ಕಲಬುರಗಿ | ಅ.26,27ಕ್ಕೆ 12 ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶ : ಡಾ. ಮಲ್ಲಿಕಾರ್ಜುನ ವಡ್ಡನಕೇರಿ
ಕಲಬುರಗಿ | ಅ.26,27ಕ್ಕೆ 12 ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶ : ಡಾ. ಮಲ್ಲಿಕಾರ್ಜುನ ವಡ್ಡನಕೇರಿ
ಕಲಬುರಗಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಯಿಂದ , ಸಾಹಿತಿ ಶರಣ ಚಿಂತಕರಾದ ಡಾ. ಮೀನಾಕ್ಷಿ ಬಾಳಿ ಯವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಡಾ. ಮಲ್ಲಿಕಾರ್ಜುನ ವಡ್ಡನಕೇರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಕಲ್ಬುರ್ಗಿ ಘಟಕದ ವತಿಯಿಂದ ಇದೇ ತಿಂಗಳು ದಿನಾಂಕ 26 ಮತ್ತು 27 ರಂದು ಎರಡು ದಿವಸದ 12ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶ ನಗರದ ಜೈ ಭವಾನಿ ಕನ್ವೆನ್ಷನ್ ಸಭಾಮಂಟಪದಲ್ಲಿ ಜರುಗಲಿದ್ದು ಎಂದು ಹೇಳಿದರು.
ಅ. 26 ಬೆಳಿಗ್ಗೆ 10 ಗಂಟೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಪರಮ ಪೂಜ್ಯ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ಪರಮಪೂಜ್ಯ ಜಗದ್ಗುರು ಡಾ. ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ, ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೊಶ್ರೀ ಡಾ. ದಾಕ್ಷಾಯಣಿ ಶರಣಬಸಪ್ಪ ಅಪ್ಪಾ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರು ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಕದಳಿ ಸಮಾವೇಶದ ಸ್ವಾಗತಿಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆಜಿ ಭಾಗವಹಿಸುವರು.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರವರು " ಕಲ್ಯಾಣ ಕದಳಿ " ಸಮಾವೇಶದ ಸ್ಮರಣ ಸಂಪುಟ ಬಿಡುಗಡೆ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರು "ಅಕ್ಕ ಕೇಳವ್ವ" ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ ಗ್ರಾಮೀಣ ಮತಕ್ಷೇತ್ರ ಶಾಸಕರಾದ ಶ್ರೀ ಬಸವರಾಜ ಮತ್ತಿಮಡು "ಮಹಾದಾಸೋಹಿ"ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ.
63 ಪುರಾತನ ಚಿತ್ರ ಪುಟಗಳ ಗ್ರಂಥವನ್ನು ಬಿ.ಜಿ ಪಾಟೀಲ್ ಅವರು ಬಿಡುಗಡೆಗೊಳಿಸಲಿದ್ದಾರೆ.
ಸರ್ವಾಧ್ಯಕ್ಷರಾದ ಡಾ. ಮೀನಾಕ್ಷಿ ಬಾಳಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ವಸ್ತ್ರದ ಅಧ್ಯಕ್ಷತೆಯನ್ನು,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ ಡಾ. ಸಿ ಸೋಮಶೇಖರ ವಹಿಸಲಿದ್ದಾರೆ .ಗೌರವ ಉಪಸ್ಥಿತಿ ಶಾಸಕರಾದ ಎಂ.ವೈ.. ಪಾಟೀಲ, ಜಿಲ್ಲಾಧಿಕಾರಿಗಳ ಫೌಝಿಯಾ ತರನಮ್, ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರಭುಲಿಂಗ್ ಮಹಾಗಾಂಕರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತಿ ವಹಿಸಲಿದ್ದಾರೆ.
