ಸಾಹಿತಿ ಪುಷ್ಪ ಚೀಕುರ್ತೆ

ಸಾಹಿತಿ ಪುಷ್ಪ ಚೀಕುರ್ತೆ

ಸಾಹಿತಿ ಪುಷ್ಪ ಚೀಕುರ್ತೆ 

 ನಿಷ್ಕಲ್ಮಶ ಮನಸಿನ ಅಪರೂಪ ಮಹಿಳಾ ಬರಹಗಾರ್ತಿ ಶ್ರೀಮತಿ ಪುಷ್ಪ ಚೀಕುರ್ತೆ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರೆ ,ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರಾಗಿ ಭಾಷಣಕಾರರಾಗಿ ಮೇರು ವ್ಯಕ್ತಿತ್ವ ಹೊಂದಿದವರು. ಇವರು, ಕಥೆ, ಕವಿತೆ, ಲೇಖನ ಬರೆಯುವ ಮೂಲಕ ಉತ್ತಮ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ.

 ಇವರು ಮೂಲತಃ ಕಮಲನಗರ ತಾಲೂಕಿನ ಖತಗಾಂವ ಗ್ರಾಮದ ಧರಣಿ ಮನೆತನದ ತಂದೆ ಘಾಳೆಪ್ಪ, ತಾಯಿ ಶಾಂತಮ್ಮ ಅವರ ಉದರಲಿ ಜನಸಿದರು.

ಪುಷ್ಪರವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ತಮ್ಮ ಸ್ವಗ್ರಾಮದಲ್ಲಿ , ಪಿ.ಯು.ಸಿ. ಮತ್ತು ಪದವಿ ಶಿಕ್ಷಣ ಕಮಲನಗರ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಪೂರ್ಣಗೊಳಿಸಿದರು.ನಂತರ ಬೀದರನ ಬಿಲಾಲ್ ಮಹಿಳಾ ಕಾಲೇಜ ನಲ್ಲಿ ಬಿ. ಎಡ್ ಪದವಿ ಪಡೆದರು.ಕರ್ನಾಟಕ ವಿಶ್ವ ವಿದ್ದ್ಯಾಲಯ ಧಾರವಾಡ ದಿಂದ ಎಂ. ಎ. ಪದವಿ(ಕನ್ನಡ ) ಪೂರ್ಣಗೊಳಿಸಿದರು

.ಶ್ರೀಮತಿ ಪುಷ್ಪರವರು ಬಾಲ್ಯದಿಂದಲೇ ಶಿಕ್ಷಕಿಯಾಗಬೇಕೆಂದು ಕನಸು ಕಂಡವರು. ಅವರ ಕನಸಿಗೆ ಪ್ರೇರಣೆ ಅವರ ಚಿಕ್ಕಪ್ಪ ಮಲ್ಲಿಕಾರ್ಜುನ ಧರಣಿಯವರು.

ಪುಷ್ಪಾ ಅವರು 1994 ರಲ್ಲಿ  ಕಮಲನಗರ ತಾಲೂಕಿನ ಡೋಣಗಾಂವ (ಎಂ ) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.

  ಪುಷ್ಪರವರು ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ )ಗ್ರಾಮದ ಚೀಕುರ್ತೆ ಮನೆತನದ ಅಶೋಕರವರನ್ನು ಬಾಳಸಂಗಾತಿಯಾಗಿ ತಮ್ಮ ವೈವಾಹಿಕ ಜೀವನ ಪ್ರಾರಂಭಿಸಿದರು.

 ಪುಷ್ಪಾ ಅವರಿಗೆ ಮಗಳು ವಾಣಿಶ್ರೀ ಸಾಫ್ಟ್ ವೇರ್ ಇಂಜನಿಯರ್ , ಮಗ ಡಿ ಫಾರ್ಮ್ಯಯಲ್ಲಿ ಓದುತ್ತಿದ್ದಾನೆ

ಅವರು ಅನೇಕ ಕಥೆ, ಕವನ , ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಮೂಡಿಬಂದಿವಿ. ಅವರ ಕೃತಿಗಳು ಸಹನಾ ಶೀಲ ಹೆಣ್ಣು, ಹೆಣ್ಣಿನ ಪ್ರಾಮುಖ್ಯತೆ ಅರಿವು ಸಾಮಾಜಕ್ಕಿರಲಿ,

ನಾವು ಮಹಿಳೆಯರು ಛಲವಿರಲಿ, ಕನ್ನಡಿಗರ ಮನೆದೇವರು ಡಾ. ಚೆನ್ನಬಸವ ಪಟ್ಟದೇವರು,ಬೆಲೆ ಕಟ್ಟಲಾಗದ ಮಾಣಿಕ್ಯ ""ಅಮ್ಮ "", ಸುಸಂಸ್ಕೃತ ಬದುಕಿನ ಆರಂಭದ ಬೆಳಕು "ತಾಯಿ"", ಭಾರತ ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯ ಪಾತ್ರ ಹೀಗೆ ಅನೇಕ ಮಹಿಳೆಯನ್ನು ವೈಚಾರಿಕ ಲೇಖನಗಳು ಪ್ರಕಟವಾಗಿವೆ.

ಭಾಲ್ಕಿ ,ಸಾವಿತ್ರಿ ಬಾಯಿ ಫೂಲೆ ಶಿಕ್ಷಕೀಯರ ಸಂಘದ ಗೌರವಾಧ್ಯಕ್ಷರಾಗಿ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಲೇಖಕಿಯರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ (ಸಾರ್ವಜನಿಕ ಶಿಕ್ಷಣ ಇಲಾಖೆ, ಜನ ಮೆಚ್ಚಿದ ಶಿಕ್ಷಕಿ(2004),ಕಲ್ಯಾಣ ಕರ್ನಾಟಕ ವಿಭೂಷಣ ಪ್ರಶಸ್ತಿ,ಸ್ವಾಮಿ ವಿವೇಕಾನಂದ ಪ್ರಶಸ್ತಿ,ಕನ್ನಡ ಸಿರಿ ಶಿಕ್ಷಕಿ ಪ್ರಶಸ್ತಿ,ಶಿಕ್ಷಣ ಸಿರಿ ಪ್ರಶಸ್ತಿ,ಸಾವಿತ್ರ ಬಾಯಿ ಪುಲೆ ಪ್ರಶಸ್ತಿ,ದೇಶಾoಶ ಹುಡಗಿ ಕಾವ್ಯ ಪ್ರಶಸ್ತಿ,

ಸಾಹಿತ್ಯ ಸಂಸ್ಕೃತಿಕ ಶಿಕ್ಷಣ ನೀವೇನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ಗೌರವಿಸಿ ಸನ್ಮಾನಿಸಿದೆ.

-ಓಂಕಾರ ಪಾಟೀಲ

(ಕಾರ್ಯದರ್ಶಿ :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ)