ಟ್ರಾಮಾಕೇರ್' ದಿನಾಚರಣೆ : ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ

ಟ್ರಾಮಾಕೇರ್' ದಿನಾಚರಣೆ : ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ

ಟ್ರಾಮಾಕೇರ್' ದಿನಾಚರಣೆ : ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ

ಕಲಬುರಗಿ  : 'ಸಂಚಾರ ನಿಯಮಗಳು ಪಾಲಿಸದೆ ಇರುವುದರಿಂದ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ' ಎಂದು ಪೊಲೀಸ್ ಕಮಿಷನ‌ರ್ ಶರಣಬಸವಪ್ಪ ಎಸ್.ಡಿ. ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಗುರುವಾರ ವಿಶ್ವ ಅಪಘಾತ ಜಾಗೃತಿ ದಿನಾಚರಣೆ (ಟ್ರಾಮಾ ಡೇ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಹೇಳಿದರು.

  ಸಂಚಾರ ನಿಯಮಗಳ ಪಾಲಿಸದೆ ಅತಿ ವೇಗವಾಗಿ ಬಹಳ ಚಲಿಸುವುದರಿಂದ 70 ರಷ್ಟು ಅಪಘಾತ ಸಂಭವಿಸುತ್ತಿವೆ.

 ಪ್ರತಿಯೊಬ್ಬ ನಾಗರಿಕರು ಸಂಚಾರ ನಿಯಮ ಪಾಲಿಸಿದರೆ ಅಪಘಾತ ಕಡಿಮೆಯಾಗುತ್ತವೆ ಎಂದು ಹೇಳಿದರು.

 ಅಪಘಾತದ ವಾಹನಗಳಲ್ಲಿ ಸಿಲುಕಿದ ವರನ್ನು ಸಾರ್ವಜನಿಕರು ಮತ್ತು ಪೊಲೀಸರು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಿದರೆ ಅವರ ಪ್ರಾಣ ಉಳಿಸುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಎಸ್.ಪಿ.ಅಡ್ಡೂರ ಶ್ರೀನಿವಾಸಲು ಹೇಳಿದರು.

ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕಾಗಿ ಅಪಘಾತಗಳು ಹಾಗೂ ಸಾವುಗಳು ಹೆಚ್ಚಾಗುತ್ತಿವೆ . ಜನರು ಸಂಚಾರ ನಿಯಮ ಪಾಲಿಸಬೇಕು ಎಂದು ಯುನೈಟೆಡ್ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಂ ಸಿದ್ದಾರೆಡ್ಡಿ ಹೇಳಿದರು.

ಡಾ.ರಾಕೇಶ ಬೇಂದ್ರೆ,ಡಾ.ಮುಜಾಫರ್ ಪೊಲೀಸರಿಗೆ ಪ್ರಥಮ ಚಿಕಿತ್ಸೆ, ಗಾಯಾಳುಗಳ ರಕ್ಷಣೆ ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಿದರು. ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಡಾ.ವೀಣಾ ವಿಕ್ರಮ್ ಸಿದ್ದಾರೆಡ್ಡಿ, ಡಾ.ರಾಜು ಕುಲಕರ್ಣಿ, ಡಾ.ರಾಮಾಚಾರಿ, ಡಾ.ಶ್ರೀಕಾಂತ ರಾಠೋಡ, ಡಾ.ಶೇಖ್ ಅಹಮದ್, ಡಾ.ಮುಜಾಹಿದ್,ಡಾ.ವಿನಯ ಸಾಗರ ಶರ್ಮಾ, ಡಾ.ಸುದರ್ಶನ ಲಾಖೆ, ಡಾ.ಮಂಜುನಾಥ ರೆಡ್ಡಿ, ಡಾ.ಪವನ ಪಾಟೀಲ, ಕೈಲಾಶ ಬನಾಳೆ, ಡಾ.ನಿಶಾಂತ ಜಾಜಿ, , ಎಸಿಪಿಗಳಾದ ಭೂತೇಗೌಡ, ಮಹಮದ್ ಇಸ್ಮಾಯಿಲ್, ಪ್ರಮುಖರಾದ ದಾವೂದ್ ಅಲಿ, ಶರಣು ಪಾಟೀಲ, ಗೀತಾ ಚಿನಕೋಡ, ಚಿದಾನಂದ ಉಪಸ್ಥಿತರಿದ್ದರು.