ಅಣಿವೀರಭದ್ರೇಶ್ವರ ಪುರಾಣ ಗೃಂಥ ಲೋಕಾರ್ಪಣೆ ಜುಲೈ ೨೫ರಂದು

ಅಣಿವೀರಭದ್ರೇಶ್ವರ ಪುರಾಣ ಗೃಂಥ ಲೋಕಾರ್ಪಣೆ ಜುಲೈ ೨೫ರಂದು
ಕೋರವಾರ (ಕಾಳಗಿ ತಾ):ಅಣಿವೀರಭದ್ರೇಶ್ವರ ದೇವಾಲಯದ ಐತಿಹಾಸಿಕತೆ, ಪುರಾತನತೆ ಹಾಗೂ ಭಕ್ತಿಯ ಪರಂಪರೆಯನ್ನು ಪ್ರತಿಬಿಂಬಿಸುವ ಅಣಿವೀರಭದ್ರೇಶ್ವರ ಪುರಾಣ ಗೃಂಥದ ಲೋಕಾರ್ಪಣೆ ಕಾರ್ಯಕ್ರಮ ಜುಲೈ ೨೫ರಂದು ಕೋರವಾರದ ಅಣಿವೀರಭದ್ರೇಶ್ವರ ದೇವಾಲಯದಲ್ಲಿ ನಡೆಯಲಿದೆ.
ಪುರಾಣದ ಕೃತಿ ಲೇಖಕರಾದ ಶ್ರೀ ವೆ.ಮೂ. ದಾನಯ್ಯ ಮಠಪತಿ ಅಪ್ಪನವರು ತಮ್ಮ ಆಧ್ಯಾತ್ಮಿಕ ಪ್ರವಚನದ ಅನುಭವದಿಂದ ಈ ಪುರಾಣವನ್ನು ರಚಿಸಿದ್ದಾರೆ. ಗೃಂಥವನ್ನು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಬಿಡುಗಡೆ ಮಾಡುವರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಅಣಿವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಧನಂಜಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ದೇವಸ್ಥಾನದ ಅಧ್ಯಕ್ಷ ಪ್ರಥ್ವಿರಾಜ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಮ್. ಶಿವಶರಣ, ಪುರಾಣ ದಾನಿ ಸೋಮಶೇಖರ್ ಅಣ್ಣೆಪ್ಪ, ಅಂಬರೀಷ ಧನಂಜಯ ಹಿರೇಮಠ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮ ನಿರೂಪಣೆಯನ್ನು ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾಡಲಿದ್ದಾರೆ.
ಭಕ್ತರು, ಧರ್ಮಪ್ರೇಮಿಗಳು, ಗ್ರಾಮಸ್ಥರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಸಂಚಾಲಕ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.