ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

ದಾವಣಗೆರೆ:- ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿಯಿಂದ ದಿನಾಂಕ:-20-10-2024 ನೆಯ ಭಾನುವಾರ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ, ಬೆಳ್ಳಿಗನೂಡು ಜಿ.ಬಿ.ಮಾಲತೇಶ ಅವರ ಕನವರಿಕೆ ಕವನ ಸಂಕಲನ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜಯರಾಮಯ್ಯ ವಿ. ಮುಖ್ಯಸ್ಥರು ಕನ್ನಕ ಅಧ್ಯಯನ ವಿಭಾಗ&ಸಂಶೋಧನ ಕೇಂದ ದಾವಣಗೆರೆ ವಿಶ್ವವಿದ್ಯಾಲಯ. ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷರಾದ ವಾಮದೇವಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚಾಮರಾಜನಗರದ ಎಂ ವೈ ಎಫ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ & ಪ್ರೌಢ ಶಾಲೆಯ ಆಡಳಿತಾಧಿಕಾರಿಗಳಾದ ಮೊಹಮ್ಮದ್ ಸಾಬೀರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿಕ್ಷಕರು & ಸಾಹಿತಿಗಳಾದ ಹಸನ್ ಬೆಳ್ಳಿಗನೂಡು ಅವರು ಪುಸ್ತಕದ ಕುರಿತು ಪರಿಚಯ ಮಾಡಿಕೊಡಲಿದ್ದಾರೆ. 

ರಾಜ್ಯ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಮಾಂತೇಶ್ ಪಾಟೀಲ್ ಪ್ರಾಧ್ಯಪಕರು ಕನ್ನಡ ಅಧ್ಯನ ವಿಭಾಗ & ಸಂಶೋಧನ ಕೇಂದ್ರ ಜಿ ಆರ್ ಹಳ್ಳಿ ದಾವಿವಿ. ಮುಖ್ಯ ಅತಿಥಿಗಳಾಗಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ. ಮಹೇಶ್ ಕೆ ಎನ್ ಅವರು ಆಗಮಿಸಲಿದ್ದಾರೆ. 

ಫೌಝಿಯ ಸಲೀಂ ಅವರ ೨೦೨೨-೨೦೨೩ನೆಯ ಸಾಲಿನ ಕ್ರಮವಾಗಿ ೩೩-ಬಾಳಪಯಣ, ನೀ ದೂರ ಹೋದಾಗ ಕಾದಂಬರಿಗೆ ಅಝಾದ್ ಕಾದಂಬರಿ ಸಾಧಕ ಪ್ರಶಸ್ತಿ, ಸಂತೋಶ ಕುಮಾರ್ ಅವರ ಸಾಗರ ಸೃಷ್ಟಿ ಕಥಾ ಸಂಕಲನವು ೨೦೨೨ನೆಯ ಸಾಲಿನ ಅಝಾದ್ ಕಥಾಸಾಧಕ ಪ್ರಶಸ್ತಿ, ಮತ್ತು ಸಂತೇಬೆನ್ನೂರು ಫೈಜ್ನಟ್ರಾಜ್ ಅವರ ನದಿಯೊಂದು ಕಡಲ ಹುಡುಕುತ್ತಾ ಕಥಾಸಂಕಲನವು ೨೦೨೩ನೆಯ ಸಾಲಿನ ಅಝಾದ್ ಕಥಾಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರು ತಿಳಿಸಿದ್ದಾರೆ.