ರಾಜ್ಯ ಮಟ್ಟದ 5 ನೆಯ ವಚನ ಸಾಹಿತ್ಯ ಸಮ್ಮೇಳನದ ಕರಪತ್ರ ಬಿಡುಗಡೆ
ರಾಜ್ಯ ಮಟ್ಟದ 5 ನೆಯ ವಚನ ಸಾಹಿತ್ಯ ಸಮ್ಮೇಳನದ ಕರಪತ್ರ ಬಿಡುಗಡೆ
ಕರ್ನಾಟಕ ರಾಜ್ಯ ವಚನ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೀದರನ ಸಹಯೋಗದಲ್ಲಿ ಇದೇ ತಿಂಗಳ 28 ರಂದು ಡಾ.ಚನ್ನ ಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ 5 ನೆಯ ವಚನ ಸಾಹಿತ್ಯ ಸಮ್ಮೇಳನದ ಕರಪತ್ರವನ್ನು ವಚನ ಸಾಹಿತ್ಯ ಪರಿಷತ್ ಕಮಲನಗರ ತಾಲೂಕು ಘಟಕದ ಗೌರವಾಧ್ಯಕ್ಷರಾದ ಪೂಜ್ಯ ಮಹಾದೇವಮ್ಮಾ ತಾಯಿ ಮತ್ತು ಬಸವ ಭಕ್ತರು ಸೇರಿ ಬಿಡುಗಡೆ ಮಾಡಿದರು.
ಪೂಜ್ಯ ಮಹಾದೇವಮ್ಮಾ ತಾಯಿಯವರು ಮಾತನಾಡಿ ಶರಣರ ನಾಡಿನಲ್ಲಿ ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಿರೋದು ಬಹಳ ಸಂತೋಷದ ವಿಷಯವಾಗಿದೆ.ಪ್ರಯುಕ್ತ ಶರಣ ಬಾಂಧವರು ಕುಟುಂಬ ಸಮೇತರಾಗಿ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಶರಣರ ಬಗ್ಗೆ ಮತ್ತು ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಅನುಭವವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಜಗತ್ತಿಗೆ ಸಂಸತಿನ ಪರಿಕಲ್ಪನೆಯನ್ನು ಮೊದಲಿಗೆ ಅರಿವು ಮಾಡಿಕೊಟ್ಟ ನಮ್ಮ ಜಿಲ್ಲೆಯ ಶರಣರ ಕೊಡುಗೆಯಾಗಿದೆ.ಇಲ್ಲಿಗೆ ದೇಶ, ವಿದೇಶಗಳ ನಾನಾ ಭಾಗಗಳಿಂದ ಶರಣರು ಆಗಮಿಸಿ ಅನುಭವ ಮಂಟಪದಲ್ಲಿ ಸಮಾನತೆಯ ತತ್ವವನ್ನು ಸಾರಿರುವರು. ಅಂದು ಅವರಾಡಿದ ಸರಳ ಮಾತುಗಳೇ ವಚನಗಳು ಆಗಿವೆ.ಆ ವಚನಗಳೆಲ್ಲವೂ ನಮ್ಮ ಬದುಕಿನ ದಾರಿ ದೀಪಗಳಾಗಿವೆ.ಇಂತಹ ಪವಿತ್ರ ಬಸವ ಭೂಮಿಯಲ್ಲಿ ರಾಜ್ಯ ಮಟ್ಟದ ಐದನೆಯ ವಚನ ಸಾಹಿತ್ಯ ಸಮ್ಮೇಳನವು ಡಾ.ಸಿ.ಸೋಮಶೇಖರವರ ಸರ್ವಾಧ್ಯಕ್ಷತೆಯಲ್ಲಿ,ನಾಡೋಜ ಡಾ.ಪರಮ ಪೂಜ್ಯ ಬಸವಲಿಂಗ ಪಟ್ಟದೇವರ ದಿವ್ಯ ಸಾನಿಧ್ಯದಲ್ಲಿ ಮತ್ತು ಮಹಾಂತೇಶ ಸ್ವಾಮಿಜಿ ಇಳಕಲ್ , ಗುರು ಬಸವ ಪಟ್ಟದೇವರರು ಹಿರೇಮಠ ಸಂಸ್ಥಾನ ಭಾಲ್ಕಿ ಶ್ರೀಗಳ ದಿವ್ಯ ನೇತೃತ್ವದಲ್ಲಿ ಹಾಗೂ ವಿವಿಧ ಮಠಗಳ ಮಠಾಧೀಶರಗಳು, ಜನಪ್ರತಿನಿಧಿಗಳು,ಸಾಹಿತಿಗಳು,ಆಧುನಿಕ ವಚನಕಾರರ ಉಪಸ್ಥಿತಯಲ್ಲಿ ಈ ಕಾರ್ಯಕ್ರಮವು ಜರುಗಲಿದು, ಅದೇ ರೀತಿ ಬಸವ ತತ್ವಕಾಗಿ,ಸಮಾಜಕಾಗಿ ಸೇವೆ ಸಲ್ಲಿಸಿದ ಗಣ್ಯರಿಗೆ ''ಶರಣ ಬಂಧು ಪ್ರಶಸ್ತಿ'' ''ಬಸವಶ್ರೀ ಪ್ರಶಸ್ತಿ,'' "ಅಕ್ಕಮಹಾದೇವಿ ಪ್ರಶಸ್ತಿ" "ಗುರು ಮಹಾಂತೇಶ ಸ್ವಾಮಿ ಪ್ರಶಸ್ತಿ"ಗಳು ಪ್ರದಾನ ಮಾಡಲಾಗುತ್ತಿದೆ.
ಸಮ್ಮೇಳನದಲ್ಲಿ ವಚನ ಚಿಂತನ ಗೋಷ್ಠಿ,ವಚನ ಸಾಂಸ್ಕೃತಿಕ ಚಟುವಟಿಕೆ,ವಚನ ಗಾಯನ, ಸಾಮೂಹಿಕ ಗಾಯನ ಕಾರ್ಯಕ್ರಮಗಳು ನಡೆಯಲಿವೆ.
ಆದ ಕಾರಣ ಬಸವ ಭಕ್ತರೆಲ್ಲರೂ ಇಂತಹ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಮಲನಗರ ತಾಲೂಕು ವಚನ ಸಾಹಿತ್ಯ ಪರಿಷತ ಘಟಕದ ಅಧ್ಯಕ್ಷರಾದ ಮಹಾದೇವ ಮಡಿವಾಳರವರು ಕಾರ್ಯಕ್ರಮಕ್ಕೆ ಹಾಗೆ ಆಗಮಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಮಲನಗರ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಲಿಂಗಾನಂದ ಮಹಾಜನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲಾಬಾಯಿ ಮಹೇಶ ಸಜ್ಜನಶೆಟ್ಟಿ,ಉದ್ಯಮಿಗಳಾದ ರಾಜಕುಮಾರ ಬಿರಾದಾರ, ಪ್ರಭುರಾವ ಬಿರಾದಾರ,ಧೂಳಪ್ಪಾ ನಿಟ್ಟೂರೆ,ಪ್ರಕಾಶ ಸೊಲ್ಲಾಪುರೆ,ಸುರೇಶ ಸೋಲ್ಲಾಪುರೆ,ಕಲ್ಲೇಶ ಉದಗೀರೆ,ಮಹೇಶ ಸಜ್ಜನಶೆಟ್ಟಿ,ನಾಗನಾಥ ಮಠ, ರಾಜಕುಮಾರ ಪಾಟೀಲ, ಮಹಾದೇವ ನಿಟ್ಟೂರೆ,ಶ್ಯಾಮ ಬಿರಾದಾರ,ರಮೇಶ ಬಿರಾದಾರ,ಶಿವಗಂಗಾ ಹಳಕಾಯಿ,ವರ್ಷಾ ಬಿರಾದಾರ ಮತ್ತು ಕಲ್ಲೇಶ್ವರ ಅಕ್ಕನ ಬಳಗ ಸಮಸ್ತ ಭಜನಾ ಮಂಡಳಿಯ ಬಳಗದ ಶರಣಿಯರು, ಮುಂತಾದವರು ಉಪಸ್ಥಿತರಿದ್ದರು.
ಕಮಲನಗರ ವಚನ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿಗಳಾದ ಮಡಿವಾಳಪ್ಪಾ ಮಹಾಜನರವರು ಸ್ವಾಗತಿಸಿದರು.ಕೋಶಾಧ್ಯಕ್ಛರಾದ ಪ್ರಭುರಾವ ಕಳಸೆ ನಿರೂಪಿಸಿದರು.ಪ್ರಭುರಾವ ಬಿರಾದಾರ ವಂದಿಸಿದರು.