ನಗಿಸುತ್ತಲೆ ಸಂದೇಶ ಸಾರುವ ಗುಂಡಣ್ಣ ಡಿಗ್ಗಿ

ನಗಿಸುತ್ತಲೆ ಸಂದೇಶ ಸಾರುವ ಗುಂಡಣ್ಣ ಡಿಗ್ಗಿ

ನಗಿಸುತ್ತಲೆ ಸಂದೇಶ ಸಾರುವ ಗುಂಡಣ್ಣ ಡಿಗ್ಗಿ.

ಕಲಬುರಗಿ ತಾಲೂಕಿನ ಹರಸೂರ ಗ್ರಾಮದ ನಾಗಪ್ಪ ಡಿಗ್ಗಿ ಮತ್ತು ಗುರುಸಿದ್ದಮ್ಮ ದಂಪತಿಗಳ ಅಷ್ಠ ಪುತ್ರರಲ್ಲಿ ಕಿರಿಯ ಪುತ್ರ ಗುಂಡಣ್ಣ ಡಿಗ್ಗಿ (52). ಓದಿಕೊಂಡಿದ್ದು 10ನೇ ತರಗತಿ. ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 6ಜನ ಅಕ್ಕಂದಿರು, ಓರ್ವ ಅಣ್ಣ ಖ್ಯಾತ ಸಾಹಿತಿ, ನಾಟಕಕಾರ ৩০. ಸಿದ್ದಣ್ಣ ಡಿಗ್ಗಿಯವರ ಒಡನಾಟದಲ್ಲಿ ಬೆಳೆದವರು. ಪತ್ನಿಯಾಗಿ 10ನೇ ತರಗತಿ ಓದಿರುವ ರಾಜೇಶ್ವರಿಯವರನ್ನು ವಿವಾಹವಾಗಿದ್ದಾರೆ. ದಾಂಪತ್ಯದ ಫಲವಾಗಿ ಬಿಎಸ್ಸಿ ಓದುತ್ತಿರುವ ಮಹಾಲಕ್ಷ್ಮೀ, 9ನೇ ತರಗತಿಯಲ್ಲಿರುವ ಶ್ರುಷ್ಠಿ, 6ನೇ ತರಗತಿಯಲ್ಲಿರುವ ಸೌಭಾಗ್ಯಲಕ್ಷ್ಮೀಯವರ ಪಡೆದುಕೊಂಡಿದ್ದಾರೆ.

ಧರ್ಮದ ವೇದಿಕೆ ! ಭಕ್ತಿ ಅಮಲು ಮತ್ತೇರಿಸಿಕೊಂಡ ಜನರನ್ನು ಚಿಟುಕಿ ಹೊಡೆಯುವುದರಲ್ಲೇ ಹಾಸ್ಯದ ಹೊನಲು ಹರಿಸಿ ಹೊಟ್ಟೆ ಹುಣ್ಣಾಗುವ ಮಟ್ಟಿಗೆ ನಗಿಸುವ ಮಾಂತ್ರಿಕನೊಬ್ಬ ಆ ಮೂಲಕ ಸದೃಢ ಸಮಾಜ ಕಟ್ಟುವ ಕೆಲಸಕ್ಕೆ ಅರ್ಪಿಸಿಕೊಂಡಿದ್ದಾರೆ. 

ಹಾಸ್ಯ ಮಾಡುತ್ತಲೇ ಅಂತರ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಕಲಾವಿದ ಗುಂಡಣ್ಣ ಡಿಗ್ಗಿಯವರೇ ಆ ಸಾಧಕರು.ಗುಂಡಣ್ಣ ಹರಸೂರಿನ ಮಧ್ಯಮ ವರ್ಗದ ಡಿಗ್ಗಿ ಕುಟುಂಬದ ಕುಡಿ. ಅಪ್ಪ ನಾಗಪ್ಪ ಕೃಷಿ ಕಾಯಕ ಪ್ರಧಾನವಾಗಿಸಿಕೊಂಡರೂ, ಆಗಿನ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹವ್ಯಾಸಿಯಾಗಿ ದೊಡ್ಡಾಟ, ಬಯಲಾಟ ಮಾಡಿದ ಕಲಾವಿದ. ಅಣ್ಣ ಸಾಹಿತ್ಯ ಜೊತೆ ನಾಟಕದ ಗೀಳು ಹಚ್ಚಿಸಿಕೊಂಡ ಕಲೆ, ಸಂಸ್ಕೃತಿಯಲ್ಲಿ ಮಿಂದಿದ್ದೆದವರು. ಹೀಗಾಗಿ, ಗುಂಡಣ್ಣನವರಿಗೆ ಕಲಾ ಸಂಸ್ಕೃತಿ ರಕ್ತಗತ ಬಳುವಳಿಯಾಗಿ ಬಂದಿದೆ.

