ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ: ನಾಗಯ್ಯ ಸ್ವಾಮಿ

ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ: ನಾಗಯ್ಯ ಸ್ವಾಮಿ

ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ: ನಾಗಯ್ಯ ಸ್ವಾಮಿ 

ಮಾನವ ಜೀವನ ಬಹಳ ಅಮೂಲ್ಯವಾದದು ಜೀವನ ನಡೆಸುವುದು ಒಂದು ಕಲೆ ಇದೆ ನವಿಲಿನಂತೆ ಹಾಡುತ್ತಾ, ನದಿಯಂತೆ ಹರಿಯುತ್ತಾ, ಸಂಸ್ಕಾರ ಮತ್ತು ಸಂಸ್ಕೃತಿ ಬರಿತವಾದಂತ ಜೀವನವು ನಿಮ್ಮದಾಗಲಿ, ಇಂದಿನ ಯುಗದಲ್ಲಿ ನವ ಯುವಕರು ದುಶ್ಚಟಕ್ಕೆ ಬಲಿಯಾಗುತ್ತಾ ತಮ್ಮ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಶರಣ ನಾಗಯ್ಯ ಸ್ವಾಮಿ ನುಡಿದರು.

ಅನುಭವ ಮಂಟಪ ಸಂತಪೂರನಲ್ಲಿ 86ನೇ ಮಾಸಿಕ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಅವರು ಟಿ ವಿ ಮೊಬೈಲುಗಳ ಮೂಲಕ ದುಶ್ಚಟದ ದಾಸರಾಗಿ ಜೀವನ ಕಳೆಯದೆ ನಿಮ್ಮ ಮಕ್ಕಳನ್ನ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕೊಡಿಸಬೇಕು ಅಲ್ಲದೆ ಗುರು ಹಿರಿಯರ ಬಗ್ಗೆ ಗೌರವ ಕೊಡುವಂತೆ ಸತ್ಸಂಗದಲ್ಲಿ ಭಾಗಿ ಆಗುವಂತೆ ಪ್ರೇರಣೆ ನೀಡಿ ಎಂದು ಅನುಭಾವದ ನುಡಿ ನುಡಿದರು.

ಒಂದು ದಿವಸದಲ್ಲಿ ಕೆಡುವ ಹಾಲು ಎರಡು ದಿವಸದಲ್ಲಿ ಕೆಡುವ ಮೊಸರು, ಮೂರು ದಿವಸದಲ್ಲಿ ಕೆಡುವ ಬೆಣ್ಣೆ ಯಲ್ಲಿ ದೀರ್ಘಕಾಲ ಆಯುಷ್ಯವಿರುವ ತುಪ್ಪ ಹೇಗೆ ಅಡಗಿದೆಯೋ ಹಾಗೆ ನಮ್ಮಲ್ಲಿ ಅನಂತ ಶಕ್ತಿಗಳು ಅಡಗಿವೆ ಅದಕ್ಕೆ ಸ್ವಲ್ಪ ಜ್ಞಾನ ಆಲೋಚನೆ ಮಾನವಿತೆ ಇದರೆ ಉತ್ತಮ ವ್ಯಕ್ತಿಯಾಗಿ ಮುಂದೆ ಒಂದು ದಿನ ದೇಶದ ಶಕ್ತಿಯಾಗಿ ಬೆಳೆಯುವಲ್ಲಿ ಸಂದೇಹವಿಲ್ಲವೆಂದು ಬಹು ಮಾರ್ಮಿಕವಾಗಿ ಅನುಭಾವದ ನುಡಿಗಳೊಂದಿಗೆ ಕಮಲನಗರ ತಾಲೂಕಿನ ರಾಷ್ಟ್ರೀಯ ಬಸವದಳ ಹಾಗೂ ಗುರುಬಸವೇಶ್ವರ ಅನುಭವ ಮಂಟಪ ಮುಧೋಳ (ಬಿ) ಅಧ್ಯಕ್ಷರಾದ ಶರಣ ಶ್ರೀ ನಾಗಯ್ಯ ಸ್ವಾಮಿಯವರು ಮಾರ್ಮಿಕವಾಗಿ ಮಾತನಾಡಿದರು. 

