ಜೀವನೋತ್ಸಹದ ಸಾಹಿತಿ: ಲಕ್ಷಿದೇವಿ ಶಾಸ್ತ್ರಿ

ಜೀವನೋತ್ಸಹದ ಸಾಹಿತಿ: ಲಕ್ಷಿದೇವಿ ಶಾಸ್ತ್ರಿ
ರಾಯಚೂರು ಜಿಲ್ಲೆ ದೋ- ಆಬ್ಪ್ರದೇಶ,ಎಡೆದೊರೆ ನಾಡುಎಂದು ಪ್ರಸಿದ್ಧಿಯಾಗಿದೆ. ಈ ಜಿಲ್ಲೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ,ಸಾಹಿತಿಕ ಮತ್ತು ಸಾಂಸ್ಕೃತಿಕ ವಾದ ಹಿನ್ನೆಲೆಯನ್ನು ಹೊಂದಿದ ಬಹು ಮಹತ್ವದ ಜಿಲ್ಲೆ. ಈ ಜಿಲ್ಲೆ ದಾಸರ ತೊಟ್ಟಿಲು ಎಂದು ಹೆಸರಾಗಿದೆ. ಅದರಂತೆ ತತ್ವಪದಕಾರರು, ಪುರಾಣ ಮಹಾ ಕವಿಗಳು, ಶರಣರು ಆಗಿ ಹೋದಂತೆ ಆಧುನಿಕವಾದ ಕವಿಗಳು ಸಹ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಶಾಂತರಸರು, ಪಂಡಿತ್ ತಾರಾನಾಥರು, ಸೂಗುವೀರ ಶರ್ಮ, ಚಂದ್ರಕಾಂತ ಕುಸುನೂರು, ವೀರನಗೌಡ ಮೊದಲಾದ ಹಿರಿಯ ತಲೆಮಾರಿನ ಸಾಹಿತಿಗಳು ಹುಟ್ಟನ್ನು ಪಡೆದು ಸಾಹಿತ್ಯ ಮೌಲ್ಯವನ್ನು ಕೊಟ್ಟಿದ್ದಾರೆ.ಸಂಗಡಿಗರ ಸಮಿತಿ,ಸತ್ಯ ಸ್ನೇಹಿ ಬಳಗ,ಮೊದಲಾದ ಸಾಹಿತ್ಯ- ಸಾಂಸ್ಕೃತಿಕ ನೆಲ.
ಅದರಂತೆ ಶ್ರೀಮತಿ ಲಕ್ಷ್ಮಿ ದೇವಿ ಶಾಸ್ತ್ರಿ ಅವರುಒಬ್ಬರು. ಕೂಡ ಮಹಿಳಾ ಲೇಖಕಿಯಾಗಿ, ಕವಿಯತ್ರಿಯಾಗಿ, ಕತೆಗಾರರಾಗಿ, ಸಂಪಾದಕರಾಗಿ,ಜೀವನ ಚರಿತ್ರೆಕಾರಾಗಿ, ಆಧುನಿಕ ವಚನಕಾರರಾಗಿ ಹಲವಾರು ಕೃತಿಗಳನ್ನು ರಚಿಸುವುದರ ಮೂಲಕ ಬಹು ಮಹತ್ವದ ಸಾಹಿತಿ ಎಂದು ಗುರುತಿಸಿಕೊಂಡಿದ್ದಾರೆ. ಇವರು ಮೂಲತಃ ಕಲಬುರ್ಗಿ ಜಿಲ್ಲೆಯ ಶಹಬಾದನವರು ಶಹಬಾದದಲ್ಲಿ ಜಂಗಮ ಮನೆತನದಲ್ಲಿ ಜನಿಸಿ,ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿದರು.ಆದರೆ ಇವನ್ನೇಲ್ಲ ಮೀರಿ ಬೆಳೆದು ಅಂದೇ ವೈಚಾರಿಕ ಚಿಂತನೆ ರೂಢಿಸಿಕೊಂಡರು. ಹತ್ತನೇ ತರಗತಿಯನ್ನು ಪಾಸ್ ಮಾಡಿಕೊಂಡಾಗಲೇ ತಂದೆ ಲಿಂಗೈಕ್ಯರಾದಗಿದ್ದರು.ತಾಯಿಯ ವಾತ್ಸಲ್ಯ ಪಡೆದುಕೊಂಡ ರು. ಆದರೆ ಹತ್ತನೆಯ ತರಗತಿ ಬೇಡ ಮದುವೆ ಆಗು ಎಂದು ಅಣ್ಣ ಬಸವರಾಜ ನಂದಿಧ್ವಜರು ಹೇಳಿದರೂ ನಿರಾ ಕರಿಸಿದರು.ತಮ್ಮ ಹಠದಿಂದ ಫೀ ಕಟ್ಟಲು ಆಗದೇ ಇದ್ದಾಗ ತಮ್ಮ ಓಲೆ ಮಾರಿ ಫೀ ಕಟ್ಟಿ ಎಸ್.ಎಸ್.ಎಲ್.ಸಿ ಪಾಸಾದರು ಅದೊಂದು ದೊಡ್ಡ ಸವಾಲಾಗಿದ್ದನ್ನು ತಮ್ಮ ಕಠಿಣ ಶ್ರಮದಿಂದ ಓದುವ ಮನಸ್ಸಿನಿಂದ ಓದಿದ್ದು ಸಾಮಾನ್ಯ ಸಂಗತಿ ಅಲ್ಲ.
