ಫಿಸಿಕ್ಸ್ ವಾಲಾ ವಿದ್ಯಾರ್ಥಿಗಳಿಂದ ಫ್ರೆಷರ್ಸ್ ಪಾರ್ಟಿ

ಫಿಸಿಕ್ಸ್ ವಾಲಾ ವಿದ್ಯಾರ್ಥಿಗಳಿಂದ ಫ್ರೆಷರ್ಸ್ ಪಾರ್ಟಿ

ಫಿಸಿಕ್ಸ್ ವಾಲಾ ವಿದ್ಯಾರ್ಥಿಗಳಿಂದ ಫ್ರೆಷರ್ಸ್ ಪಾರ್ಟಿ

ಕಲಬುರಗಿ: ನಗರದ ಪೂರ್ಣಾನಂದ ಫಂಕ್ಷನ್ ಹಾಲ್‌ನಲ್ಲಿ ಫಿಸಿಕ್ಸ್ ವಾಲಾ ವಿದ್ಯಾಪೀಠ ಪಾಠಶಾಲಾ ಕೇಂದ್ರದ ನೀಟ್ ಹಾಗೂ ಜೆಇಇ ವಿದ್ಯಾರ್ಥಿಗಳಿಗಾಗಿ ಫ್ರೆಷರ್ಸ್ ಪಾರ್ಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮಣ್ಣು ವಿಜ್ಞಾನಿ ಹಾಗೂ ಶಿಕ್ಷಕರು/ವಿಜ್ಞಾನಿಗಳ ಸಂಘದ ಅಧ್ಯಕ್ಷ ಡಾ. ಆನಂದ್ ನಾಯಕ್ ಉದ್ಘಾಟಿಸಿ ಮಾತನಾಡಿದರು. “ಫಿಸಿಕ್ಸ್ ವಾಲಾ ಸಂಸ್ಥೆಯ ಕಲಬುರಗಿ ಶಾಖೆ ಇಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ಒದಗಿಸಲಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಫಿಸಿಕ್ಸ್ ವಾಲಾ ಕೇಂದ್ರವು ಕಲಬುರಗಿಯಲ್ಲಿ ಪ್ರಾರಂಭವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಆನಂದ ಶೇರಿಕಾರ, ಮುಖ್ಯೋಪಾಧ್ಯಾಯ ಪ್ರಶಾಂತ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.