ಪತ್ರಕರ್ತರು: ಸಮಾಜದ ಕಣ್ಣು, ಕಿವಿ ಮತ್ತು ಧ್ವನಿ

ಪತ್ರಕರ್ತರೆಂದರೆ ?
ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಕರೆಯುತ್ತಾರೆ. ಪತ್ರಕರ್ತರು ಸ್ಥಳಿಯ ಮತ್ತು ಹೊರಗಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾರೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಭೂಗತ ಜಗತ್ತಿನ ಷಡ್ಯಂತ್ರಗಳು ಸೇರಿದಂತೆ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾರೆ. ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ.
ಇನ್ನು ಪತ್ರಕರ್ತರು ಎಂದರೆ ಪಠ್ಯ, ಆಡಿಯೋ ಅಥವಾ ಚಿತ್ರಗಳ ರೂಪದಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ಸುದ್ದಿಗೆ ಅರ್ಹವಾದ ರೂಪದಲ್ಲಿ ಸಂಸ್ಕರಿಸಿ ಸಾರ್ವಜನಿಕರಿಗೆ ಪ್ರಸಾರ ಮಾಡುವ ವ್ಯಕ್ತಿಯೇ ಪತ್ರಕರ್ತರು ಎಂದು ಕರೆಯುತ್ತಾರೆ. ಇದನ್ನು ಪತ್ರಿಕೋದ್ಯಮ ಸಹ ಎಂದು ಕರೆಯಲಾಗುತ್ತದೆ.
ಪ್ರಸ್ತುತ ದಿನಗಳಲ್ಲಿ
ಪತ್ರಕರ್ತರು ಇಂದಿನ ಮುದ್ರಿತ ಸ್ವರೂಪಗಳಾದ ಸುದ್ದಿಪತ್ರಿಕೆ/ಮ್ಯಾಗಜೀನ್ ವಿಭಾಗದಿಂದ ಹಿಡಿದು ರೇಡಿಯೊ, ಟೆಲಿವಿಷನ್ (ದೂರದರ್ಶನ),ಅಂತರಜಾಲ ವಿಭಾಗದವರೆಗೂ ಹರಡಿಕೊಂಡಿದ್ದಾರೆ. ಪತ್ರಿಕೋದ್ಯಮದಲ್ಲಿ ಪತ್ರಕರ್ತ (ವರದಿಗಾರ)ನಲ್ಲದೇ ಸಂಪಾದಕ, ಅಂಕಣಕಾರ, ಛಾಯಾಗ್ರಾಹಕ ಕೂಡ ಆಗಿ ತಮ್ಮದೇ ಆದ ವಿಶಿಷ್ಟ ಕೊಡುಗೆ ಜಾಗತಿಕ ಪ್ರಪಂಚಕ್ಕೆ ನೀಡುತ್ತಿದ್ದಾರೆ.
ಈ ಕಾಲದಲ್ಲಿ ಪತ್ರಕರ್ತರ ಪಾತ್ರವು ಬಹಳ ಪ್ರಾಮುಖ್ಯತೆ ಪಡೆದಿದೆ. ಪರಿಸರ, ಕೃಷಿ, ಶಿಕ್ಷಣ, ಅಭಿವೃದ್ಧಿ,ಹಾಗೂ ಆರೋಗ್ಯ ಸಂಬಂಧಿತ ಜಾಗೃತಿಗಳನ್ನು ಜನರಿಗೆ ತಲುಪಿಸುವ ದಿಕ್ಕಲ್ಲಿಯೂ ಕೆಲಸ ಮಾಡುತ್ತಾರೆ. ಪರಿಸರ ಮಾಲಿನ್ಯ, ತೈಲದ ದುರ್ಬಳಕೆ, ಆಮ್ಲವೃಷ್ಟಿ, ಅನಾಚಾರಗಳು, ಕಂದಾಚಾರಗಳು, ಬ್ರಷ್ಟಾಚಾರಗಳು ಸೇರಿದಂತೆ ಇತ್ಯಾದಿಗಳ ಕುರಿತ ಹಾಗೂ ವಿಶೇಷವಾಗಿ ಸ್ಥಳೀಯ ವಿಷಯಗಳನ್ನೂ ಪತ್ರಕರ್ತರು ವರದಿ ಮಾಡುವ ಮುಖಾಂತರ ಸಮಾಜದ ಪ್ರಮುಖ ಅಂಗವಾಗಿ ಕೆಲಸ ಮಾಡುವುದು ಕಾಣುತ್ತಿದ್ದೇವೆ. ಇದರಿಂದ ಸಮಾಜದ ಸಾಮಾನ್ಯ ನಾಗರಿಕರು ನಿತ್ಯದ ಜೀವನದ ಜೊತೆ ಸುದೀರ್ಘ ಕಾಲದ ಪರಿಣಾಮಗಳ ಕುರಿತು ಅರಿವು ಪಡೆದು ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ.
