ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಪುನರ್ ಆರಂಭಕ್ಕೆ ಬಿಜೆಪಿ ಶಾಸಕರು ಹಾಗೂ ರೈತರು ಆಗ್ರಹ
ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಪುನರ್ ಆರಂಭಕ್ಕೆ ಬಿಜೆಪಿ ಶಾಸಕರು ಹಾಗೂ ರೈತರು ಆಗ್ರಹ
ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪ ಪಬ್ಲಿಕ ಗಾರ್ಡನಲ್ಲಿ ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಚಿಂಚೋಳಿಯಲ್ಲಿ ಇರುವ ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಪುನರ ಚಾಲನೆ ಮಾಡಲು ಕೋರ್ಟ್ ಆದೇಶ ನೀಡಿದರು ಸರ್ಕಾರ ಚಾಲನೆ ಮಾಡಲು ಮಿನಾಮೆಷ ಮಾಡುತ್ತಾ ಅವಕಾಶ ನೀಡುತ್ತಿಲ್ಲ ಕೂಡಲೆ ಪ್ರಾರಂಭ ಮಾಡಿ ಅಂತ ರೈತರು ಸರಕಾರಕ್ಕೆ ಒತ್ತಾಯಿಸಿದ್ದಾರೆ .
ನಂತರ ಮಾತನಾಡಿದ ಕಲಬುರಗಿ ಗ್ರಾಮೀಣ ಮತ ಕ್ಷೇತ್ರ ಶಾಸಕರಾದ ಬಸವರಾಜ ಮತ್ತಿಮುಡ.ಚಿಂಚೋಳಿ ಮತ ಕ್ಷೇತ್ರದ ಶಾಸಕರಾದ ಡಾ. ಅವಿನಾಶ ಜಾದವ ವಿಧಾನ ಪರಿಷತ ಶಾಸಕರಾದ ಸುಶಿಲ ನಮೋಶಿ ಮಾಜಿ ವಿಧಾನ ಪರಿಷತ ಸದಸ್ಯರಾದ ಅಮರನಾಥ ಪಾಟೀಲ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡ ನಗರ ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ ಹಾಗು ಕಲಬುರಗಿ ಜಿಲ್ಲೆಯ ಕಬ್ಬುಬೆಳೆಗಾರ ಸಂಘ ಅಧ್ಯಕ್ಷರಾದ ಜಗದೀಶ ಪಾಟಿಲ ರಾಜಾಪುರ ಮುಖಂಡರಾದ ಶರಣಪ್ಪ ತಳವಾರ ರವರು ರಾಜ್ಯ ಸರ್ಕಾರದ ಮುಖ್ಯಮಂತ್ರಿಯ ಪರವಾಗಿ ಸಚಿವರಾದ ಶ್ರೀಯುತ ಸುರೇಶ ಬೈರತಿ ರವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಹಾಗು ಚಿತ್ತಾಪುರ , ಶಾಹಬಾದ , ಕಾಳಗಿ , ಚಿಂಚೋಳಿ ತಾಲುಕಿನ ರೈತರು ಮಾತನಾಡಿದರು ಡಾ. ಮಹೇಂದ್ರ ಆರ ಕೋರಿ ಮುತ್ತಗಾ , ಖೇಮಲಿಂಗಯ್ಯ ಕೊರವಾರ ಮಾತನಾಡಿದರು ಅನೇಕ ರೈತರು ಮಾದ್ಯಮದಲ್ಲಿ ಮಾತನಾಡಿದರು