ ಪಟ್ಟ ದೇವರ ದಿವ್ಯ ಸಾನಿಧ್ಯ ದಲ್ಲಿ ಹಾಗೂ ಮಾರ್ಗ ದರ್ಶನದಲ್ಲಿ ಕಳೆದ ಅನೇಕ ವರುಷಗಳಿಂದ ರಾಷ್ಟ್ರ ದ ಸಮಗ್ರ ಅಭಿವೃದ್ಧಿಯ ಚಿಂತನೆಗಳ ವೇದಿಕೆಯಾಗಿ ಅನುಭವ ಮಂಟಪ ಉತ್ಸವ ಆಚರಿಸಲಾಗುತ್ತದೆ, ಈ ಉತ್ಸವಕ್ಕೆ ನಾಡಿನ ಪೂಜ್ಯ ಮಠಾಧೀಶರು, ಅನುಭಾವಿಗಳು, ಹಿತಚಿಂತಕರು, ರಾಜಕೀಯ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ, ಆದದರಿಂದ ತಮ್ಮ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.
ನಂತರ ವಾಲ್ ಪೋಸ್ಟ್ಗಳನ್ನು ಬಿಡುಗಡೆ ಮಾಡಿದರು
ಸಭೆಯನ್ನು ಉದ್ದೇಶಿಸಿ ಶರಣ ಅಮ್ರುತರಾವ ಪಾಟೀಲ ಮಾತನಾಡಿದರು. ಲಿಂಗಾಯತ ಮಹಾಸಭೆ ಅದ್ಯಕ್ಷರಾದ ಬಸಣ್ಣ ಎಂ ಗುಣಾರಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಭಕ್ತರನ್ನು ಕರೆದುಕೊಂಡು ಬರುತ್ತೇವೆ ಎಂದು ಆಶ್ವಾಸನೆ ಕೊಟ್ಟರು.
ಸಭೆಯಲ್ಲಿ ಶರಣ ಸದಾಶಿವ ಮೇತ್ರಿ, ಬಸವರಾಜ ಕೆಂಗನಾಳ, ರಾಜೇಂದ್ರ ನಿರೋಣಿ, ಜಗದೇವಪ್ಪ ಅಂಜುಟಗಿ. ಸಿದ್ಣಣಗೌಡ, ಶರಣಪ್ಪ ಮೇತ್ರಿ. ಧಾನು ನೂಲಾ, ಜವಳಿ , ಅನೇಕ ಶರಣರು ಸಭೆಯಲ್ಲಿ ಉಪಸ್ಥಿತರಿದ್ದರು.