ಮುದ್ರಿಕಿ || ಯಲ್ಲಿ ಗೊಂಡ ಕುರುಬ ಸಮಾಜದ ಚಿಂತನ-ಮಂಥನ ಕಾರ್ಯಕ್ರಮ : ಅ.21ರಂದು

ಮುದ್ರಿಕಿ || ಯಲ್ಲಿ ಗೊಂಡ ಕುರುಬ ಸಮಾಜದ ಚಿಂತನ-ಮಂಥನ ಕಾರ್ಯಕ್ರಮ :  ಅ.21ರಂದು

ಮುದ್ರಿಕಿ || ಗೊಂಡ ಕುರುಬ ಸಮಾಜದ ಚಿಂತನ-ಮಂಥನ ಕಾರ್ಯಕ್ರಮ : ಅ.21ರಂದು

ಕಲಬುರಗಿ: ಅ.21ರಂದು ನಗರದ ಕನ್ನಡ ಸಭಾಭವನದಲ್ಲಿ ಕೋಮರಾವ್ ಭೀಮ್ ಗೊಂಡ ಕುರುಬ ಸಂಘದಿಂದ ಕುರುಬ ಸಮಾಜದ ಜಾಗೃತಿ ಕುರಿತಾಗಿ ಒಂದು ದಿನದ ಚಿಂತನ - ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಮುದ್ರಿಕಿ ಹೇಳಿದರು.

ಕಲಬುರಗಿ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ತಿಂಥಿಣಿಯ ಕನಕ ಪೀಠದ ಸಿದ್ದರಾಮನಂದಾಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಅಣದೂರ ಬುದ್ಧ ವಿಹಾರದ ವರಜ್ಯೋತಿ ತೆರೋ ಅವರು ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದೇವಿಂದ್ರಪ್ಪ ಮರತೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಉಪನ್ಯಾಸಕರಾಗಿ ಪ್ರಾಧ್ಯಾಪಕ ಡಾ. ಪದ್ಮರಾಜ ರಾಸಣಗಿ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.

 ದಿಲೀಪ್ ಪಾಟೀಲ್, ಗುರುನಾಥ್ ಪೂಜಾರಿ, ಯಲಗೊಂಡ ಹೀರೆಕುರುಬುರ್, ಭಗವಂತರಾಯ್ ಪಾಟೀಲ್, ಪರಮೇಶ್ ಅಲಗೊಂಡ, ಲಿಂಗರಾಜ್ ಬಿರಾದಾರ, ಲಕ್ಷ್ಮಣ ರಾವ್ ಪೊಲೀಸ್ ಪಾಟೀಲ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ವಿಶೇಷ ಸಾಧಕರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಠಲ್ ಪೂಜಾರಿ, ಗಿರಮಲ್ಲಪ್ಪ ಪೂಜಾರಿ,ಗೋಪಾಲ್ ಗಾರಂಪಲ್ಲಿ, ರಾಜಶೇಖರ್, ಅಮರೇಶ್ ಮುತ್ಯಾ, ಮತ್ತಿತರರು ಉಪಸ್ಥಿತರಿದ್ದರು.