ಭೂಮಿ ಮತ್ತು ಶ್ರಮ'ಧಾನ, ಅತ್ಯಂತ ಶ್ರೇಷ್ಟ ಧಾನ ವಿರಭದ್ರಯ್ಯ ಸಾಲಿಮಠ

ಭೂಮಿ ಮತ್ತು ಶ್ರಮ'ಧಾನ, ಅತ್ಯಂತ ಶ್ರೇಷ್ಟ ಧಾನ ವಿರಭದ್ರಯ್ಯ ಸಾಲಿಮಠ

ಭೂಮಿ ಮತ್ತು ಶ್ರಮ'ಧಾನ, ಅತ್ಯಂತ ಶ್ರೇಷ್ಟ ಧಾನ ವಿರಭದ್ರಯ್ಯ ಸಾಲಿಮಠ

ಟೆಂಗಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಬೆಳೆಬಾಳುವ ಭೂಮಿ ದೇವಸ್ಥಾನ ಕಟ್ಟಲು ಭೂಮಿ ಧಾನ ನೀಡಿದ ಧನಂಜಯ ಕುಲಕರ್ಣಿ ಹಾಗೂ 

 ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಗ್ರಾಮದಲ್ಲಿ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಶ್ರಮದಿಂದ ಅನನ್ಯ ಸೇವೆ ಸಲ್ಲಿಸಿದ ದಿ.ಶಿವಶರಣಪ್ಪ ಅಂಡಗಿ ಇವರಿಬ್ಬರ ಸೇವೆ ಶ್ಲಾಘನೀಯವಾಗಿದೆ ಎಂದು ವೀರಭದ್ರಯ್ಯ ಸಾಲಿಮಠ ಹೇಳಿದರು.

ಅಂಡಗಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾಗಿದ್ದು. ದಿ. 17/10/2024 ರಂದು ಟೆಂಗಳಿ ಗ್ರಾಮದ ಅಂಭಾಭವಾನಿ ದೇವಸ್ಥಾನದಲ್ಲಿ 47ನೇ ಉಡಿ ತುಂಬುವ ನೇ ವಾರ್ಷಿಕೋತ್ಸವ ನಿಮಿತ್ಯ ಕಾರ್ಯಕ್ರಮ ಜರಗಿತು.

 ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಸಮಯ ಪರಿಪಾಲನೆ ಮಾಡುತ್ತಾ ಶಿಕ್ಷಣಕ್ಕೆ ಒತ್ತು ಕೊಟ್ಟು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಕೂಡಾ ಮುಖ್ಯವಾದ್ದುದು ಅದರೊಂದಿಗೆ ನಮ್ಮ ಸನಾತನ ಧರ್ಮದ ಪದ್ದತಿ, ಆಚರಣೆ, ಚಿಂತನ-ಮಂತನ ಮಾಡುವುದು ಹಿಂದೇಂದಿಗಿಂತಲೂ ಈಗ ಅವಶ್ಯಕವಿದೆ ಎಂದು ಡಾ|| ಶಾಂತಸೋಮನಾಥ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

 ಅಂಡಗಿ ಪ್ರತಿಷ್ಠಾನ ವತಿಯಿಂದ ಜ್ಞಾನ ದಾಸೋಹ ಕಲಿಕಾ ಕೇಂದ್ರದ ಮಕ್ಕಳಿಗೆ ದಸರಾ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು .

ಇಂದಿನ ಮಕ್ಕಳು ಮೊಬೈಲ್ ಅತಿಯಾದ ಬಳುಸುವುದರಿಂದ ಅವರ ಜೀವನ ಹಾಳಾಗುತ್ತದೆ, ಅವರಿಗೆ ಧಾರ್ಮಿಕ ಹಬ್ಬಗಳ ಹೀರಿಮೆ ಗರಿಮೆ ಕುರಿತು ಜಾಗೃತಿ ಮೂಡಿಸಬೇಕಿದೆ , ಅದರ ಉದ್ದೇದಿಂದಲೇ ದಸರಾ ಹಬ್ಬ ಕುರಿತು ಪ್ರಭಂದ ಸ್ಪರ್ದೇ ಏರ್ಪಡಿಸಿ ಆ ಮಕ್ಕಳಿಗೆ ಕೇಸರಿ ಬಣ್ಣದ ಟೋಪಿ ಮತ್ತು ಶಾಲನ್ನು ಧರಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಟೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದ್ದರು.

ಭಜನಾ ಕಲಾವಿದರಾದ ಭೀರಣ್ಣ ಪೂಜಾರಿ, ವಿಶ್ವನಾಥ ಭಾಳದೆ, ಚಂದ್ರಶೇಖರ ಯಲ್ಲೇರಿ, ಫಕೀರಯ್ಯ ಸ್ವಾಮಿ, ಪರಿಣಿತಿ ವಿಭೂತಿ ಇವರಿಂದ ಭಜನೆ ಮಾಡುವ ಮೂಲಕ ದೇವಸ್ಥಾನದಲ್ಲಿ ಜಾಗರಣೆ ಮಾಡಿದ್ದರು.

ಈ ಕಾರ್ಯಕ್ರಮದಲ್ಲಿ ವಿಜಯಕುಮಾರ ತುಪ್ಪದ, ಶಿವಲಿಂಗಪ್ಪ ಅಷ್ಟಗಿ, ಡಾ|| ವಿವೇಕಾನಂದ ಬುಳ್ಳ, ಅಣವೀರಪ್ಪ ಅಂದೇಲಿ, ಗುಂಡಪ್ಪ ಪಾಟೀಲ, ರಾಜು ಕೋಷ್ಟಿ, ನಾಗರಾಜ ಮಹಾಗಾಂವ, ಫಕೀರಯ್ಯ ಸ್ವಾಮಿ, ಬಸವರಾಜ ತುಪ್ಪದ ರಾಜಶೇಖರ ಮರಪಳ್ಳಿ ಮಹಾದೇವ ಸ್ವಾಮಿ, ಅಚಲರಾಜ ಅಂಡಗಿ, ನಿರ್ಮಲ ಮಠಪತಿ, ಭವಾನಿ ಮಠಪತಿ ಹಾಗೂ ಜ್ಞಾನ ದಾಸೋಹ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಓಂ ಪ್ರಕಾಶ ಹೆಬ್ಬಾಳ ಸ್ವಾಗತಿಸಿದರು. ರೇಖಾ ಅಂಡಗಿ ಪ್ರಾರ್ಥಿಸಿದರು. ವಿನೋದಕುಮಾರ ಜೇ. ಒಂದಿಸಿದರು.