ವಾಡಿ | ಬಿಜೆಪಿ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ವಾಡಿ | ಬಿಜೆಪಿ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ವಾಡಿ: ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಿಜೆಪಿ ಮುಖಂಡರು.

ಈ ವೇಳೆ ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ವಾಲ್ಮೀಕಿಯನ್ನು ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂದು ಗೌರವಿಸಲಾಗುತ್ತದೆ. ಅವರು ಮಹಾನ್ ಋಷಿ ಮತ್ತು 24,000 ಶ್ಲೋಕಗಳು ಮತ್ತು 7 ಕಾಂಡಗಳು ಒಳಗೊಂಡಿರುವ ರಾಮಾಯಣ ಮಹಾಕಾವ್ಯ ರಚಿಸಿ ನಮ್ಮ ಬದುಕಿಗೆ ನಾಂದಿ ಹಾಡಿದರು. 

ಭೂಮಿಯಲ್ಲಿ ಪರ್ವತ ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯೂ ಅಮರ ಕವಿಯಾಗಿರುತ್ತಾರೆ ಎಂದು ಮಹಾಕವಿ ವಾಲ್ಮೀಕಿಯನ್ನು ಅವರ ಜಯಂತಿ ಆಚರಿಸುವ ಮೂಲಕ ಸ್ಮರಿಸೋಣ.

ಕುಟುಂಬ,ಸಮಾಜ ಮತ್ತು ತಾಯ್ನಾಡಿನಲ್ಲಿ ಯಾವ ರೀತಿ ಮಾನವೀಯ ಮೌಲ್ಯಗಳಿಂದ ಬಾಳುಲು ಈ ಮಹರ್ಷಿ ವಾಲ್ಮೀಕಿ ಅವರು ಶ್ರೀ ರಾಮನ ಜೀವನ ಚರಿತ್ರೆ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮಾತನಾಡಿದರು.

ಈ ಸಂಧರ್ಭದಲ್ಲಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ ಮುಖಂಡರಾದ ರಮೇಶ ಕಾರಬಾರಿ, ವಿಠಲ ನಾಯಕ, ಗಿರಿಮಲ್ಲಪ್ಪ ಕಟ್ಟಿಮನಿ,ಸಿದ್ದಣ್ಣ ಕಲ್ಲಶೆಟ್ಟಿ,ತುಕಾರಾಮ ರಾಠೋಡ, ಕಿಶನ ಜಾಧವ,ಪ್ರಮೋದ್ ಚೋಪಡೆ,ರಾಜು ಪವಾರ,ಉಮಾಭಾಯಿ ಗೌಳಿ,ದೇವೇಂದ್ರ ಬಡಿಗೇರ, ದತ್ತಾ ಖೈರೆ,

ವೀರೇಶ ಸೊಲ್ಹಳ್ಳಿ,ನೀಲಕಂಠ ಕಮರವಾಡಿ ಸೇರಿದಂತೆ ಇತರರು ಇದ್ದರು.