ಕಿರಿಯ ಅಚ್ಚದ ಮಗನಾಗಿರುವ ಗುಂಡಣ್ಣ, ಓದಿಕೊಂಡಿದ್ದು ಹರಸೂರಿನ ಸರಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ. ಸರಕಾರಿ ಶಾಲೆಯಾದರೂ, ಅದೊಂದು 'ಗುರು ಕುಲ' ಮಾದರಿಯಾಗಿತ್ತು. ಅಕ್ಷರ ದೀಕ್ಷೆ ಕೊಡುವ ಶಾಲೆ ಜೊತೆಗೆ ಓರ್ವ ಮನುಷ್ಯನಾಗಿ, ಮನುಷ್ಯತ್ವದ ದಾರಿಯಲ್ಲಿ ಹೇಗೆ ಸಾಗಬೇಕು ಎಂಬ ನೈತಿಕ ಪಾಠ ಮಾಡಿ ಪಳಗಿಸುವ ಮಟ್ಟಿಗೆ ಶಾಲಾ ವಾತಾವರಣವಿತ್ತು. ಗುರುಗಳಾದ ಪೀರಪ್ಪ, ವಿಠಲರಾವ, ಚಂದ್ರಕಾಂತ ಡಿಗ್ಗಿಯವರಂತವರು ದೇಶಾಭಿಮಾನ ಹಾಗು ಕನ್ನಡಾಭಿಮಾನ ಜೊತೆಗೆ ಮನುಷ್ಯ ಧರ್ಮದ ಮೂಲ ಹೇಳಿಕೊಟ್ಟವರು. ಹೀಗಾಗಿ, ಬಾಲ್ಯದಲ್ಲೇ ಗುಣಮಟ್ಟದ ಶಿಕ್ಷಣ ಸಿಕ್ಕಿದೆ. ಗುರು ತೋರಿದ ದಾರಿಯಲ್ಲೇ ಸಾಗಿ ಬದುಕು ಬುತ್ತಿ ಕಟ್ಟಿಕೊಂಡವರು.ಅಣ್ಣಮಾಡುವ

ನಾಟಕಗಳಲ್ಲಿ ಸಣ್ಣ ಪುಟ್ಟ ಹಾಸ್ಯ ಪಾತ್ರಗಳನ್ನು ಮಾಡಿ ಕಲಾ ಪ್ರಿಯರ ಚಿತ್ತ ಸೆರೆ ಹಿಡಿದ ಹುಡುಗ ಮುಂದೊಂದು ದಿನ ಹಾಸ್ಯ ಕಲಾವಿದನ್ನಾಗಿ ಬೆಳೆಯುತ್ತಾನೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಗುಂಡಣ್ಣ ಡಿಗ್ಗಿಯವರಿಗೂ ಗೊತ್ತಿರಲಿಲ್ಲ. ಸಂಗೀತ ಕಲಿತು ನಾದ ನದಿಯಲ್ಲಿ ಈಜಬೇಕೆಂಬ ಹಂಬಲದಿಂದ ಸಂಗಿತ ಸರಸ್ವತಿ ಬಳಿ ಹೋಗುತ್ತಾರೆ. ಜನಪದ ಸಂಗೀತ ಕಲಾವಿದ ಹಾಗು ಮೇರು ಹಾಸ್ಯ ಸಾಹಿತಿ ಅಮೃತೇಶ ಕಲಶೆಟ್ಟಿಯವರ ಬಳಿ ಸಂಗೀತ ಕಲಿಯಲು ಹೋಗುತ್ತಾರೆ. ಸಂಗೀತ ಸರಸ್ವತಿ ಗುಂಡಣ್ಣನವರತ್ತ ಕಣ್ಣೆತ್ತಿಯೂ ನೋಡಲಿಲ್ಲ. 'ಗುಂಡಣ್ಣ, ಸಪ್ತಸ್ವರ ಸುಲಭವಲ್ಲ, ಮನಸ್ಸು ಮಾಡಿದರೆ, ಸಪ್ತ ಸಾಗರ ದಾಟಬಹುದು. ಸಪ್ತಸ್ವರ ವಿದ್ಯೆ ಒಲಿಸಿಕೊಳ್ಳುವುದು ಕಷ್ಟ. ಸಂಗೀತದ ಮೇಲಿನ " ವ್ಯಾಮೋಹ ತೆಗೆದು ಬಿಡು' ಎನ್ನುತ್ತಾರೆ. ಸಂಗೀತದಅಳಿದು, ಹಾಸ್ಯದತ್ತ ಚಿತ್ತ ಹರಿಸುತ್ತಾರೆ.

ಹವ್ಯಾಸವಾಗಿ ಡ್ರೈವಿಂಗ್ ಕಲಿತುಕೊಂಡಿದ್ದ ಗುಂಡಣ್ಣನಿಗೆ ಆರೋಗ್ಯ ಇಲಾಖೆಯಲ್ಲಿ ಡ್ರೈವರ್ ಹುದ್ದೆ ಒಲಿದು ಬಂದಿದ್ದು 2000ರಲ್ಲಿ. ಸೇವೆ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಹಾಸ್ಯ ಕಲೆ ಕರಗತ ಮಾಡಿಕೊಂಡು ಗೆಳೆಯರ ಜೊತೆ, ಊರಲ್ಲಿ ಜಾತ್ರೆಯಲ್ಲಿ ಹಾಸ್ಯ ಸಿಡಿಸಿ ಸೈ ಎನ್ನಿಸಿಕೊಂಡಾಗಲೆಲ್ಲ ಏನೋ ಗೆದ್ದ ಎಂಬ ಅನುಭವವಾಗುತ್ತಿತ್ತು. ಶಾಲಾ ಕಾಲೇಜುಗಳಿಗೆ ಹೋಗಿ ಹಾಸ್ಯ ಮಾಡ್ತೀನಿ ಅಂತ ಹೇಳಿಕೊಂಡು ಹಾಸ್ಯ ಕಲೆ ಕರತಲಾಮಲಕ್ ಮಾಡಿಕೊಂಡಿದ್ದಾರೆ. ಹಾಸ್ಯ ಕಲೆಯಲ್ಲಿ ಪಳಗುತ್ತಾ ಸಾಗಿದಂತೆಲ್ಲಾ ಕಾರ್ಯಕ್ರಮಗಳು ಹುಡುಕಿಕೊಂಡು ಬರಲಾರಂಭಿಸಿದವು.

2004ರಲ್ಲಿ ಹೀಗೆ ಕರ್ತವ್ಯದ ಮೇಲೆ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮಕ್ಕೆ ಹೋದಾಗ ಇಡೀ ಸಿಬ್ಬಂದಿ ಸರ್ವೇ ಕಾರ್ಯದಲ್ಲಿ ತೊಡಗಿರಬೇಕಾದರೆ, ಸುಮ್ಮನೆ ವಾಹನ ಬಳಿ ನಿಂತು ಕಾಲಹರಣ ಮಾಡುವುದೇನು ? ಅವರು ಬರುವವರೆಗೂ ಈ ಊರಿನ ಶಾಲೆಯಲ್ಲಿ 'ಹಾಸ್ಯ ರಸಮಂಜರಿ' ಕಾರ್ಯಕ್ರಮ ಮಾಡಿಕೊಡಬೇಕೆಂದು ಹೋಗಿ ಬಂದವರು. ಶಹಾಬ್ಬಾಸ್‌ಗಿರಿ ಪಡೆದುಕೊಂಡು

ಗುಂಡಣ್ಣನವರ ಗ್ರಾಮ್ಯ ಭಾಷೆ, ಚಿತ್ತಾಕರ್ಷಿಸುವ ಬಾಡಿಲಾಂಗವೇಜ್, ಅಭಿನಯ ಹೀಗೆ ಹಲವಾರು ನಿಟ್ಟಿನಲ್ಲಿ ವೇದಿಕೆ ವಶಪಡಿಸಿಕೊಳ್ಳುವ ಕಲೆ ಕರಗತವಾಗಿತ್ತು.

2009-10 ರಲ್ಲಿ ಕಲಾ ಸಿರಿ ಜೀವನಾಶುರುವಿಟ್ಟುಕೊಂಡಿತ್ತು. ಅವತ್ತು ಆರಂಭಗೊಂಡ ಕಲಾ ಸಿರಿ ಇವತ್ತಿಗೂ ಏರುಗತಿಯಲ್ಲೇ ಸಾಗಿದೆ. ಕಲಬುರಗಿ, ಬೀದರ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜಧಾನಿ ಬೆಂಗಳೂರು, ನೆರೆಯ ಮಹಾರಾಷ್ಟ್ರದ ಮರಾಠವಾಡ ಕನ್ನಡಿಗರ ಸಂಘ, ಔರಂಗಬಾದ, ಪುನಾದ ಕನ್ನಡಿಗರ ಸಂಘದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಸ್ಯ ಹೊನಲು ಹರಿಸಿ ಬಂದಿದ್ದಾರೆ.

ಅಷ್ಟೇ ಅಲ್ಲ, ನೆರೆಯ ಆಂಧ್ರಪ್ರದೇಶದ ರಾಜಧಾನಿ ಹೈದ್ರಾಬಾದಿನಲ್ಲಿ ಬಹುಭಾಷಾ ಕಾರ್ಯಕ್ರಮದಲ್ಲಿ ಕನ್ನಡದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಶ್ರೀಶೈಲ್‌ದ ಜಗದ್ಗುರು ಸನ್ನಿಧಿಯವರ ಸಮ್ಮುಖದಲ್ಲಿ ಯುಗಾದಿ ಪ್ರಯುಕ್ತ ಶ್ರೀಶೈಲದಲ್ಲಿ ಕಾರ್ಯಕ್ರಮ ನೀಡಿ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅದರಲ್ಲೂ ವಿಜಯಪುರ ಜಿಲ್ಲೆಯ ತಾಲೂಕಿನ ಚಡಚಣ, ಜಿಗಜಿಣಗಿ, ಲೋಣಿ, ತದ್ದೆವಾಡಗಿ ಹೀಗೆ ಸುತ್ತೂರಿನಲೆಲ್ಲಾ ಹಾಸ್ಯದ ಸವಿಯುಣಿಸಿದ್ದಾರೆ. ಖ್ಯಾತ ಪುರಾಣ ಪ್ರವಚನಕಾರರಾಗಿರುವ ಮಹಾಂತೇಶ ಶಾಸ್ತ್ರೀಗಳು ಹಲವಾರು ಧರ್ಮ ಕಾರ್ಯಕ್ರಮಗಳಲ್ಲಿ ಹಾಸ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುರಾಣ, ಪ್ರವಚನಗಳಲ್ಲಿ ಹಾಸ್ಯ ಕಾರ್ಯಕ್ರಮದ ಪರಂಪರೆ ಹಾಕಿಕೊಟ್ಟಿದ್ದಾರೆ. ಗುಂಡಣ್ಣ ಡಿಗ್ಗಿ ಅಂದರೆ, ಅಲ್ಲೊಂದು 'ನಗುವಿನ ಬುಗ್ಗಿ'ಯೇ ಚಿಮ್ಮುತ್ತದೆ ಎಂಬ ಭಾವ ಕಲಾ ಪ್ರೇಮಿಗಳಲ್ಲಿ ಬಂದಿದೆ.

ಗುಂಡಣ್ಣನವರ ಹಾಸ್ಯದಲ್ಲಿ ನಗುವಷ್ಟೇ ಇರುವುದಿಲ್ಲ. ನಗುತ್ತಲೇ ಪಾಠ ಮಾಡಿ, ಬದುಕಿನ ಸಂದೇಶ ಸಾರುವ ಸಾರೈನೋರನಂತೆ ಕಾರ್ಯ ನಿರ್ವಹಿಸಿದ್ದಾರೆ.ಈ ಮೂಲಕ ಸದೃಢ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಯುವಕರಲ್ಲಿ ಬತ್ತಿ ಹೋಗಿದ ದೇಶ ಭಕ್ತಿಗೆ ಬಡಿದೆಬ್ಬಿಸುವುದು, ದುಶ್ಚಟಗಳ ದಾಸರಾಗಿದ್ದವರಿಗೆ ಹಿತೋಪದೇಶ ಮಾಡುವುದು ಹಾಸ್ಯದ ಹೊನಲಿನ ಮೂಲಕವೇ. ಜಾತ್ರೆ, ಮಠಗಳು ಗುಂಡಣ್ಣನವರ ಹಾಸ್ಯಕ್ಕೆ ವೇದಿಕೆ ಒದಗಿಸಿವೆ. ಹೀಗೆ ಸುತ್ತಾಡುತ್ತಾ, ಹಾಸ್ಯ ಭಾಗ್ಯ ದಾಸೋಹ ಕಲ್ಪಿಸುವ ಕಾರ್ಯನಿರ್ವಹಿಸಿದ್ದಾರೆ. ಮಾಡುತ್ತಾ, ಆರೋಗ್ಯ ಓರ್ವ ಚಿಕಿತ್ಸಕನಾಗಿಯೂ

ಹಾಸ್ಯ ಚಟಾಕಿ ಸಿಡಿಸುತ್ತಾ ಸಾಗುವುದರ ಜೊತೆಗೆ ಖ್ಯಾತ ಹಾಸ್ಯ ಕಲಾವಿದರುಗಳಾದ ಪ್ರಾಣೇಶ ಗಂಗಾವತಿ ಅವರ  ಸ್ಪುತಿ೯ ,ಸುಧಾ ಬರಗೂರು, ಇಂಧುಮತಿ ಸಾಲಿಮಠ, ಬಸವರಾಜ ಮಹಾಮನಿ, ನರಸಿಂಹ ಜೋಷಿ,ಎಂ.ಎಸ್. ನರಸಿಂಹಮೂರ್ತಿ, ಮಿಮಿಕ್ರಿ ಗೋಪಿ, ರಿಚರ್ಡ್ ಲೂಯಿಸ್, ಜೂ. ರಾಜಕುಮಾರ, ಜೂ. ವಿಷ್ಣುವರ್ಧನ ಸೇರಿದಂತೆ ಅನೇಕ ಕಲಾವಿದರುಗಳ ಜೊತೆಗೆ ಕಾರ್ಯಕ್ರಮ ನೀಡುವ ಮೂಲಕ ಜೀವನಾನುಭವ ಹೆಚ್ಚಿಸಿಕೊಂಡಿದ್ದಾರೆ.ಅಲ್ಲದೆ ಹಣಮಂತರಾಯ ಅಟ್ಟೂರ ಅವರು ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕಲ್ಪಿಸಿ ಕೊಟ್ಟಿದ್ದಾರೆ.

ಇವರ ಕಲೆಯನ್ನು ಮೆಚ್ಚಿ ಇತ್ತೀಚಿಗೆ ಕಲ್ಯಾಣ ಕರ್ನಾಟಕಸುದ್ದಿ ವಾಹಿನಿ 'ಕಲಾ ರತ್ನ', ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಶರಣಬಸವೇಶ್ವರ ಕಲಾ ಸಂಘದವರು 'ಶರಣ ರತ್ನ', ಜೈ ಕರ್ನಾಟಕ ಸಂಘದ ವತಿಯಿಂದ 'ಹಾಸ್ಯ ಬ್ರಹ್ಮ', ಸೌಭಾಗ್ಯ ಸಿರಿ ಸಮಾಜ ಸೇವಾ ಸಂಸ್ಥೆ ವತಿಯಿಂದ 'ಕಾಯಕ ರತ್ನ' ಹೀಗೆ ಹತ್ತು ಹಲವಾರು ಗೌರವ ಪುರಸ್ಕಾರಗಳು ಲಭಿಸಿವೆ. ಎಲ್ಲಕ್ಕೂ ಹೆಚ್ಚು ಅಭಿಮಾನಿಗಳ ಹಾರೈಕೆ ಯಾವತ್ತೂ

