ಓಂಪ್ರಕಾಶ ದಡ್ಡೆ ಸಾಹಿತಿ

ಓಂಪ್ರಕಾಶ ದಡ್ಡೆ ಸಾಹಿತಿ

ಸಾಹಿತ್ಯ ಆರಾಧಕ ಶ್ರೀ ಓಂಪ್ರಕಾಶ ದಡ್ಡೆ

ಆಧ್ಯಾತ್ಮ, ಸಾಹಿತ್ಯ, ಶೈಕ್ಷಣಿಕ ಸಾಮಾಜಿಕ ಚಿಂತಕ ಸತ್ಯ ನಿಷ್ಠೆ ಪ್ರಾಮಾಣಿಕ ವ್ಯಕ್ತಿತ್ವದ ಉಪನ್ಯಾಸಕ ದಡ್ಡೆಯವರು.

ಮೂಲತಃ ಭಾಲ್ಕಿ ತಾಲೂಕಿನ ಯರನ್ನಳ್ಳಿ ಗ್ರಾಮದ ತಂದೆ ವೀರಶೆಟ್ಟಿ ತಾಯಿ ಸಂಗಮ್ಮ ದಂಪತಿಗಳ ಉದರದಲ್ಲಿ 20.12.1970 ರಂದು ಜನಸಿದರು

 ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ, ಪ್ರೌಢ ಶಿಕ್ಷಣವನ್ನು ಕಲ್ಬುರ್ಗಿ ಜಿಲ್ಲೆಯ ಕಲ್ಮೂಡ ಗ್ರಾಮದಲ್ಲಿ , ಪದವಿ ಶಿಕ್ಷಣವನ್ನು ಬೀದರನ ಕರ್ನಾಟಕ ಕಾಲೇಜನಲ್ಲಿ, ಉನ್ನತ ಶಿಕ್ಷಣಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಂ. ಎ. ಪದವಿ ಪೂರ್ಣಗೊಳಿಸಿದರು.

 ಪಿ.ಎಚ್.ಡಿ ಓದುವ ಸಂದರ್ಭದಲ್ಲಿ 1997 ರಂದು ಸರ್ಕಾರಿ ಪದವಿಪೂರ್ವ ಕಾಲೇಜನಲ್ಲಿ ಇತಿಹಾಸ ಉಪನ್ಯಾಸಕ ಉದ್ಯೋಗ ಒದಗಿ ಬಂತು ಕೆಲವು ದಿನಗಳ ನಂತರ 

 ಶಿಕ್ಷಣ ಇಲಾಖೆ ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರನ್ನಾಗಿ ಸರ್ಕಾರ ನೇಮಿಸಿತ್ತು 

ದಡ್ಡೆಯವರು ಕರ್ತವ್ಯದ ಜೊತೆ ಕವನ ವಾಚನ, ಕವಿಗೋಷ್ಠಿ , ಸಂವಾದಕರಾಗಿ ,ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, 2002ರಲ್ಲಿ ದೂರದರ್ಶನದಲ್ಲಿ ಕವನ ವಾಚನ ಮಾಡಿದರು .2016 ರಲ್ಲಿ ಚಂದನ ವಾಹಿನಿಯ ""ಬೆಳಗು"" ಕಾರ್ಯಕ್ರಮದಲ್ಲಿ,

ಆಕಾಶವಾಣಿಯಲ್ಲಿ ಉಪನ್ಯಾಸ ನೀಡಿದರು .

ಹೆಜ್ಜೆ (ಕವನ ಸಂಕಲನ),ಕವಿಗಳು ಕಂಡ ಬಸವಣ್ಣ,

ಮಗು ನೀ ಜ್ನ್ಯಾನಿಯಾಗು, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಬೆಮಳಖೆಡಾ ಇತಿಹಾಸ,ವೈಜ್ಞಾನಿಕ ದ್ರಷ್ಟಿಯಲ್ಲಿ ವಿಭೂತಿ ಮಹತ್ವ , ನಾಕಂಡ ಮಥುರಾ ಪ್ರವಾಸ ಕಥನ ಕೃತಿಗಳು , ದಡ್ಡೆವರ ಕುರಿತು ಗಿತೋಪಾಸಕ ಅಭಿನಂದನ ಗ್ರಂಥ ಕೂಡ ಪ್ರಕಟಣೆಗೊಂಡಿವೆ.

ಇವರ ಸಾಹಿತ್ಯ ಸೇವೆ ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು ಏಳನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾಡಿದೆ 

ಪ್ರಶಸ್ತಿ ಗೌರವ

1)ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ.

2)ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

3)ಜಿಲ್ಲಾಡಳಿತದಿಂದ ರಾಜ್ಯೋತ್ಸವದ ಪ್ರಶಸ್ತಿ.

4)ದೇಶಪಾಂಡೆ ಪ್ರತಿಷ್ಠಾನ:-ಕೃಷ್ಣ ರತ್ನ ಪ್ರಶಸ್ತಿ (2017)

5)ಕಾಯಕ ಶಿಕ್ಷಣ ರತ್ನ ಪ್ರಶಸ್ತಿ :ಶರಣ ಸಂಸ್ಕೃತಿ ಪ್ರಸಾದ ವೇದಿಕೆ ಗೌರವಿಸಿವೆ.

ದಡ್ಡೆಯವರು ಶ್ರೀ ಮತಿ ರೇಣುಕಾ ಅವರನ್ನು ಮದುವೆಯಾದರು ಇವರಿಗೆ ವೈಭವ ದಡ್ಡೆ, ಕೇಶವ, ಮಕ್ಕಳಿದ್ದಾರೆ ಒಬ್ಬರು ವೈದ್ಯರಾಗಿ ಕಾರ್ಯನಿರ್ವಹಿಸಿದರೆ . ಇನ್ನೊಬ್ಬ ಮಗ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದಾನೆ. ಓಂಪ್ರಕಾಶ್ ದಡ್ಡೆಯವರು ಇನ್ನು ಹೆಚ್ಚಿನ ಸಾಹಿತ್ಯ ಮತ್ತು ಸಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಮಾಡಲಿ ಎಂದು ಹಾರೈಸುತ್ತೇನೆ.

-ಓಂಕಾರ ಪಾಟೀಲ

ಕಾರ್ಯದರ್ಶಿಗಳು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.