ಬಳಬಟ್ಟಿಯಲ್ಲಿ ಕುಡಿಯುವ ನೀರಿ ಸಮಸ್ಯೆ - ಮಹಿಳೆರಿಂದ ಗ್ರಾಮ ಪಂಚಾಯಿತಿ ಕಛೇರಿಗೆ ಮುತ್ತಿಗೆ ಕೊಟ್ಟು

ಬಳಬಟ್ಟಿಯಲ್ಲಿ ಕುಡಿಯುವ ನೀರಿ ಸಮಸ್ಯೆ - ಮಹಿಳೆರಿಂದ ಗ್ರಾಮ ಪಂಚಾಯಿತಿ ಕಛೇರಿಗೆ ಮುತ್ತಿಗೆ   

ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರ ಪರದಾಟ – ಪಂಚಾಯತ್ ಕಚೇರಿಯಲ್ಲಿ ಧರಣಿ

ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ವಾರ್ಡ್ ನಂ. 1ರ ಮಹಿಳೆಯರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.

ಗ್ರಾಮದಲ್ಲಿ ಹಲವು ದಿನಗಳಿಂದ ನೀರಿನ ಸಮಸ್ಯೆ ಮುಂದುವರಿದಿದ್ದರೂ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿದ ಪೈಪ್‌ಲೈನ್ ಮತ್ತು ನಲ್ಲಿಗಳು ಕಳಪೆ ಮಟ್ಟದಲ್ಲಿದ್ದು, ಸರಿಯಾಗಿ ಪರಿಶೀಲನೆ ಮಾಡದೆ ಅವುಗಳನ್ನು ಬಳಸಲು ಒಪ್ಪಿಗೆ ನೀಡಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಸ್ಯೆಯಿಂದಾಗಿ ಗ್ರಾಮದಲ್ಲಿನ ಮಹಿಳೆಯರು ಹಾಗೂ ಮಕ್ಕಳು ದೂರದ ಊರುಗಳಿಗೆ ತೆರಳಿ ನೀರು ತರಬೇಕಾದ ದುಸ್ಥಿತಿ ಎದುರಾಗಿದೆ. ಈಗಾಗಲೇ ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸಮ್ಮ (ಚಂದ್ರಶೇಖರ), ಭಾಗಮ್ಮ ಅಣಭಿ, ಚಂದ್ರಕಲಾ ಮಂಜುನಾಥ, ಅನ್ನಮ್ಮ ಅಮೃತ ನಂದಿ, ದೇವಕ್ಕೆಮ್ಮ ನೇಲೋಗಿ, ಸುನಂದ ಮದ್ರಿಕಿ, ನಾಗಮ್ಮ ಇಜೇರಿ, ಶ್ರೀದೇವಿ, ಕವಿತಾ, ಸುಜಾತ, ಬಸಮ್ಮ ಮದರಿ, ಸುಜನ ದಂಡಾ, ನಾಗಣ್ಣ, ಅಪ್ಪಾಸಾಹೇಬ ಪಾಟೀಲ, ಮಲ್ಲಿಕಾರ್ಜುನ ಮದರಿ, ಷಣ್ಮುಖ ಸಜ್ಜನ, ಮುತ್ತುಸ್ವಾಮಿ, ರಮೇಶ್ ನಾಯಕ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.