ಮುಂದೆ ರಾಯಚೂರಿನಲ್ಲಿ ನೆಲೆಸಿದರು ರಾಯಚೂರಿನಲ್ಲಿ ತಮ್ಮ ದಾಂಪತ್ಯ ಜೀವನ ಆರಂಭಿಸುವು ದರ ಜೊತೆಗೆ ಬರವಣಿಗೆಯಲ್ಲಿ ತೊಡಗಿಕೊಂಡರು. ಅದರಂತೆ ಒಂದು ಮಗುವಿಗೆ ಜನ್ಮ ನೀಡಿದರು.ಅವರೇ ಇಂದಿನ ವಿಶ್ವನಾಥ ಶಾಸ್ತ್ರಿಯವರು.ತುಂಬು ಮನದ ಸಣ್ಣ ಚೊಕ್ಕಟವಾದ ಕುಟುಂಬ.ಸೊಸೆ,ಮೊಮ್ಮಗನೊಂದಿಗೆ ಇಂದು ವಿಶ್ರಾಂತ ಜೀವನ ಬೆಂಗಳೂರು ಮತ್ತು ರಾಯಚೂ ರಿನಲ್ಲಿ ಕಳೆಯುತ್ತಿದ್ದಾರೆ.
ರಾಯಚೂರು ಅವರ ಮನದ ಇಂಗಿತದಂತೆ ಜೀವನೋತ್ಸಹ ತುಂಬಿತು.ಓದು,ಬರಹ,ವೃತ್ತಿ ಎಲ್ಲವನ್ನು ಏಕ ಕಾಲದಲ್ಲಿ ನಿರ್ವಹಿಸಿದ ಆದರ್ಶ ಗೃಹಿಣಿ..ಎಂ.ಎ., ಬಿಇಡಿ ಪದವಿಯನ್ನು ಪಡೆದುಕೊಂಡರು. ಹಮದ್೯ ಪ್ರಾಥಮಿಕ ಶಾಲೆ ,ಪ್ರೌಢ ಶಾಲೆ,ನಂತರದಲ್ಲಿ ಹಮದದ್೯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನ ಸಲ್ಲಿಸಿದರು. ಮೂರು ದಶಕಗಳ ಕಾಲ ಅವರ ಬೋಧನೆ ಪಾಠ -ಪ್ರವಚನಗಳ ಮೂಲಕ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡರು. ಅಂದಿನ ದಿನಗಳಲ್ಲಿ ಮಹಿಳೆ ಹೊರ ಬರಲಾದ ಸ್ಥಿತಿಯಲ್ಲಿ ಅನೇಕ ಪ್ರಭಾವವನ್ನು ಪಡೆದುಕೊಂಡು. ಅಲ್ಲಿರುವ ಶಾಂತರಸರ ಪ್ರಭಾವಕ್ಕೆ ಒಳಗಾದರು. ಅದರಂತೆ ಅಲ್ಲಿರುವ ಪಂಡಿತರು, ಪುರಾಣಕಾರರು ಶಾಸ್ತ್ರಕಾರರ ಒಡನಾಟವನ್ನು ಹೊಂದಿ ಸಾಹಿತ್ಯದ ರಚನೆಗೆ ಹೆಚ್ಚು ಕ್ರಿಯಾಶೀಲರಾದರು. ಶೈಕ್ಷಣಿಕ ಸೇವೆ ಅಗಾಧವಾಗಿದೆ.
