ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಕುರಿ, 1 ಆಡು ಕಳ್ಳತನ : ಪ್ರಕರಣ ದಾಖಲು
ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಕುರಿ, 1 ಆಡು ಕಳ್ಳತನ : ಪ್ರಕರಣ ದಾಖಲು
ಚಿಂಚೋಳಿ : ತಾಲೂಕಿನ ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಚಖೇಡ ಗ್ರಾಮ ಬೀರಪ್ಪ ತಂದೆ ಘಾಳಪ್ಪ ಪೂಜಾರಿ ಅವರ ಶೆಡ್ ನಲ್ಲಿದ್ದ 15 ಉಣೆ ಕುರಿಗಳು , 1 ಆಡು ಕಳ್ಳತನವಾಗಿರುವುದಕ್ಕೆ ಠಾಣೆಯಲ್ಲಿ ಮಾಲೀಕ ದೂರು ದಾಖಲಿಸಿದ್ದಾನೆ.
ಕಳ್ಳತನ ಮಧ್ಯ ರಾತ್ರಿ 1 ಗಂಟೆಯಿಂದ 5 ಗಂಟೆಯ ಮಧ್ಯ ಕಳ್ಳತನ ನಡೆದಿರಬಹುದೆಂದು ಮಾಲೀಕ ಬಿರಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಕುಟುಂಬದ ಎಲ್ಲಾ ಸದಸ್ಯರು ರಾತ್ರಿ 10.30 ಗಂಟೆಗೆ ಮಲಗಿ ಕೊಡಿದ್ದರು. ಮಲಗಿದ್ದ ಸಮಯದಲ್ಲಿ ಬೀರಪ್ಪನಿಗೆ ಹೊಟ್ಟೆಯಲ್ಲಿ ಸ್ವಲ್ಪ ವ್ಯತ್ಸಾಸ ಕಂಡುಬಂದಿದ್ದರಿಂದ ಮಧ್ಯ ರಾತ್ರಿಯಲ್ಲಿ ಬೈರದೆಸೆಗೆ ತೆರಳಿ ಮನೆಗೆ ಬಂದು ಮಲಗಿಕೊಂಡು ಮುಂಜಾನೆ 5 ಗಂಟೆಗೆ ಮನೆಯ ಬಾಗಿಲು ತೆರೆಯಲು ಹೋದ ಬೀರಪ್ಪನಿಗೆ ಬಾಗಿಲು ತೆರೆಯಲಿಲ್ಲ. ಗಾಬರಿಗೊಂಡು ಹಿಂದಿನ ಬಾಗಿಲಿನಿಂದ ಹೋಗಿ ನೋಡುವಷ್ಟರಲ್ಲಿ ಬಾಗಿಲಿಗೆ ಕಳ್ಳರು ಹಾಕಿದ್ದಾರೆ. ಶೆಡ್ ನ ಕೀಲಿ ಮುರಿದು ಇದ್ದ 28 ಉಣಿ ಕುರಿಗಳಲ್ಲಿ 15 ಉಣೆ ಕುರಿಗಳು 7 ಆಡುಗಳಲ್ಲಿ 1 ಆಡು ಕಳ್ಳತನ ಮಾಡಲಾಗಿದೆ. ಮಾಲೀಕ ಗ್ರಾಮ ಸುತ್ತಾಡಿ ಹೂಡಿಕಿದ್ದರು ಎಲ್ಲಿ ಕುರಿಗಳು ಸಿಕಿರುವುದಿಲ್ಲ. ಕೊನೆಗೆ ಬೀರಪ್ಪ ಪೂಜಾರಿ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಬೀರಪ್ಪನ ದೂರಿನ್ವಯ ಠಾಣಾಧಿಕಾರಿಗಳು ಭಾರತೀಯ ದಂಡ ಸಂಹಿತೆ 173 ರ ಅಡಿ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಹುಡುಕುವ ಕೆಲಸ ಮುಂದುವರೆಸಿದ್ದಾರೆಂದು ತಿಳಿದು ಬಂದಿದೆ.
ಕಳ್ಳತನವಾದ ಒಟ್ಟು ಕುರಿಗಳ ಮೌಲ್ಯ 130000 ಸಾವಿರದಾಗಿದೆ ಎಂದು ಬೀರಪ್ಪ ಪೂಜಾರಿ ಸಲ್ಲಿಸಿದ ದೂರಿನಲ್ಲಿ ಉಲೇಖಿಸಿದ್ದಾನೆ.
