14 ಬೈಕ್‌ಗಳ ಜಪ್ತಿ – ಇಬ್ಬರ ಬಂಧನ

14 ಬೈಕ್‌ಗಳ ಜಪ್ತಿ – ಇಬ್ಬರ ಬಂಧನ

 14 ಬೈಕ್‌ಗಳ ಜಪ್ತಿ – ಇಬ್ಬರ ಬಂಧನ

ಕಲಬುರಗಿ: ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿತರನ್ನು ಬಂಧಿಸಿ, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ವಿವಿಧ ಕಂಪನಿಯ 14 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ಬೈಕ್‌ಗಳ ಮೌಲ್ಯ ಸುಮಾರು ₹12.5 ಲಕ್ಷ ಎಂದು ಅಂದಾಜಿಸಲಾಗಿದೆ.

ದಿನಾಂಕ 04/07/2025 ರಂದು ಹಳೆ ಹೆಬ್ಬಾಳ ಗ್ರಾಮದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವನ್ನು ಶಹಾಬಾದ್ ಉಪವಿಭಾಗದ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಕಾಳಗಿ ವೃತ್ತದ ಸಿಪಿಐ ಜಗದೇವಪ್ಪ ಪಾಳಾ ಅವರ ನೇತೃತ್ವದ, ಪಿ.ಎಸ್.ಐ ಗಳಾದ ಸಿದ್ದಲಿಂಗ ಗೌತಮ್ ತಿಮ್ಮಯ್ಯ ವಿಶೇಷ ತಂಡ ತನಿಖೆ ನಡೆಸಿತು.

ತನಿಖೆ ವೇಳೆ ದಿನಾಂಕ 31/12/2025 ರಂದು ಆರೋಪಿತರಾದ ನಾಗೇಶ ತಂದೆ ರಾಜಪ್ಪ ಹಲಗೆನೂರ (ಪಸ್ತಾಪೂರ) ಹಾಗೂ ಗೌಡಪ್ಪ ತಂದೆ ಶರಣಪ್ಪ ಕಕ್ಕನಗೇರಾ(ರಾಮಪೂರ) ಅವರನ್ನು ಬಂಧಿಸಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಕರಣ ಬೇಧನೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.