ಅತ್ಯಂತ ಗಭೀರ ಸಮಸ್ಯೆಗಳ ಸುಳಿಯಲ್ಲಿ ಸಂವಿಧಾನ ಸಿಲಿಕಿಕೊಂಡಿದೆ : ಜ್ಞಾನಪ್ರಕಾಶ ಸ್ವಾಮಿ

ಅತ್ಯಂತ ಗಭೀರ ಸಮಸ್ಯೆಗಳ ಸುಳಿಯಲ್ಲಿ ಸಂವಿಧಾನ ಸಿಲಿಕಿಕೊಂಡಿದೆ : ಜ್ಞಾನಪ್ರಕಾಶ ಸ್ವಾಮಿ

ದೇಶದಲ್ಲಿ ಮನಸ್ಮೃತಿ ಇನ್ನೂ ಜೀವಂತವಾಗಿದ್ದರಿಂದ ಹೇಮರವಾಗಿ ಬೆಳೆದು ತುಂಬಿ ತುಳುಕುತ್ತಾ ಇದೆ 

ಚಿಂಚೋಳಿ : 

ಸಂವಿಧಾನ ಅತ್ಯಂತ ಗಭೀರ ಸಮಸ್ಯೆ ಗಳ ಸುಳಿಯಲ್ಲಿ ಸಿಲಿಕಿಕೊಂಡಿದೆ.ಈ ದೇಶದಲ್ಲಿ ಮುನುಷ್ಯ ಜೀವಂತ ಇಲ್ಲ. ಜಾತಿ ಜೀವಂತ ಇದೆ. ಸಮುದಾಯಗಳನ್ನು ಒಂದೂಗುಡಿಸದೆ ಇದ್ದಲ್ಲಿ ಸಂವಿಧಾನ ಉಳಿಯಲ್ಲ ಎಂದು ಮೈಸೂರು, ಕೋಡ್ಲಾ ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮಿ ಹೇಳಿದರು. 

ಅವರು ತಾಲೂಕಿನ ಸುಲೇಪೇಟ ಗ್ರಾಮದ ಸರಕಾರಿ ಭವನದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಶೋಷಿತ ಸಂಘಟನೆಗಳ ಒಕ್ಕೂಟ ವತಿಯಿಂದ ಏರ್ಪಡಿಸಲಾಗಿದ್ದ ವಿಚಾರ ಸಂಕಿರ್ಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಅಂಬೇಡ್ಕರ್ ಒಂದು ಜಾತಿಗೆ ಗುರಿಯಾಗಿಸಿ ಕೊಂಡು ಸಂವಿಧಾನ ಬರೆದಿಲ್ಲ. ಎಲ್ಲಾ ಜಾತಿ ಧರ್ಮಗಳಿಗೆ ಸೀಮಿತಗೊಳ್ಳುವಂತಹ ಸಂವಿಧಾನ ಬರೆದಿದ್ದಾರೆ.

ಅಂತಹ ಭಾರತ ಸಂವಿಧಾನವನ್ನು ದೇಶದಲ್ಲಿ ಮೌನವಾಗಿಯೇ ಮುಗಿಸಲು ಕರೆ ಕೊಟ್ಟಾಗಿದೆ.

ವಿಕಸಿತ ಭಾರತ ಕಟೋದಾದರೆ ಅದು ಸಂವಿಧಾನದ ಮೂಲ ಆಸೆಯಂತೆ ಕಟ್ಟಬೇಕು. ದೇಶದಲ್ಲಿ ಮನಸ್ಮೃತಿ ಇನ್ನೂ ಜೀವಂತವಾಗಿದೆ. ಬಾಯಲಿ ಭೀಮವಾದ, ಮನದಲ್ಲಿ ಮನಸ್ಮೃತಿ ಅಳವಡಿಸಿಕೊಂಡಿದರ ಹಿನ್ನಲೆಯಲ್ಲಿ ಮನಸ್ಮೃತಿ ಹೇಮರವಾಗಿ ಬೆಳೆದು ತುಂಬಿ ತುಳುಕುತ್ತಾ ಇದೆ. ಈಗಾಗಲೇ 11 ರಾಜ್ಯಗಳ 3 ಕೋಟಿ 87 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳಲಾಗಿದೆ. ಇದು ಕಲಬುರಗಿ ಜಿಲ್ಲೆಗೂ ಬರಲಿದೆ. ಪ್ರಭುದ್ದರು ಚಲಾಯಿಸುವ ಹಕ್ಕಿನ ಮತದಾನದಿಂದ ದೇಶದ ಸಂವಿಧಾನ ಉಳಿಯಲು ಸಾಧ್ಯವಿದೆ. 

 ಬಸವಣ್ಣ ಕಿರೀಟ ಕೆಳಗಿಳಿಸಿ, ಹಟಾಡಿಸಿ ಹೋಡೆದರು. ಅಂಬೇಡ್ಕರ್ ಅವರನ್ನು 13 ಬಾರಿ ಪ್ರಯತ್ನ ಮಾಡಿದರು. ಮನುವಾದಿಗಳು ಯಾರನ್ನು ಬಿಟ್ಟಿಲ್ಲ. ಹೀಗಾಗಿ ಸಂವಿಧಾನದ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದರು.ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಮನುವಾದಿಗಳು ಕುತ್ತಿದ್ದಾರೆ. ನ್ಯಾಯಧೀಶರ ಪೆನ್ನಿನ ಮೂಲಕ ಸಂವಿಧಾನ ಮುಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಸಂವಿಧಾನದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಅಂಬೇಡ್ಕರ್ ಸಂವಿಧಾನ ಅರ್ಥ ಮಾಡಿಕೊಂಡರೆ ದೇಶದ ದೊರೆ ಆಗಿತ್ತಿರಾಎಂದರು.

