ಮೌನದ ಮಾತು ಅರಿತವರಾರು
ಕವನದ ಶೀರ್ಷಿಕೆ : ಮೌನದ ಮಾತು ಅರಿತವರಾರು
ಮರೆಯಬೇಕೆಂಬ ಹಂಬಲ
ಮತ್ತದೇ ನೆನಪುಗಳು ಬಂದು ಕಾಡುತ್ತಿವೆ
ಮನಸ್ಸು ಭಾರವಾಗಿ ಮೈ ನಲುಗಿ ಬರುತ್ತವೆ ಆ ನೆನಪುಗಳು
ಮೌನ ನೆನಪುಗಳಿಂದ ಜಾರಿಕೊಳ್ಳುವ ನೆಪದಲ್ಲಿದ್ದು ಮನ್ನಿಸು ದಯಮಾಡಿ ನನ್ನನ್ನು
ಮಾಸದಂತಹ ನೆನಪುಗಳು ನಿನ್ನವು
ಮೋಸದಿಂದ ಮರೆತೆನೆನ್ನುವ ಮನಸ್ಸು ನನ್ನದು
ಮರೆತೇ ನನ್ನೊಲುಮೆಂದುಕೊಳ್ಳುವ ಮನಸ್ಸು ನಿನ್ನದು ಮೂಕ ವೇದನೆಯಲ್ಲಿ ಕುಳಿತು ರೋಧಿಸುತ್ತಿವೆ ನಿನ್ನಾ ನೆನಪುಗಳು
ಮೊದಲ ಪ್ರೀತಿಯ ಕಥೆ ಹೇಳುತ್ತಾ
ನನ್ನ ಮನದ ಬೇಗುದಿಯಿಂದ
ಬರುವ ಕಣ್ಣೀರು ಒರೆಸುವ ಚಿತ್ರಣ ನಿನ್ನಾ ನೆನಪುಗಳು
ಮರೆಸುವುದೆಲ್ಲಿ ನನ್ನ ನೋವನ್ನ
ಮೂಲವೆಲ್ಲಿ ನಿನ್ನ ಪ್ರೀತಿಗೆ
ಕೊನೆಯಲ್ಲಿ ನಿನ್ನ ನೆನಪುಗಳಿಗೆ
ಮರೆಯದಂತೆ ಮಾಡುತ್ತಿದೆ ನಿನ್ನಾ ಕಣ್ಣೋಟ
ಮಾತು ಮರೆಯಿಸಿ ಕಣ್ಣು ತಪ್ಪಿಸಿ
ಮೌನ ಹೃದಯದಿ ನಿನ್ನಾ ನೆನಪುಗಳು
ಮೂಕ ಮಾತಿನ ಬರವಣಿಗೆ
ನೆನಪು ತುಂಬಿದ ಮನವಿದು ಮಂಕಾಗುತಿಹದು
ನೀನಿಟ್ಟ ಹೆಜ್ಜೆ ಗುರುತುಗಳ ಸವಿ ನೆನಪುಗಳು ಎದೆಯಲ್ಲಿ ಹಸಿಯಾಗಿ ಉಳಿದಿಹವು
ಕಾರಣವಿಲ್ಲದೆ ಕಣ್ಣಿಂದ ಮರೆಯಾದರೂ
ಕಡಲಲೆಗಳಂತೆ ಅಪ್ಪಳಿಸುತ್ತಿವೆ ಅದಷ್ಟೋ ನೆನಪುಗಳು
ಕಡಲಲೆಯೋಳು ಮುತ್ತುಗಳು ಅವಿತಂತೆ ಹೃದಯಾಂತರಾಳದಲಿ ಹೆಸರಿನೊಂದಿಗೆ
ನಂಟು ಹಾಕಿಕೊಳ್ಳುತ್ತಿರುವ ನಿನ್ನಾ ನೆನಪುಗಳು ಮಾಯಾಲೋಕದಲ್ಲಿ ಕಳೆದುಹೋಗಬಾರದೆಂದು ಮನಸ್ಸು ಹಿಡಿದಿಡುತ್ತಾ ನನ್ನಾತ್ಮರೋದಿಸುತ್ತಿದೆ
ಕಣ್ಣುಗಳಲ್ಲಿ ಹನಿಯ ನೀರಿಲ್ಲ ಬರಿ ನಿನ್ನಾ ನೆನಪುಗಳು
ಸಾಗರದಂಚಿನಲ್ಲಿರುವ ಮರಳಂತೆ
ಸಾಗರದಂಚಿನಲಿ ನಾ ಬಿಡಿಸಿದ ಚಿತ್ರವು ಉಳಿದಿಲ್ಲವಾದರೂ ಮಾಸುತ್ತಿಲ್ಲ ಒಂದೂ ನೆನಪುಗಳು
ಮೌನದಲಿ ನೆನಪಿಸಿ ನೆನಪಲ್ಲೆ ಕೊಲ್ಲುತ್ತಿರುವೆ
ಮರೆಸು ಮರಸೆನ್ನ ಗತಕಾಲದ ಹುಸಿ ಕನಸಿನ ಮರೆಯಲಾರದ ಹಸಿ ನೆನಪುಗಳು
ಏಕಿನ್ನೂ ಹಸಿರಾಗಿಸುವೆ ಕೆಲಸಕ್ಕೆ ಬಾರದ
ನೆನಪುಗಳೆಲ್ಲ ಬಾರದ ಲೋಕಕ್ಕೆ ಕಳುಹಿಸಬಾರದೇ ?
ಈ ಲೋಕದಿಂದ ನೀ ನನ್ನನ್ನು ಋಣಮುಕ್ತಳಾಗಿ ಮಾಡಿಬಿಡು ನೆನಪುಗಳೇ ಸಾಕಿನ್ನು ನಿಲ್ಲಿಸು
ಮೌನದ ಮಾತಿನ ಬಿಸಿ ಉಸಿರಿನ ನೆನಪುಗಳು
ರಚನೆ: ಬಂತನಾಳ ಶೋಭಾರಾಣಿ ಕಲಬುರ್ಗಿ