ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಡಾ ಅಂಬಾರಾಯ ಅಷ್ಠಗಿ ಒತ್ತಾಯ

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ  ಡಾ ಅಂಬಾರಾಯ ಅಷ್ಠಗಿ ಒತ್ತಾಯ

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಡಾ ಅಂಬಾರಾಯ ಅಷ್ಠಗಿ ಒತ್ತಾಯ

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಮತ್ತು ಖಾಲಿ ಇರುವ ಒಟ್ಟು 32000 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜ ಸರ್ಕಾರ ಕಲ್ಯಾಣ ಕರ್ನಾಟಕದ ನೇಮಕಾತಿಯಲ್ಲಿ ಬಳಸುವ ಮಾನದಂಡವನ್ನು ಸರ್ಕಾರಿ ನೌಕರರ ಮುಂಬಡ್ತಿಯಲ್ಲು, ಸಮರ್ಪಕವಾಗಿ ಈಡೇರಿಸಬೇಕು. ಸಚಿವ ಸಂಪುಟ ಕೇವಲ ಹೆಸರಿಗೆ ಮಾತ್ರ ನಡೆದರೆ ಸಾಲದು, ಭಾಗದಲ್ಲಿರುವ ಜಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಪುಟ ಸಭೆ ನಿರ್ಧಾರ ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ. 

ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಘೋಷಣೆ ಮಾಡಿರುವ ಐದು ಸಾವಿರ ಕೋಟಿ ಅನುದಾನ ಬಳಕೆಯಾಗಬೇಕು. ಕಾರಣಾಂತರಗಳಿಂದ ಈ ಹಣ ಬಳಕೆಯಾಗದೆ ಉಳಿಯುತ್ತಿರುವುದು ಈ ಭಾಗಕ್ಕೆ ಮಾಡಿರುವ ಅನ್ಯಾಯ ಎಂದೇ ಪರಿಗಣಿಸಬೇಕಾಗುತ್ತದೆ. 

ಒಟ್ಟಾರೆಯಾಗಿ ಸಂಪುಟ ಸಭೆಯು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.