ಎರಡು ದಿನಗಳ ಕಾಲ ನಿರಂತರವಾಗಿ ನಾಲ್ಕು ಗೋಷ್ಠಿ ನಡೆಯಲಿದ್ದು ನಾಡಿನ ವಿವಿಧ ವಿದ್ವಾಂಸರಿಂದ ವಿಷಯಗಳು ಮಂಡನೆ ಮಾಡಲಿದ್ದಾರೆ .
ಈ ಸಮಾವೇಶದಲ್ಲಿ ದಿನಾಂಕ 27. 10. 2024 ರಂದು ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕಂದ್ರ ಮಹಾಸ್ವಾಮಿಗಳು, ಪರಪೂಜ್ಯ ಜಗದ್ಗುರು ಶ್ರೀ ಸಿದ್ದರಾಮಮಹಾಸ್ವಾಮಿಗಳು ನಾಡೋಜ ಡಾ. ಬಸವಲಿಂಗ ಪಟ್ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ .
ಸಮಾರೋಪ ನುಡಿಗಳನ್ನು ಬೀದರಿನ ಅಕ್ಕ ಗಂಗಾಂಬಿಕಾ ಆಡಲಿದ್ದಾರೆ .ಡಾ. ಸಿ ಸೋಮಶೇಖರ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಮಾನ್ಯ ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರು ಮೀನಾಕ್ಷಿ ಬಾಳಿ ಯವರು ರಚಿಸಿದ "ವಚನ ನಿಜದರ್ಶನ "ಕೃತಿ ಲೋಕಾರ್ಪಣೆ ಮಾಡಲಿದ್ದಾರೆ . ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾದ ಡಾ.ಅಜಯ್ ಸಿಂಗ್ ಅವರು ಡಾ. ತಿಪ್ಪೇರುದ್ರಸ್ವಾಮಿಯವರು ರಚಿಸಿದ "ಜಡದಲ್ಲಿ ಜಂಗಮ "ಕೃತಿ ಲೋಕಾರ್ಪಣೆ ಗೊಳಿಸಿದ್ದಾರೆ .
ಮಾನ್ಯ ಮುಖ್ಯಮಂತ್ರಿಗಳ ಸಲಹೆಗಾರರಾದ ಆಳಂದ ಶಾಸಕರಾದ ಶ್ರೀ ಬಿ. ಆರ್ ಪಾಟೀಲ ಬಸವಕಲ್ಯಾಣ ಶಾಸಕರಾದ ಶ್ರೀ ಶರಣು ಸಲ್ಗರ್, ವಿಧಾನಪರಿಷತ್ ಸದಸ್ಯರಾದ ಶ್ರೀ ಶಶಿಲ್ ಜಿ ನಮೋಶಿ, ಶ್ರೀತಿಪ್ಪಣ್ಣಪ್ಪ ಕಮಕ್ನೂರ್, ಶ್ರೀ ಜಗದೇವ ಗುತ್ತೇದಾರ್, ಶ್ರೀ ಚಂದ್ರಶೇಖರ್ ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ನಗರ ಪೊಲೀಸ್ ಆಯುಕ್ತರದ ಡಾ. ಶರಣಪ್ಪ ಎಸ್.ಡಿ ಮುಖಂಡರಾದ ಶ್ರೀ ನಿತಿನ್ ಗುತ್ತೇದಾರ್, ಶ್ರೀ ಶರಣು ಮೋದಿ,ಶ್ರೀ ಸೋಮಶೇಖರ್ ಗೋ ನಾಯಕ್,ಶ್ರೀ ಬಸವರಾಜ್ ಪಾಟೀಲ್ ಸೋಮನಹಳ್ಳಿ ಗೌರವಾಧ್ಯಕ್ಷರಾದ ಶ್ರೀ ಕುಪೇಂದ್ರ ಪಾಟೀಲ್ ಯುವ ಘಟಕದ ಅಧ್ಯಕ್ಷರಾದ ಪ್ರಕಾಶ್ ಅಂಗಡಿ ಉಪಸ್ಥಿತರಿರಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರ ದೇವನೂರರವರು ವಹಿಸಲಿದ್ದಾರೆ.