ಟಿಪ್ಪು ಸುಲ್ತಾನ್ ವಂಶಸ್ಥ ಸಾಹೇಬ್ ಜಾದಾ ಮನ್ಸೂರ್ ಅಲಿ ಮಾತನಾಡಿ, ಅಂಬೇಡ್ಕರ್ ಸಂವಿಧಾನ ಎಲ್ಲಾ ಧರ್ಮದ ರಕ್ಷಕವಾಗಿದ್ದರಿಂದ ನೀಲಿ ಧ್ವಜ ಕಂಡರೆ ಸರಕಾರ ನಡುಗುತ್ತದೆ. ಹೀಗಾಗಿ ಎಲ್ಲಾ ಸಮಾಜದ ಆಸ್ತಿ ಅಂಬೇಡ್ಕರ್ ಆಗಿದ್ದಾರೆ. ಮುಸ್ಲಿಂ ಸಮಾಜದ ಬಂಧುಗಳಿಗೆ ಸಂವಿಧಾನದ ಬಗ್ಗೆ ಅರಿತುಕೊಂಡು ಎಲ್ಲಾ ಮದರಸ ಶಾಲೆಗಳಲ್ಲಿ ಸಂವಿಧಾನ ಓದಿಸಬೇಕು ಎಂದರು.

ನಿವೃತ್ತ ನ್ಯಾ. ಗೋಖಲೆ ಮಾತನಾಡಿ, 

ವಿಜ್ಞಾನ ಪ್ರಚಾರ ಮಾಡದೇ, ಅಜ್ಞಾನ ಪ್ರಚಾರ ಮಾಡಲಾಗುತ್ತಿದೆ. ದೇವಾಲಯ ಗಂಟೆಗಿಂತ ಶಾಲೆಯ ಗಂಟೆಗಳು ಬಾರಿಸಬೇಕು. ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನ ಪುಸ್ತಕ ಇಟ್ಟು ಪೂಜಿಸಿ, ಎಲ್ಲರೂ ಒಗ್ಗಟಾಗಿ ಬಸವಣ್ಣನ ತತ್ವವದ ಸಿದ್ದಾಂತಗಳನ್ನು ಅರೆತು ಪಾಲನೆ ಮಾಡಬೇಕು ಎಂದರು.  

ಮಹಿಳಾ ಚಿಂತಕಿ ಜ್ಯೋತಿ ಡಿ. ಬೊಮ್ಮ ಮಾತನಾಡಿ, 

ಅಂಬೇಡ್ಕರ್ ಅವರು ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರಿಂದ ಮಹಿಳೆಯರಿಗೆ ಮಾತನಾಡುವ ಶಕ್ತಿ ದೊರಕಿದೆ ಎಂದರು.

ಶರಣಬಸಪ್ಪ ಮಮ್ಮಶೆಟ್ಟಿ, ಅಶೋಕ ಹೂವಿನಭಾವಿ ಅವರು ಮಾತನಾಡಿದರು.

ಸಾಮಾಜಿಕ ಚಿಂತಕ ಸುಭಾಷ ಶೀಲವಂತ ಅವರು ಕಾರ್ಯಕ್ರಮ ದ ಅಧ್ಯಕ್ಷೆ ವಹಿಸಿದರು. ಶೋಷಿತ ಸಂಘಟನೆಗಳ ಒಕ್ಕೂಟದ ಕಾರ್ಯಧ್ಯಕ್ಷ ರಾಗಿ ನೇತೃತ್ವವನ್ನು ಮಾರುತಿ ಗಂಜಗಿರಿ ವಹಿಸಿದರು. 

ಈ ಸಂಧರ್ಭದಲ್ಲಿ ಅಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಗ್ರಾ. ಪಂ. ಅಧ್ಯಕ್ಷ ಸಂತೋಷ ರಾಠೋಡ, ವಕೀಲ ಶ್ರೀಮಂತ ಕಟ್ಟಿಮನಿ, ಗುರುನಾಥ ರೆಡ್ಡಿ, ವೀರಣ್ಣ ಗಂಗಾಣಿ, ರುದ್ರಮುನಿ ರಾಮತೀರ್ಥಕರ್, ಮೊಯಿನ್ ಮೂಮಿನ್, ಪ್ರಶಾಂತ ಮೇತ್ರಿ, ಮಾರುತಿ, ಜಗದೇವಯ್ಯ ಕುಪನೂರ್, ಸುನೀಲ್ ಕಪೂರ್, ಚೇತನ ಅಣವಾರ, ದೇವಿದ್ರಪ್ಪ ಹೊಳಕರ, ಮಾರುತಿ ಜಾಧವ್, ಸುರೇಶ, ಸುಜಾತ, ನರಸಮ್ಮ ಆವಂಟಿ, ಹಾಫಿಜ್, ಮಲ್ಲಿಕಾರ್ಜುನ್ ಜೋಮೂನ್, ಮಲ್ಲಿಕಾರ್ಜುನ್, ರವಿರಾಜ ರಾಠೋಡ್ ಅವರು ಉಪಸ್ಥಿತರಿದ್ದರು.