ದೀಪದ ಹಾಗೆ ಮನುಷ್ಯ ಇನ್ನೊಬ್ಬರ ಬಾಳಿಗೆ ಬೆಳಗಾಗಲಿ :..ಘನಲಿಂಗ ಸ್ವಾಮಿಜೀ.
|ಸಿದ್ದಾರೂಡ ಮಠ : ಕಾರ್ತಿಕ ಮಾಸದ ದೀಪೋತ್ಸವ|
ದೀಪದ ಹಾಗೆ ಮನುಷ್ಯ ಇನ್ನೊಬ್ಬರ ಬಾಳಿಗೆ ಬೆಳಗಾಗಲಿ :..ಘನಲಿಂಗ ಸ್ವಾಮಿಜೀ.
ಶಹಾಬಾದ : - ಅಜ್ಞಾನ ವನ್ನು ಕಳೆದು ಸುಜ್ಞಾನ ಕಡೆಗೆ ಬೆಳಕು ತೋರುವವನೇ ಗುರು ಎಂದು ನೀರಲ್ಕೇರಿ ಪೂಜ್ಯರಾದ ಘನಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಕೋಳಸಾ ಫೈಲ್ ಬಡಾವಣೆಯ ಸಿದ್ದಾರೂಡ ಮಠದಲ್ಲಿ ಕಳೆದ 8 ವರ್ಷಗಳಿಂದ ನಿರಂತರವಾಗಿ ದೀಪೋತ್ಸವವನ್ನು ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಎಂಬಂತೆ ದೀಪದ ಬತ್ತಿ ತನ್ನನ್ನು ತಾನು ಸವಿಸಿಕೊಂಡು ಬೆಳಕು ನೀಡುವಂತೆ ಮನುಷ್ಯ ಇನ್ನೊಬ್ಬರ ಬಾಳಿಗೆ ಬೆಳಗಾಗ ಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ತಿಕ ಮಾಸ ರಾಜ್ಯದಾದ್ಯಂತ ಭಕ್ತಿ-ಸಂಭ್ರಮದಿಂದ ಆಚರಿಸಲ್ಪಡುತ್ತದೆ, ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ನ.17ರಂದು ರಾಜ್ಯದ ಪ್ರಮುಖ ಮಠ ಮತ್ತು ದೇಗುಲಗಳು ಸೇರಿದಂತೆ ಹಲವೆಡೆ ಲಕ್ಷ ದೀಪೋತ್ಸವ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿದರು
ದೀಪೋತ್ಸವದ ಹಿನ್ನೆಲೆಯಲ್ಲಿ ಸಿದ್ದಾರೂಡ ಮಠದಲ್ಲಿ ವಿದ್ಯುತ್ ಬೆಳಕಿನಿಂದ ಜಗಮಗಿಸಿತ್ತಿತ್ತು, ವಿದ್ಯುತ್ ದೀಪಗಳ ಜತೆಗೆ ಮಠವನ್ನು ವಿಶೇಷ ಹೂವಿನ ಜೊತೆ ಸುಂದರವಾಗಿ ರಂಗೋಲಿಯ ಅಲಂಕಾರದಿಂದ ಸಿಂಗರಿಸಲಾಗಿತ್ತು, ಮಠದ ಪರಿಸರ ಶೃಂಗಾರಗೊಂಡಿತ್ತು, ದೀಪೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿದ ಬಡಾವಣೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.
ಚನ್ನಬಸವ ಮಹಾಸ್ವಾಮಿ, ದಯಾನಂದ ಸ್ವಾಮೀಜಿ, ನಾಗಣ್ಣಗೌಡ ಮಾತನಾಡಿದರು.
ವೇದಿಕೆ ಮೇಲೆ ನಗರ ಸಭೆಯ ಮಾಜಿ ಸದಸ್ಯರಾದ ಮೈಲಾರಿ ದಿವೇಕರ, ಬಾಬು ಪೋತ್ರಾಜ, ನರಸಿಂಹಲು ರಾಯಚೂರ, ಮಾದಿಗ ಸಮಾಜದ ಅಧ್ಯಕ್ಷ ವಿಕ್ರಮ ಮೂಲಿಮನಿ, ಮೋಹನ ಗಂಟ್ಲಿ, ಅಬ್ದುಲ್ ಸಮದ್ ಮತ್ತು ನಂದಾದೇವಿ ಉಪಸ್ಥಿತರಿದ್ದರು.
ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಮರಲಿಂಗ ಮುನಗಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಮಲಿಂಗ ಮುದ್ನಾಳ ವಂದಿಸಿದರು.
ದೀಪೋತ್ಸವ ಕಾರ್ಯಕ್ರಮದಲ್ಲಿ ಮಲ್ಲಪ್ಪ ಗೋಳೇದ, ಮನೋಹರ ಮೇತ್ರಿ, ಪರಶುರಾಮ, ಕಾಶೀನಾಥ ಜಿನಕೇರಿ, ನಾಗು ಜಾಲಪುರ, ಗುರುನಾಥ ಕಡೆಚೂರ ಸೇರಿದಂತೆ ಬಡಾವಣೆಯ ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು
. ಸಿದ್ದಾರೂಡ ಮಠದಲ್ಲಿ 2018 ರಿಂದ 1,100 ನೂರು ದೀಪ ಬೆಳಗಿಸಿ ಆರಂಭಿಸಿದ್ದೇವೆ, ಪ್ರತಿ ವರ್ಷ 11 ನೂರು ದೀಪಗಳನ್ನು ಹಚ್ಚುತ್ತಾ ಬಂದಿದ್ದೇವೆ, ಈ ಬಾರಿಯೂ ಕೂಡ 1100 ದೀಪಗಳನ್ನು ಬೆಳಗಿಸಿದ್ದೇವೆ :.
.ರಾಮಲಿಂಗ ಮುದ್ನಾಳ, ಸಿದ್ದಾರೂಡ ಮಠದ ಭಕ್ತ ಶಹಾಬಾದ.