ಅಕ್ಕಮಹಾದೇವಿ ಭಾವಚಿತ್ರ ಹಾಗು ವಚನ ಸಾಹಿತ್ಯ ಗ್ರಂಥಗಳ ಮೆರವಣಿಗೆ ಅನುಭವ ಮಂಟಪ, ಜಯನಗರ ಮಾರ್ಗವಾಗಿ ಸರ್ಕಾರಿ ಮಹಾವಿದ್ಯಾಲಯದಿಂದ ಜೈ ಭವಾನಿ ಕನ್ವೆನ್ಷನ್ ಹಾಲ್ ಅವರಿಗೆ ಜರುಗಲಿದೆ .
ಮೆರವಣಿಗೆಯನ್ನು ಬಸವ ಸಮಿತಿ ಅಧ್ಯಕ್ಷರಾದ ಡಾ. ವಿಲಾಸವತಿ ಖುಬಾ ಅವರು ಉದ್ಘಾಟಿಸಲಿದ್ದಾರೆ,
ಮಾನ್ಯ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಮನಿ ಅವರು ಮತ್ತು ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ ಅವರು ಭಾಗವಹಿಸಲಿದ್ದಾರೆ .
ಈ ಮೆರವಣಿಗೆಯಲ್ಲಿ ಹಲವಾರು ಬಸವ ಪರ ಸಂಘಟನೆಗಳು ಭಾಗವಹಿಸಲಿವೆ. ಇದೇ ಸಂದರ್ಭದಲ್ಲಿ ಸಮ್ಮೇಳನದ ಸಭಾಂಗಣದ ಮುಂಭಾಗದಲ್ಲಿ ವಚನ ಕಲಾಕೃತಿಗಳ ಕಲಾ ಪ್ರದರ್ಶನ ಮತ್ತು ಪುಸ್ತಕಗಳು ಮಳಿಗಳನ್ನು ಏರ್ಪಡಿಸಲಾಗಿದೆ,
ಮಾನ್ಯ ವೈದ್ಯಕೀಯ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು ಉದ್ಘಾಟಿಸಲಿದ್ದು ಉತ್ತರ ಮತಕ್ಷೇತ್ರದ ಶಾಸಕಿ ಸನ್ಮಾನ್ಯ ಶ್ರೀಮತಿ ಖನಿಜ ಫಾತಿಮಾ ಶ್ರೀ ಅಪ್ಪಾರಾವ ಅಕ್ಕೋಣೆ, ಡಾ. ಶಾಂತಾ ಬಿ. ಅಷ್ಠಗಿ ಅವರು ಭಾಗವಹಿಸಲಿದ್ದಾರೆ.
ಎರಡು ದಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಅಪ್ಪಾರಾವ ಅಕ್ಕೋಣಿ ,ಶಾಂತಾ.ಬಿ.ಅಷ್ಠಗಿ , ಶಾಂತಲಿಂಗ ಪಾಟೀಲ್ ಕೊಳಕೂರ,ಶಿವಾನಂದ ಮಠಪತಿ,ಆನಂದರಾಜ ಪಾಟೀಲ, ವಿಶ್ವನಾಥ ಮಂಗಲಗಿ, ಸಿದ್ರಾಮಪ್ಪ ಧುಲಂಗೆ,ಅಂಬಾರಾಯಾ ಬಿರಾದಾರ, ಬಸವರಾಜ ಮೊರಬದ, ಬಸವರಾಜ ಚಾಂದಕವಟೆ, ಗಣಪತಿ ಸಿಂಧೆ, ಜಯಶ್ರಿ ಚಟ್ನಳ್ಳಿ, ಶಿವಕುಮಾರ ಬಿದರಿ, ಶರಣಗೌಡ ಪಾಟೀಲ ಪಾಳಾ, ಬಸವರಾಜ ಜನಕಟ್ಟಿ ಸೇರಿದಂತೆ ಉಪಸ್ಥಿತರಿದ್ದರು.