ಹೊಲದಲ್ಲಿ ಸುಟ್ಟುಹಾಕಿದ ಮಹಿಳೆ ಶವ ಪತ್ತೆ : ಕೊಲೆಗಾರರ ಬಂಧನ

ಹೊಲದಲ್ಲಿ ಸುಟ್ಟುಹಾಕಿದ ಮಹಿಳೆ ಶವ ಪತ್ತೆ : ಕೊಲೆಗಾರರ ಬಂಧನ

ಕಲಬುರಗಿ : ಅಕ್ಟೋಬರ್ 30 ಹಾಗೂ 31 ರ ಬೆಳಗಿನ ಜಾವ 6 ಗಂಟೆಯ ಅವಧಿಯ ಮಧ್ಯದಲ್ಲಿ ಒಬ್ಬ ಅಪರಿಚಿತ ಮಹಿಳೆ ಮೃತ ದೇಹವು ಸುಟ್ಟು ಬಿದ್ದಿತು. ಮೃತಳ ವಯಸ್ಸು ಸುಮಾರು 25 ರಿಂದ 30 ವರ್ಷ ಆಸುಪಾಸು ಇರಬಹುದೆಂದು ಅಂದಾಜಿಸಲಾಗಿದೆ.

ಉದ್ದೇಶಪೂರ್ವಕವಾಗಿ ಎಲ್ಲೋ ಕೊಲೆ ಮಾಡಿ ಫರಹತಾಬಾದನ ಜಮೀನೊಂದರಲ್ಲಿ ತಂದು ಸುಟ್ಟುಹಾಕಿ ಯಾವುದೇ ಗುರುತು ಸಿಗದಂತೆ ಮಾಡಿರುತ್ತಾರೆ. 

ಆದ್ದರಿಂದ ಕೊಲೆ ಆರೋಪಿಗಳನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ದೇವಪ್ಪ ತಂದೆ ನಿಂಗಪ್ಪ ಫರಹತಾಬಾದ ಅವರು ನೀಡಿದ ದೂರಿನ ಪ್ರಕಾರ 129/2024 103(1), 238 ಬಿ.ಎನ್.ಎಸ್ ಪ್ರಕಾರ ಪ್ರಕಾರ ಪ್ರಕರಣ ದಾಖಲಾಗಿದೆ.

 ಈ ಪ್ರಕರಣದ ಪ್ರಮುಖ ಆರೋಪಿಗಳ ಪತ್ತೆ ಕುರಿತು ಉಪ ಪೊಲೀಸ್ ಆಯುಕ್ತ ಕಲಬುರಗಿ ನಗರ ಕನಿಕಾ ಸಿಕ್ರಿವಾಲ್, ಉಪ-ಪೊಲೀಸ್ ಆಯುಕ್ತರು (ಅ & ಸಂ), ಕಲಬುರಗಿ ನಗರದ ಪ್ರವೀಣ್ ನಾಯಕ್, ಸಬ್-ಅರ್ಬನ್ ಉಪವಿಭಾಗ ಕಲಬುರಗಿ ನಗರದ ಸಹಾಯಕ ಆಯುಕ್ತ ಡಿ ಜೆ ರಾಜಣ್ಣ ಇವರ ಮಾರ್ಗದರ್ಶನದಲ್ಲಿ ಹಾಗೂ ಮಲ್ಲಿಕಾರ್ಜುನ ಇಕ್ಕಳಕಿ ಪಿ.ಐ ಫರಹತಾಬಾದ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ, ಸಿಬ್ಬಂದಿಗಳಾದ ಮೆಹಬೂಬ್, ಸಾಜೀದ ಪಾಶಾ ಕಲ್ಯಾಣಕುಮಾರ, ಆನಂದ ರಾಜಕುಮಾರ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಚನ್ನವಿರೇಶ ಹೆಚ್.ಸಿ ಅವರನ್ನೊಳಗೊಂಡ ತಂಡವು, ಪ್ರಕರಣದ ಆರೋಪಿಗಳಾದ ಮೃತಳ ಪತಿ ಮಂಜುನಾಥ ತಂದೆ ವೀರಣ್ಣ ಚಿನ್ನಮಳ್ಳಿ ಖಣದಾಳ, ಸಂಬಂಧಿಗಳಾದ ಪ್ರಶಾಂತ ತಂದೆ ವೀರಣ್ಣ ಚಿನ್ನಮಳ್ಳಿ‌ ಖಣದಾಳ, ವಿಜಯಕುಮಾರ ತಂದೆ ಮಲ್ಲೇಶಪ್ಪ ಬೆಣ್ಣೂರ ಕೆಸರಟಗಿ ಇವರನ್ನು ಇದೇ 3ನೇ ನವೆಂಬರ್ ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗಣಪತಿಪುಳೆ ಬೀಚ ಹತ್ತಿರದ ಗಣೇಶ ಕೃಪಾ ಲಾಡ್ಡನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿತರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದ್ದರಿಂದ ಆರೋಪಿಗಳನ್ನು ಪೊಲೀಸ ವಶಕ್ಕೆ ಪಡೆಯಲಾಗಿದೆ.

ಈ ಕ್ಲಿಷ್ಟಕರ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಡಾ|| ಶರಣಪ್ಪ ಎಸ್.ಡಿ.ರವರು ಅಭಿನಂದಿಸಿದ್ದಾರೆ.