 ಇದೇ ಸಂದರ್ಭದಲ್ಲಿ ಇಂದಿನ ಕಾರ್ಯಕ್ರಮದ ಸನ್ಮಾನಿತರಾದ ಹೆಡಗಾಪೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಪ್ರವೀಣ್ ಬ್ಯಾಳಿಯವರು ಆರೋಗ್ಯವೇ ಭಾಗ್ಯ ಆರೋಗ್ಯವೇ ನಮ್ಮ ಸಿರಿ ಸಂಪತ್ತು, ದಿನನಿತ್ಯ ಸೇವಿಸುವ ಪದಾರ್ಥಗಳಲ್ಲಿ ಆಹಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಮಾತನಾಡಿದರು.

 ಕಾರ್ಯಕ್ರಮದ ದಿವ್ಯ ನೇತೃತ್ವವನ್ನು ಪರಮ ಪೂಜ್ಯ ಶ್ರೀ ಮಹಾಲಿಂಗ ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ವಹಿಸಿದರು.

ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದಿದ್ದೇ ಆದಲ್ಲಿ ನಮ್ಮ ಜೀವನ ಉತ್ತಮವಾಗುವುದರಲ್ಲಿ ಸಂದೇಹವಿಲ್ಲ ಗುರು ಬಸವಣ್ಣನವರನ್ನು ನಂಬಿದವರು ಎಂದು ಕೆಟ್ಟಿಲ್ಲ ಕೆಟ್ಟವರು ಎಂದಿಗೂ ಗುರು ಬಸವಣ್ಣನವರನ್ನು ನಂಬಿಲ್ಲ ಹಾಗಾಗಿ ನಾವು ಉತ್ತಮ ಮಾನವರಾಗಿ ಸತ್ಯ ಶುದ್ಧ ಕಾಯಕದಿಂದ ಬದುಕುವ ರೀತಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ದಿವ್ಯ ನೇತ್ರತ್ವವನ್ನು ವಹಿಸಿರುವ ಪರಮಪೂಜ್ಯ ಶಿವಾನಂದ ಸ್ವಾಮೀಜಿಯವರು ಹಿರೇಮಠ ಸಂಸ್ಥಾನ ಭಾಲ್ಕಿ ಕಾರ್ಯಕ್ರಮ ಅತಿ ಉತ್ತಮವಾಗಿ ಆಯೋಜನೆ ಮಾಡಿದ್ದು ನನಗೆ ಬಹಳ ಆನಂದವಾಗಿದೆ ಪ್ರತಿ ತಿಂಗಳು ಇದೇ ರೀತಿಯಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಗ್ರಾಮೀಣ ಭಾಗದ ಬಸವಾಭಿಮಾನಿಗಳಿಗೆ ವಚನ ಸಾಹಿತ್ಯ ಕುರಿತು ಅರಿವು ಮೂಡಿಸಿ ಕೊಡುವ ಮಾದರಿ ಕಾರ್ಯಕ್ರಮ ಇದಾಗಿದೆ ಮುಂದೆ ಕೂಡ ಇಂತಹ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿ ಬಸವ ಮಂಟಪದ ಆಡಳಿತ ಮಂಡಳಿಗೆ ಸಲಹೆ ಸೂಚನೆಗಳನ್ನು ಸೂಚಿಸಿದರು.

 ಅದೇ ರೀತಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಭವ ಮಂಟಪದ ಅಧ್ಯಕ್ಷರಾದ ಬಸವರಾಜ ಬಿರಾದಾರ ಅವರು ವಹಿಸಿಕೊಂಡರು ಅನುಭವ ಮಂಟಪದ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಿವಕುಮಾರ ಹಿರೇಮಠ ಅವರು ಸ್ವಾಗತಿಸಿದರು ಶರಣ ಸಂಗಮೇಶ ಬ್ಯಾಳಿಯವರು ಸಂಚಾಲನೆ ಮಾಡಿದರು.ಶರಣ ನಾಗಶೆಟ್ಟಿ ಬೀಜಲವಾಡಿ ತಬಲಾ ಸಾತ್ ಮಾಡಿದರು ಶರಣ ಹಾಗಿರಾವ ಹಾರ್ಮೋನಿಯಂ ಹಾಗೂ ಶ್ರೀ ಗೋವಿಂದ ರೆಡ್ಡಿ ಜೋಜನ ವಚನ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಹಾಗೂ ಗ್ರಾಮದ ಅನೇಕ ಶರಣರು ಹಾಗೂ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.