ರಕ್ಷಾಕವಚವಾಗಿದೆ. ಏನು ಇವರ ಹಾಸ್ಯದ ಹೊನಲಿನಲ್ಲಿ ಮಿಂದೆದ್ದು ಸಂಭ್ರಮಿಸಬೇಕೇ ಕರೆ ಮಾಡಿ -7022344672

{ ಬೆನ್ನ ಬೆಳಕಾದ ಪತ್ನಿ ರಾಜೇಶ್ವರಿ ಹಾಸ್ಯ ಲೋಕದ ಹೆಸರಿಗೆ ಅವರು ಉಸಿರು

ಇವತ್ತು ಹಾಸ್ಯ ಜಗತ್ತಿನಲ್ಲಿ ಸಂಚರಿಸಿ, ಹೆಸರೇನಾದರೂ ಮಾಡಿದ್ದೇನೆಂದರೆ, ಅದು ಪತ್ನಿ ರಾಜೇಶ್ವರಿಯವರ ಸಹಕಾರದಿಂದ. ಅವರು ನನ್ನ ಬೆನ್ನ ಬೆಳಕಾಗಿ ನಿಲ್ಲದಿದ್ದರೆ, ಈ ಮಟ್ಟಿಗೆ ಬೆಳೆಯಲಾಗುತ್ತಿರಲಿಲ್ಲ. ನನ್ನ ಹಾಸ್ಯ ಲೋಕದ ಹೆಸರಿಗೆ ಅವರು ಉಸಿರು ಎಂದು ಆತ್ಮಾವಲೋಕನ ಮಾಡಿಕೊಂಡರು ಗುಂಡಣ್ಣ 2.

ಶತಾಯುಷಿ ಬಾಳಿ ಬೆಳಗಿದ ಅಪ್ಪ ನಾಗಪ್ಪ, ಶತಕದತ್ತ ದಾಪುಗಾಲು ಹಾಕಿ ಬಾಳಿ ಬದುಕಿದ ಮಾತೆ ಗುರುಸಿದ್ಧಮ್ಮ ಅವರ ಸೇವೆ ಮಾಡುವ ಪುಣ್ಯ ಲಭಿಸಿದೆ. ಅದರಲ್ಲಿ ಬಹುಪಾಲು ಪತ್ನಿಯವರದಿದೆ. ವೃತ್ತಿ ಅಂತಹ ಹೋಗುತ್ತಿರಬೇಕಾದರೆ, ನನ್ನ ಜನ್ಮದಾತರ ಜೊತೆಗಿದ್ದವಳು ನನ್ನ ಪತ್ನಿ. ಅದಕ್ಕೆ ಕೃತಾರ್ಥನಾಗಿರುವೆ ಎಂದರು.

ಈ ನಾಡಿಗೆ ಹತ್ತಾರು ನಾಟಕಗಳನ್ನು ರಚಿಸಿ, ಅಭಿನಯಿಸಿ, ಹಲವಾರು ಕವಿತೆಗಳು ರಚಿಸಿ ರಂಜಿಸಿ ಹೋದ ನನ್ನ ಅಣ್ಣ ಸಿದ್ದಣ್ಣ ಡಿಗ್ಗಿಯವರ

ಸಾವಿನ ಕೊರಗು ಒಂದಿಷ್ಟು ಆಗಾಗ ಮರಗುವಂತೆ ಮಾಡುತ್ತದೆ. ಆ ಕೊರಗಷ್ಟೇ ಅಲ್ಲ, ಇನ್ನಾವ ಕೊರಗೇ ಬಾಧಿಸಿದರೂ, ದಿವ್ಯ ಔಷಧಿಯಾಗಿ ಬಳಸುತ್ತಾರೆ ಅದುವೇ *ಹಾಸ್ಯಾಷ್‌ಧಿ' ! }

-ಗುಂಡುರಾವ ಕಡಣಿ 

ಗೌರವ ಸಂಪಾದಕರು, ಗುರು ಉಪದೇಶ ಪತ್ರಿಕೆ, ಕಲಬುರಗಿ