ಮಕ್ಕಳಲ್ಲಿ ಕ್ರೀಡೆ ಮನೋಭಾವ ಬೆಳೆಸಿ: ನರಸಪ್ಪ ಯಾಕತಪೂರ

ಮಕ್ಕಳಲ್ಲಿ  ಕ್ರೀಡೆ ಮನೋಭಾವ ಬೆಳೆಸಿ: ನರಸಪ್ಪ ಯಾಕತಪೂರ

ಮಕ್ಕಳಲ್ಲಿ ಕ್ರೀಡೆ ಮನೋಭಾವ ಬೆಳೆಸಿ: ನರಸಪ್ಪ ಯಾಕತಪೂರ

ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಭಾಗ್ಯವಂತಿ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಕ್ರಿಕೆಟ್ ಟ್ರೋಫಿ-2024 ಟೂರ್ನಿಯಲ್ಲಿ ಗ್ರಾಮದ ಜೈ ಶ್ರೀರಾಮ ತಂಡ ಟ್ರೋಫಿ ಗೆದ್ದುಕೊಂಡಿತು.

ಫೈನಲ್ ಪಂದ್ಯದಲ್ಲಿ ನಾಗೋರಾ ಗ್ರಾಮದ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜೈ ಶ್ರೀರಾಮ ತಂಡ ನಿಗದಿತ 8 ಓವರ್‍ಗಳಲ್ಲಿ 70 ರನ್ ಪೇರಿಸಿತು. ಬಳಿಕ ಬ್ಯಾಟ್ ಮಾಡಿದ ನಾಗೋರಾ ತಂಡ ನಿಗದಿತ ಓವರ್‍ಗಳಲ್ಲಿ 7 ವಿಕೇಟ್‍ಗೆ 50 ರನ್ ಮಾತ್ರ ಗಳಿಸಿ, 20 ರನ್‍ಗಳಿಂದ ಸೋಲು ಅನುಭವಿಸಿತು.

ಟೂರ್ನಿಯನ್ನು ಸಂಘಟಿಸಿದ್ದ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಯಾಕತಪುರ ಅವರು ಕ್ರೀಡೆಗಳು ವ್ಯಕ್ತಿಗಳ ಮಾನಸಿಕ ನೆಮ್ಮದಿ ದೊರಕುತ್ತದೆ ಪ್ರತಿಯೊಬ್ಬರು ಜೀವನದಲ್ಲಿ ಕ್ರೀಡೆಯ ಮಕ್ಕಳಲ್ಲಿ ಹಿರಿಯರಲ್ಲಿ ಯುವಕರಲ್ಲಿ ಇಂದಿನ ದಿನಗಳಲ್ಲಿ ಕಡಿಮೆ ಕಾಣುತ್ತಿರುವುದು ನೋವಿನ ಸಂಗತಿಯಾಗಿದೆ ಯುವಜನತೆಯು ಮೊಬೈಲ್ ಹವ್ಯಾಸಕ್ಕೆ ತುತ್ತಾಗುತ್ತಿರುವುದು ಕಡಿವಾಣ ಹಾಕಬೇಕು ಎಂದು ಹೇಳಿದರು ಅಗತ್ಯವಿದ್ದರೆ ಜೀವನದ ಭಾಗವಾಗಿಸಿ, ಆರೋಗ್ಯಕರ ಜೀವನಕ್ಕೆ ಹಾಗೂ ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆಗಳನ್ನು ಅಳವಡಿಸಿಕೊಳ್ಳಿ.

 ಮತ್ತು ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ಪ್ರದಾನ ಮಾಡಿದರು.

ಗ್ರಾಮದ ಪ್ರಮುಖರಾದ ಮಚ್ಚೇಂದ್ರ ಕೋಟೆ, ಓಂಕಾರ ಕಿಚ್ಚಾ, ಪ್ರಭು ಬುಗಟೆ, ರಾಜು ಕೋಲಿ, ಜಗದೀಶ್ ವರ್ಮಾ, ರಾಜು ಪಟೇಲ್ ಮತ್ತಿತರರು ಇದ್ದರು.  

ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್