ಈ ನಿಟ್ಟಿನಲ್ಲಿ ಪತ್ರಿಕ ವಿಭಾಗದ ಪ್ರಮುಖ ಅಂಶಗಳು ಗಮನಿಸಿ:--
ವರದಿಗಾರರು ಎಂದರೆ : ಸ್ಥಳೀಯ ಮೂಲ ವಿಷಯಗಳನ್ನು ಬಳಸಿಕೊಂಡು ಪ್ರಸ್ತುತಪಡಿಸಲು ಮಾಹಿತಿಯನ್ನು ಸಂಶೋಧಿಸುವ , ಬರೆಯುವ ಮತ್ತು ವರದಿ ಮಾಡುವ ಒಂದು ರೀತಿಯ ಪತ್ರಕರ್ತರು. ಹಾಗೆಯೇ ಸಂದರ್ಶನಗಳನ್ನು ನಡೆಸುವುದು, ಮಾಹಿತಿ ಸಂಗ್ರಹಣೆ ಮತ್ತು ಲೇಖನಗಳನ್ನು ಬರೆಯುವುದನ್ನು ಒಳಗೊಂಡಿದೆ.
ಅಲ್ಲದೆ ಒಂದು ವಿಷಯ, ಪ್ರದೇಶ ಅಥವಾ ಸ್ಥಳದಲ್ಲಿ ಪರಿಣತಿ ಹೊಂದಿರುವ ಆನ್-ದಿ-ಸ್ಕೇನ್ ವರದಿಗಾರ ಕೆಲಸ. ಸಂಶೋಧನೆ, ತನಿಖೆ, ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಕಥೆಗಳನ್ನು ಬರೆಯುವುದು, ಇತ್ಯಾದಿ ಕೆಲಸ.
ಸುದ್ದಿ ಸಂಗ್ರಹಣೆ:
ಪತ್ರಕರ್ತರು ವಿವಿಧ ಮೂಲಗಳಿಂದ ಸುದ್ದಿಗಳನ್ನು ಸಂಗ್ರಹಿಸುತ್ತಾರೆ, ಸಂದರ್ಶನಗಳನ್ನು ಮಾಡುತ್ತಾರೆ ಮತ್ತು ಸಂಶೋಧನೆ ನಡೆಸುತ್ತಾರೆ.
ಸುದ್ದಿ ಬರೆಯುವುದು:
ಪತ್ರಕರ್ತರು ಸಂಗ್ರಹಿಸಿದ ಮಾಹಿತಿಯನ್ನು ಲೇಖನಗಳು, ಅಂಕಣಗಳು, ವರದಿಗಳು ಅಥವಾ ಇತರ ಮಾಧ್ಯಮ ಸ್ವರೂಪಗಳಲ್ಲಿ ಬರೆಯುತ್ತಾರೆ.
ಮಾಹಿತಿ ತಲುಪಿಸುವುದು:
ಪತ್ರಕರ್ತರು ಸಾರ್ವಜನಿಕರಿಗೆ ಸುದ್ದಿಗಳನ್ನು ತಲುಪಿಸಲು ವಿವಿಧ ಮಾಧ್ಯಮಗಳನ್ನು ಬಳಸುತ್ತಾರೆ.
ಜವಾಬ್ದಾರಿ:
ಪತ್ರಕರ್ತರು ಸಮಾಜದಲ್ಲಿ ನಡೆಯುವ ಪ್ರಮುಖ ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಅವರನ್ನು ಜಾಗೃತರನ್ನಾಗಿ ಮಾಡುವುದು ಅವರ ಪ್ರಮುಖ ಜವಾಬ್ದಾರಿ ಆಗಿದೆ.
ಆದ್ಯ ಕರ್ತವ್ಯ:
ಪತ್ರಕರ್ತರು ಸರ್ಕಾರದ ಮೇಲೆ ಮತ್ತು ಇತರ ಸಂಸ್ಥೆಗಳ ಮೇಲೆ ತಮ್ಮ ಜವಾಬ್ದಾರಿ ನಿರ್ವಹಿಸಿ ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ.
ಕೃಷಿ/ಶಿಕ್ಷಣ/ಆರೋಗ್ಯ:
ಪತ್ರಕರ್ತರು ಸಾರ್ವಜನಿಕರಿಗೆ ವಿವಿಧ ವಿಷಯಗಳ ಬಗ್ಗೆ ಮನವರಿಕೆ ಮಾಡಿ ಕೊಡುತ್ತಾರೆ. ಜೊತೆಗೆ ಕೃಷಿ/ಶಿಕ್ಷಣ/ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಾರೆ.
ಪ್ರಜಾಪ್ರಭುತ್ವ:
ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅತ್ಯಗತ್ಯವಾಗಿದೆ. ಹಾಗೂ ಇಂದಿನ ದಿನಗಳಲ್ಲಿ ಇದು ಜನಸಾಮಾನ್ಯರಿಗೆ ಅವಶ್ಯವಾಗಿದೆ.
ಮಾಧ್ಯಮಗಳು ಮತ್ತು ಪತ್ರಕರ್ತರು ತಮ್ಮ ಸಮಾಜದಲ್ಲಿ ಯಾವ ನಿರೂಪಣೆಗಳು ಪ್ರಬಲವಾಗುತ್ತವೆ ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಪತ್ರಿಕೋದ್ಯಮದ ವಿಭಿನ್ನ ಪಾತ್ರಗಳು :--
ವೈಶಿಷ್ಟ್ಯ ಬರಹಗಾರರು - ವರದಿಗಾರನಂತೆಯೇ ಪಾತ್ರವನ್ನು ಹೊಂದಿದ್ದಾರೆ ಆದರೆ ವಿಷಯಗಳನ್ನು ಹೆಚ್ಚು ಆಳವಾಗಿ ಬರೆಯುತ್ತಾರೆ ಮತ್ತು ಅವರ ಲೇಖನಗಳು ಸಾಮಾನ್ಯವಾಗಿ ಉದ್ದವಾಗಿರುತ್ತವೆ.
ಸುದ್ದಿ ಸಂಪಾದಕರು - ಸುದ್ದಿ ಸಂಪಾದಕರು ಪತ್ರಕರ್ತರನ್ನು ನಿರ್ವಹಿಸುತ್ತಾರೆ ಮತ್ತು ಯಾರು ಯಾವ ಕೆಲಸ ಮಾಡುತ್ತಾರೆ ಮತ್ತು ಯಾವ ಸುದ್ದಿಗಳನ್ನು ಒಳಗೊಂಡಿರುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ. ಅವರು ಕಾನೂನು ಅಥವಾ ನೈತಿಕ ಸಮಸ್ಯೆಗಳಿಗಾಗಿ ಪ್ರತಿಗಳನ್ನು ಪರಿಶೀಲಿಸುತ್ತಾರೆ.
ಉಪ-ಸಂಪಾದಕರು - ವರದಿಗಾರರು ಸಲ್ಲಿಸಿದ ಪ್ರತಿಗಳನ್ನು ಪರಿಶೀಲಿಸುತ್ತಾರೆ ಮತ್ತು ಅವರು ಚೆನ್ನಾಗಿ ಓದಿದ್ದಾರೆ ಮತ್ತು ಕಾಗುಣಿತ, ವ್ಯಾಕರಣ ಮತ್ತು ಸಂಗತಿಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಪ್ರಕಟಣೆಯ ವಿನ್ಯಾಸ, ವಿನ್ಯಾಸ ಮತ್ತು ಪದ ಮಿತಿಗೆ ಸರಿಹೊಂದುವಂತೆ ಅವರು ಅವುಗಳನ್ನು ಸಂಪಾದಿಸುತ್ತಾರೆ.
ನಿರೂಪಕರು ಅಥವಾ ಸುದ್ದಿ ನಿರೂಪಕರು - ರೇಡಿಯೋ ಅಥವಾ ದೂರದರ್ಶನದಲ್ಲಿ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಾರೆ, ಸಾಮಾನ್ಯವಾಗಿ ನೇರ ಪ್ರಸಾರ. ಅವರು ಆಟೋಕ್ಯೂ ಅನ್ನು ಓದಿ ಅತಿಥಿಗಳನ್ನು ಸಂದರ್ಶಿಸಬಹುದು.
ಸಂಪಾದಕರು - ಪ್ರಕಟವಾದ ವಿಷಯಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮತ್ತು ಅಂತಿಮ ನಿರ್ಧಾರ ಇವರೇ ತೆಗೆದುಕೊಳ್ಳುತ್ತಾರೆ.
ಹೀಗೆ ಪತ್ರಿಕೋದ್ಯಮದ ಪ್ರಮುಖ ಅಂಶಗಳು ಹಾಗೂ ವಿಭಿನ್ನ ಪಾತ್ರಗಳು ಸರಿಯಾಗಿ ನಿಭಾಯಿಸಿಕೊಂಡು ಸಾಗಿದಾಗಲೇ ಮಾತ್ರ ಪತ್ರಿಕೋದ್ಯಮದಲ್ಲಿ ಬೆಳೆಯಲು ಸಾಧ್ಯ ಎನ್ನಬಹುದಾಗಿದೆ.
ಈ ನಿಟ್ಟಿನಲ್ಲಿ ಪತ್ರಕರ್ತರಾಗಿ, ನಾವು ನಮ್ಮ ಅಧಿಕಾರದ ಸ್ಥಾನದ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಬೇಕು. ಅದರ ಅಸ್ತಿತ್ವವನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಅದರೊಂದಿಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು.
ಅಂದಹಾಗೆ ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಕ್ಷೇತ್ರ.
ಅದಕ್ಕಾಗಿಯೇ ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಮತ್ತು ಸಮಾಜಕ್ಕೆ ಮುಖ್ಯವಾದ ವಿಷಯಗಳ ಬಗ್ಗೆ ವರದಿ ಮಾಡಬೇಕು. ಭ್ರಷ್ಟಾಚಾರ, ಅಪರಾಧ ಮತ್ತು ಇತರ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಹೆಚ್ಚು ವರದಿ ಮಾಡಿ, ಜಾಗೃತಿ ಮೂಡಿಸುವ ಕೆಲಸ ಮಾಡಲೇಬೇಕು.ಅಂದಾಗಲೇ ಮಾತ್ರ ಆ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ.
ಇನ್ನು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಿಕಾ ರಂಗದ ಜವಾಬ್ದಾರಿ ಮಹತ್ತರವಾದುದಾಗಿದೆ.
ವೃತ್ತಿಪರತೆ, ನಿಖರತೆ ಮತ್ತು ಸಮಗ್ರತೆಯೊಂದಿಗೆ ಪಕ್ಷಪಾತವಿಲ್ಲದ ಸುದ್ದಿಗಳನ್ನು ಬರೆಯುವುದು ಪತ್ರಕರ್ತರ ಮುಖ್ಯ ಗುರಿಯಾಗಿದೆ. ಪತ್ರಕರ್ತರ ಜವಾಬ್ದಾರಿ ಎಂದರೆ ಸಮಾಜಕ್ಕೆ ಸತ್ಯ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವುದು ಸೇರಿದಂತೆ ಪತ್ರಕರ್ತರು ಸಮಾಜದ ಪ್ರಮುಖ ಅಂಗವಾಗಿರುವುದನ್ನು ಯಾವತ್ತೂ ಮರೆಯಬಾರದು. ಪತ್ರಕರ್ತರು ಯಾವಾಗಲೂ ಸತ್ಯವನ್ನು ಹುಡುಕುವ ಮತ್ತು ಅದನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿರಬೇಕು ಮತ್ತು ಸಮಾಜದ ಕಾವಲುಗಾರರಾಗಿ ಕಾರ್ಯನಿರ್ವಹಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು.
ಇಷ್ಟೇ ಅಲ್ಲದೆ
ಪ್ರಾಮಾಣಿಕ, ವಿಶ್ವಾಸಾರ್ಹ ಮತ್ತು ಸಮಗ್ರತೆಯಿಂದ.
ಮೂಲಭೂತ ಸೌಕರ್ಯ ವಂಚಿತರಾಗಿರುವ ಸಮಾಜದ ಬಗ್ಗೆ ಸರ್ಕಾರದ ಗಮನ ಸೆಳೆಯವ ಪ್ರಯತ್ನ ವಾಗಬೇಕು.ಸಮಾಜಕ್ಕೆ ಯಾವ ಸುದ್ದಿ ಶೀಘ್ರವಾಗಿ ತಲುಪಬೇಕೋ ಅದನ್ನು ಪ್ರಕಟಿಸುವ ಬದ್ಧತೆ ಬೆಳೆಸಿಕೊಳ್ಳಬೇಕು. ಅಂತೆಯೇ
ಸಮಾಜದ ಆಗುಹೋಗುಗಳನ್ನು ತಿಳಿಸಿ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಪತ್ರಕರ್ತರಿಂದ ಆಗಲೇಬೇಕು. ನೊಂದವರ ದನಿಯಾಗಿ ಕೆಲಸ ಮಾಡುವ ಹೆಚ್ಚಿನ ಜವಾಬ್ದಾರಿ ಸಹ ಪತ್ರಕರ್ತರ ಮೇಲಿದೆ. ಪತ್ರಕರ್ತರು ಎಲ್ಲಾ ವಿಷಯಗಳನ್ನು ಅರಿಯ ಬೇಕಾದರೆ ಅಧ್ಯಯನ ಶೀಲರಾಗಿ ಜ್ಞಾನದ ವಿಸ್ತರತೆಯನ್ನು ಹೊಂದಬೇಕು, ಸುದ್ದಿಯ ಮಾಹಿತಿಗಳಲ್ಲಿ ವೇಗ ಇರಬೇಕು. ಸತ್ಯ ಶೋಧನೆಯ ದೊಡ್ಡ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎನ್ನುವುದು ಯಾವತ್ತೂ ಮರೆಯಬಾರದು. ವಾಸ್ತವಾಂಶ ವರದಿಯಲ್ಲಿ ನಿಷ್ಠೂರತೆಗಳನ್ನು ಎದುರಿಸುವಂತ ಶಕ್ತಿ ಸದಾ ಕಾಲ ಹೊಂದಿರಬೇಕು,
ಕೊನೆಯ ಮಾತು:- ಪತ್ರಕರ್ತರು ಸಮಾಜದ ನೈತಿಕ ಮತ್ತು ಕಾನೂನು ಚೌಕಟ್ಟಿನಲ್ಲಿ ಹಾಗೂ ಸಮಾಜದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ತಮ್ಮ ಕೆಲಸದಲ್ಲಿ ಸತ್ಯ, ನ್ಯಾಯ ಮತ್ತು ನಿಖರತೆಗೆ ಬದ್ಧರಾಗಿರಬೇಕು. ಪ್ರಾಮಾಣಿಕ ಮತ್ತು ನಿಖರ ಮಾಹಿತಿಯನ್ನು ಸಮಾಜಕ್ಕೆ ಒದಗಿಸಬೇಕು. ನೈತಿಕ ಮೌಲ್ಯಗಳನ್ನು ಪಾಲಿಸಬೇಕು ಮತ್ತು ಸಮಾಜಕ್ಕೆ ಮಾದರಿಯಾಗಿರಬೇಕು.
ಸಂಗಮೇಶ ಎನ್ ಜವಾದಿ
ಬರಹಗಾರರು, ಪರಿಸರವಾದಿ.ಬೀದರ ಜಿಲ್ಲೆ.