ಸಾಹಿತ್ಯಕಿವಾಗಿ ನಾಲ್ಕು ಸಾಲು,ಮರೀಚಿಕೆ,ಸುಸಂಸ್ಕೃತ ರು,ಹೃದಯಕ್ಕೆ ಹತ್ತಿರವಾದವರು,ಎಲ್ಲಾ ನಿನ್ನ ಹೆಸರಲ್ಲಿ, ಮೌನ ಮಿಡಿದಾಗ,ಕೋಟೆ ನರಬಲಿ ಪ್ರಸಂಗ,ನಮ್ಮವರಿ, ಹೊಂಗಿರಣ,ಕರ್ನಾಟಕ ಯುಗ ಪುರುಷ ಪಂಡಿತ ತಾರಾನಾಥರು,ಪಂಡಿತ ತಾರನಾಥ,ಪ್ಯಾಸ ಸಾವನ್, ದುರ್ಗಾ ಜಗದೀಶರ ಸಂಶೋಧನೆಗಳುಬಮೊದಲಾದ ಇಪ್ಪ ತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಚುಟುಕು, ಕಾವ್ಯ,ಕಥೆ,ಜೀವನ ಚರಿತ್ರೆ, ಸಂಶೋಧನೆ,ಆಧುನಿಕ ವಚನ,ಸಂಪಾದನೆ, ಹೀಗೆ ಹಲವಾರು ಪ್ರಕಾರಗಳಲ್ಲಿ ನಿರಂತರ ಸಾಹಿತ್ಯ ರಚನೆ ಮಾಡಿದ ಅಗ್ರಗಣ್ಯ ಲೇಖಕಿ.ಅವರು ಬದ್ಧತೆಯ ಬರಹಗಾರ್ತಿ,ಸಾಮಾಜಿಕ ಚಿಂತಕಿ,ಸರಳ ಸೌಮ್ಯ ಸ್ವಭಾವ ಬಹುಮುಖ ಪ್ರತಿಭಾವಂತ ಸಾಹಿತಿ.
ಇವರ ಸಾಹಿತ್ಯ ಸಾಧನೆಗೆ ಅತ್ತಿಮಬ್ಬೆ ಪ್ರಶಸ್ತಿ, ಶರಣ ಉರಿಲಿಂಗಪೆದ್ದಿ ಪ್ರಶಸ್ತಿ, ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ, ಹಲವು ಸಂಘ ಸಂಸ್ಥೆಗಳುನ ಇವರನ್ನು ಗೌರವಿಸಿ, ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ರಾಯಚೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮೌಲಿಕ ಭಾಷಣ ಮಾಡಿದ್ದಾರೆ.ಅವರೊಬ್ಬ ಚಿಂತಕಿ.ಇಳಿ ವಯಸ್ಸಿನಲ್ಲಿ ಸದಾ ಜಾಗೃತವಾದ,ಪಕ್ವವಾದ ಮಾಗಿದ ಅನುಭವವನ್ನು ಪಡೆದವರು.ಆಕಾಶವಾಣಿ,ದೂರದರ್ಶನ, ಮೊದಲಾದ ಭಾಷಣ,ಉಪನ್ಯಾಸ,ಚಿಂತನ ಪ್ರಸಾರವಾಗಿವೆ.ಅನೇಕ ವಿಚಾರ ಸಂಕಿರಣ,ಸಮ್ಮೇಳನ ಗಳಲ್ಲಿ ಭಾಗವಹಿಸಿ ತಮ್ಮ ವಿಚಾರಧಾರ ಪ್ರತಿಪಾದಿಸಿದವ ರು.ಪಂಡಿತ ಸೂಗವೀರ ಶರ್ಮ ಅವರ ಜೀವನ ಕಥನ ರಚಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಅವರ ಇಂದಿನ ಹಳೆ ತಲೆ ಮಾರಿನ ಅನುಭವ ಕಥನವನ್ನು ತಮ್ಮ ಜೀವನಾನುಭವವ ನ್ನು ಆತ್ಮಕಥೆಗಳಲ್ಲಿ ನಿರೂಪಿಸಿದರೆ ಉತ್ತಮ ಹಾಗೂ ಈ ಭಾಗದ ಮಹಿಳಾ ಚರಿತ್ರೆ ಕಟ್ಟಿಕೊಟ್ಡಂತಾಗುತ್ತದೆ.ಅವರಿಗೆ ಅಭಿನಂದನೆಗಳು.
ಲೇಖಕರು: ಶಾಮರಾವ್ ಮಾಡ್ಯಾಳ,ಸಂಶೋಧನಾ ವಿದ್ಯಾರ್ಥಿ, ಕವನ ಅಧ್ಯಯನ ಸಂಸ್ಥೆ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