ದೀಪಾವಳಿ ಹಬ್ಬದ ಅಂಗವಾಗಿ ಫಟಾಕಿ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ: ಅಂಗಡಿ ಮಾಲೀಕರಿಗೆ ತಾಕೀತು

ದೀಪಾವಳಿ ಹಬ್ಬದ ಅಂಗವಾಗಿ ಫಟಾಕಿ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ: ಅಂಗಡಿ ಮಾಲೀಕರಿಗೆ ತಾಕೀತು

 ದೀಪಾವಳಿ ಹಬ್ಬದ ಅಂಗವಾಗಿ ಫಟಾಕಿ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ: ಅಂಗಡಿ ಮಾಲೀಕರಿಗೆ ತಾಕೀತು 

ಕಮಲನಗರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು ಈ ಸಭೆಯಲ್ಲಿ ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನು ತೆರೆಯಬೇಕು ಪರವಾನಗಿ ಇಲ್ಲದೆ ಫಟಾಕಿ ಅಂಗಡಿ ನಡೆಸುವಂತಿಲ್ಲ, ಕಮಲನಗರ ತಾಲೂಕಿನ ವಿವಿಧ ಹೋಬಳಿ ಕೇಂದ್ರದಲ್ಲಿ ಅಂಗಡಿಗಳನ್ನು ಕಂಡು ಬಂದರೆ ಪ್ರಕರಣದ ದಾಖಲಿಸಲಾಗುವುದು ಎಂದು ಠಾಣೆ ಪಿ ಎಸ್ ಐ ಚಂದ್ರಶೇಖರ ನಿರ್ಣೆ ಸ್ಥಳೀಯ ವ್ಯಾಪಾರಸ್ಥರಿಗೆ ತಾಕೀತು ಮಾಡಿದರು. 

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ತಾಲೂಕಿನ ಸುತ್ತಲಿನ ವಿವಿಧ ಅಂಗಡಿ ಮಾಲಿಕರಿಗೆ ಪಟಾಕಿ ಮಾರಾಟ ಮಾಲೀಕರಿಗೆ ಕರೆಸಿ ಮಾತನಾಡಿದ ಅವರು ಮುಂಬರುವ ದೀಪಾವಳಿ ಹಬ್ಬದ ಅಂಗವಾಗಿ ಹಾಕಲಾಗುವ ತಾತ್ಕಾಲಿಕ ಪಟಾಕಿ ಅಂಗಡಿ ಮಾಲೀಕರು ಮುಂಚಿತವಾಗಿ ಖಂಡಿತವಾಗಿ ಸಂಬಂಧ ಪಟ್ಟವರಿಂದ ಪರವಾನಿಗೆ ಪಡೆಯಬೇಕು. ಅಲ್ಲದೆ ಯಾವ ಪರವಾನಗೆ ಅವಧಿ ಮುಗಿದಿವೆಯೋ ಅವರು ಕೂಡಲೇ ಪರವಾನಿಯನ್ನು ನವೀಕರಿಸಬೇಕು ಎಂದು ಹೇಳಿದರು .

ತಾತ್ಕಾಲಿಕ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಅಂಗಡಿಗಳ ಸ್ಥಳಕ್ಕೆ ಪೊಲೀಸ್ ಇಲಾಖೆ ಕಂದಾಯ ಇಲಾಖೆ ಅಗ್ನಿಶಾಮಕ ದಳ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸುವುದು ಎಂದು ಹೇಳಿದರು. ಸಿ ಪಿ ಐ ಅಮರೆಪ್ಎಸ್ ಶಿವಬಲ್ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಅವರು ಮಾತನಾಡಿ, ಬೀದರ್ ಜಿಲ್ಲಾ ದಂತ ನಡೆಸಲಾಗುತ್ತಿರುವ ಪಟಾಕಿ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅವರ ಪರವಾನಗಿ ಹಾಗೂ ಅವರ ಸುರಕ್ಷತೆ ಕ್ರಮಗಳನ್ನು ಹೇಳಿಕೊಂಡಿರುವ ಬಗ್ಗೆ ದೃಡಿ ಕರಿಸಬೇಕು ಎಂದು ಸೂಚನೆ ನೀಡಿದರು. ಪ್ರತಿಯೊಂದು ಮಳಿಗೆಯಲ್ಲೂ ಸಂಬಂಧ ಪಟ್ಟ ಇಲಾಖೆ ನೀಡಿದ ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಯಾರು ಕೂಡ ಪರವಾಗಿ ಇಲ್ಲದೆ ಪಟಾಕಿ ಮಾರಾಟ ಮಾಡಬಾರದು ಪಟಾಕಿ ಅಂಗಡಿ ಹೊರತುಪಡಿಸಿ ಇದರ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುವುದು ಅಪರಾಧವಾಗಿರುತ್ತದೆ ಆದ್ದರಿಂದ ಯಾರೂ ಸಹ ಇಂಥ ಕಡೆಗಳಲ್ಲಿ ಪಟಾಕಿ ಮಾರಾಟ ಮಾಡಬಾರದು ಎಂದು ಎಚ್ಚರಿಸಿದರು ಲೈಸೆನ್ಸ್ ಇಲ್ಲದೆ ಪಟಾಕಿ ಇರುವುದು ಮಾಲೀಕರು ಕಂಡು ಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಮಾಲೀಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ್ ಖಾನಾಪುರ, ಮಹೇಶ್ ಸಜ್ಜನ್ ಸೇಟ್ಟಿ ಪ್ರಭು ಬೀರಾದಾರ ಕಾರ್ತಿಕ್ ಬಳಗ ಪ್ರದೀಪ್ ಕಾಳಿದಾಸ್ ನೀಲಕಂಠ ಸ್ವಾಮಿ ಮಂಜುನಾಥ್ ಬಾಬುರಾವ್ ಅಶೋಕ್ ಸಂಗಮೇಶ್ ದೀಪಕ್ ಕಮಲನಗರ ಪೊಲೀಸ್ ಠಾಣೆಯ ಶಿವಾನಂದ ಒಲಾರೆ ಲೋಕೇಶ್ ಕಲಂಗೆ ವಸಂತಂತ್ರೆ ಸಿಬ್ಬಂದಿ ಇನ್ನು ಹಲವರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಅಂಗಡಿಗೆ ಮಾಲೀಕರು ಇದ್ದರು.