ಹಣಮಂತಪ್ಪಾ ಪಾಟೀಲ

ಹಣಮಂತಪ್ಪಾ ಪಾಟೀಲ

ಕನ್ನಡ ಕುವರ ಲಿಂ.ಹಣಮಂತಪ್ಪಾ ಪಾಟೀಲ

 ಶರಣ ತತ್ವವನ್ನು ತನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡು ಅಪ್ಪಟ ಕನ್ನಡಿಗರಾಗಿ ಕನ್ನಡವೇ ತನ್ನ ಬದುಕಿನ ಉಸಿರಾಗಿ ಸರಳತೆಯನ್ನು ಮೈಗುಡಿಸಿಕೊಂಡಿದ್ದರು ಹಣಮಂತಪ್ಪಾ ಪಾಟೀಲರವರು.

 ಮೂಲತಹ ಬೀದರ ತಾಲೂಕಿನ ಅಮದಲ್ ಪಾಡ ಗ್ರಾಮದ ತಂದೆ ಮಾಣಿಕಪ್ಪ ತಾಯಿ ಸಂಗಮ್ಮ ಪೊಲೀಸ್ ಪಾಟೀಲ್ ದಂಪತಿಗಳ ಮಗನಾಗಿ 15.3.1942ರಂದು ಜನಸಿದರು.

ಇವರು ಮಂಗಲಪೇಟನ ಪ್ರಾಥಮಿಕ, ಭೋವಿ ಗಲ್ಲಿಯಲ್ಲಿ ಮಾಧ್ಯಮಿಕ, ಪ್ರೌಢ ಹಾಗೂ ಕಾಲೇಜು ಪದವಿ ಬಿ. ವಿ. ಬಿ. ಕಾಲೇಜನಲ್ಲಿ ಪೂರ್ಣಗೊಳಿಸಿದರು 

ಇಂಟರ್ಷಿಪ್ ನಲ್ಲಿ (ಟಿ ಸಿ. ಎಚ್ )ಉತ್ತಿರ್ಣರಾಗಿ ಚಿಟ್ಟಾ, ಅಲಿಯಾಬಾದ ಹಾಗು ಗಾದಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಬಿಸಿದರು. ವೃತ್ತಿಯ ಜೊತೆಗೆ ಬಿ. ಎಡ್ ಹಾಗು ಎಲ್ ಎಲ್ ಬಿ ಪೂರ್ಣಗೊಳಿಸಿದರು. *ಕರ್ನಾಟಕ ಕಾಲೇಜನಲ್ಲಿ ಭಾಷಾ ಭೋದಕ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ದಂತಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿ ದ್ದರು.

ಹಣಮಂತಪ್ಪನವರು ಬಡತನ ದಲ್ಲಿ ಹುಟ್ಟಿ ಬೆಳೆದು ಅನುಭವ ಹೊಂದಿದವರು. ಕುಟುಂಬದಲ್ಲಿನ ಕಷ್ಟಗಳನ್ನು ಅರಿತವರಾಗಿದ್ದರು. ಇವರ ಕಲಿಕೆಯ ಸಂಧರ್ಭದಲ್ಲಿ ಕಂಟೆಪ್ಪ ಶಿಕ್ಷಕರು ಆಸರೆಯಾಗಿದ್ದರು. ಬಡತನ ಅರಿತ ಇವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಸಹಕಾರ ನೀಡಿದ್ದರು.

ಇವರು ಸಾಮಾಜಿಕ ಧಾರ್ಮಿಕ ಸಂಸ್ಕೃತಿಕ ಹಾಗು ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

 ಬೀದರ ನಯಕಾಮನ ಎದುರಗಡೆ  ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಟಾಪಸಲು ಕಾರಣಿಕರ್ತರಾಗಿದ್ದರು.ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವಲ್ಲಿ ಇವರ ಪಾತ್ರ ಕಂಡು ಬರುತ್ತದೆ. 

  ಹಣಮಂತಪ್ಪನವರ ಧರ್ಮ ಪತ್ನಿ ಶ್ರೀದೇವಿಯವರಿಗೆ ಇಬ್ಬರು ಮಕ್ಕಳು,ಶೇಶಿರೇಖಾರವರು ಜೇಸ್ಕಾಂನಲ್ಲಿ ಅಧಿಕಾರಿಯಾಗಿದ್ದು ಶಿವಕುಮಾರವರು ಹೈದ್ರಾಬಾದನ ಪ್ರತಿಷ್ಟಿತ ಕಂಪನಿಯಲ್ಲಿ ನಿರ್ದೇಶಕ ಕಾರ್ಯನಿರ್ವಹಿಸುತ್ತಿತ್ತಾದರೆ.

ಹಣಮಂತಪ್ಪನವರು ಪ್ರಜಾವಾಣಿ,ಡೆಕ್ಕನ್ನ್ ಹೆರಾಲ್ಡ್,ಟೈಮ್ಸ್ ಆಫ್ ಇಂಡಿಯಾ,ಜನ ಪರ ಪತ್ರಿಕೆಯ ಸಂಪಾದಕರಾಗಿ, ವರದಿಗಾರರಾಗಿ ಸಮಾಜದ ಅಂಕು ಡೊಂಕು ತಿದ್ದುವ ಕೆಲಸವನ್ನು ಇವರ ಬರವಣಿಗೆ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ..

ಹಿರಿಯ ಸಂಪಾದಕರಾದ ಎಸ್.ಕೆ. ಜೋಷಿ, ಸುಚೇತ ಸ್ವರೂಪ ಅವರೊಂದಿಗೆ ವಡಾನಾಟವಿತ್ತು.

ಹಣಮಂತಪ್ಪನವರು ಸುಮಾರು ಎಂಟು ವರ್ಷಗಳ ಕಾಲ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಂಧರ್ಭದಲ್ಲಿ ಪ್ರೊ. ಜಿ. ವೆಂಕಟಸುಬ್ಬಯಮರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಬೀದರ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. 

ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದ ಸ್ಪೀಕರ್ ಶ್ರೀಮತಿ ನಾಗರತ್ನಮ್ಮಾ ಅವರು ಅಧ್ಯಕ್ಷತೆಯನ್ನು ವಹಿಸಸಿದರು. ಜಿಲ್ಲಾಧಿಕಾರಿ, ಪುಟ್ಟಸ್ವಾಮಿಯವರ ಧರ್ಮಪತ್ನಿಯಾದ ಶ್ರೀಮತಿ ಲಲಿತಾವರನ್ನು ಸಮ್ಮೇಳನದ ಸರ್ವಧ್ಯಕ್ಷರಾಗಿ ಮಾಡಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. 

ನಂತರ ಜಾನಪದ ಕಲಾ ಸಮ್ಮೇಳನ ಕಾರ್ಯಕ್ರಮವನ್ನು ಕೂಡ ಮಾಡಿದ್ದರು. 

ಲಿಂಗಾಯತ ಸಮಾಜ ಕಾರ್ದರ್ಶಿಯಾಗಿ,

ಬಂಡಾಯ ಸಾಹಿತ್ಯ ಸಂಘ ಮತ್ತು ಸಂಸ್ಥೆಗಳ ಸದಸ್ಯರಾಗಿ 

ಪಶುಸಂಗೋಪನಾ ಇಲಾಖೆಯ ಸದಸ್ಯರಾಗಿ,

ಭಾಲ್ಕಿ ಹಿರೇಮಠ ಸಂಸ್ತಾನದ ಖಾಯಂ ಟ್ರಷ್ಟಿಯಾಗಿ,

ಸಿಧಾರ್ಥ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ 

ರಾಣಿ ಕಿತ್ತೂರ ಚೆನ್ನಮ್ಮ ಶಾಲೆ :-ಮೊದಲ ಅಧ್ಯಕ್ಷರಾಗಿ 

ಭಾರತೀಯ ಕುಟುಂಬ ಕಲ್ಯಾಣ ಯೋಜನೆ ಸಂಸ್ತಾಪಕ ಆಜೀವ ಸದಸ್ಯರು ಹಾಗು ಅನೇಕ ಇನ್ನಿತರ ಸಂಘ ಸಂಸ್ಥೆಗಳ ಪಧಾಧಿಕರಿಗಳಾಗಿ ಸಮಾಜದ ಕೆಲಸ ಮಾಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

1)ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸರ್ವಾಧ್ಯಕ್ಷರಾಗಿ ಆಯ್ಕೆ ಗೌರವ.

2)ಆದರ್ಶ ಶಿಕ್ಷಕ:-- ಕರ್ನಾಟಕ ಸ್ಟೇಟ್ ಟೀಚರ್ ಬೆನಿಫಿಟ್ ಫ್ಯoಡ ಬೆಂಗಳೂರು (5.9.92)

3)ಡಿ. ವಿ. ಜಿ. ಪ್ರಶಸ್ತಿ 25.5.2009

4)ಆದರ್ಶ ದಂಪತಿಗಳು :--ಜಿಲ್ಲಾ ಬಸವ ಕೇಂದ್ರ ಬೀದರ

5)ಸಮಾಜ ರತ್ನ ಪ್ರಶಸ್ತಿ :-- ದೇಶಪಾಂಡೆ ಪ್ರತಿಷ್ಟಾನ ಸಂಸ್ಥಾನ, ಕನ್ನಡ ಸಾಹಿತ್ಯ ಪರಿಷತ್, ದಾಸ ಸಾಹಿತ್ಯ ಪರಿಷತ್, ಮುಂತಾದ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದರು. ಇವರು ಜೀವಿತಾವಧಿಯಲ್ಲಿ ಸಾಮಾಜಿಕ, ಧಾರ್ಮಿಕ, ಸಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡಗೆಯನ್ನು ನೀಡಿದ್ದಾರೆ. ಅವರು ಇಲ್ಲದಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ ಅಚ್ಚಳಿಯದೆ ಉಳಿದಿದೆ.ಅವರ ಸೇವಾ ಮನೋಭಾವನೆಯನ್ನು ನಾವು ಇಂದಿಗೂ ಸ್ಮರಿಸಬಹುದು.

ಓಂಕಾರ ಪಾಟೀಲ 

(ಕಾರ್ಯದರ್ಶಿ :--ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ)