ಆನಲೈನ್ ಬೆಟ್ಟಿಂಗ್ ಗೇಮಗಳಿಂದ ನಿಷೇಧಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಆನಲೈನ್ ಬೆಟ್ಟಿಂಗ್ ಗೇಮಗಳಿಂದ ನಿಷೇಧಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಕಲಬುರಗಿ: ಆನಲೈನ್ ಬೆಟ್ಟಿಂಗ್ ಗೇಮಗಳಿಂದ ಆಗುತ್ತಿರುವ ಅನಾಹುತಗಳನ್ನು ತಡೆಯುವ ಹಾಗೂ ಆನಲೈನ್ ಬೆಟ್ಟಿಂಗ್ ವೆಬಸೈಟ್‌ಗಳನ್ನು ನಿಷೇಧಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಇಂದಿನ ದಿನಮಾನಗಳಲ್ಲಿ ಆನಲೈನ್ ರಮ್ಮಿ, ಬೆಟ್ಟಿಂಗ್ ಆಪ್‌ಗಳ ಮುಖಾಂತರ ಗೇಮಗಳು ಮೊಬೈಲನಲ್ಲಿ ಆಡಿ ಸಾಲದ ಸುಳಿಯಲ್ಲಿ ಸಿಲುಕಿ ಸಾಲಕಟ್ಟಲು ಆಗದೆ ಹಲವಾರು ಬಡ ಕುಟುಂಬಗಳು ಬೀದಿಗೆ ಬಂದು, ನೇಣು ಹಾಕಿಕೊಳ್ಳುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದುಷ್ಕೃತ್ಯ ನಡೆಯುತ್ತಿರುವುದು ಇಂದಿನ ದಿನಗಳಲ್ಲಿ ನಾವುಗಳು ನೋಡುತ್ತಿದ್ದೇವೆ. ಇದಕ್ಕೆ ಹಲವಾರು ಕಾಲೇಜು ಯುವಕ, ಯುವತಿಯರು ಹಾಳಾಗಿ ತಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಕಾರಣ ಕೂಡಲೇ ಸದರಿ ಮನವಿಯನ್ನು ಪರಿಗಣ ಸಿ, ಕೂಡಲೇ ಆನಲೈನ್ ರಮ್ಮಿ, ಬೆಟ್ಟಿಂಗ್ ಆಫ್ ಮತ್ತು ಗೇಮ್ಗಳನ್ನು, ವೆಬಸೈಟ್‌ಗಳನ್ನು ನಿಷೇಧಿಸಿ ಹಾಳಾಗುತ್ತಿರುವ ಯುವಕ, ಯುವತಿಯರ ಜೀವನವನ್ನು ಕಾಪಾಡಿ, ಬೀದಿಪಾಲಾಗುತ್ತಿರುವ ಹಲವಾರು ಬಡ ಕುಟುಂಬಗಳನ್ನು ಉಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೇನೆಯ ಜಿಲ್ಲಾಧ್ಯಕ್ಷ ಸುಧೀಂದ್ರ ಎಮ್ ಇಜೇರಿ, ಶಿವುಕುಮಾರ ನಾಶಿ, ಸಿದ್ದಲಿಂಗ ರಾಠೋಡ, ರಾಜು ನಾಯಕ, ರಕ್ಷಿತಾ ದಾಮಾ, ರಾಜು ನಿಂಬಾಳಕರ್, ಗಂಗಾಧರ ವಿಶ್ವಕರ್ಮ, ಸುದೀರಹೋಳಕೇರಿ, ಮಹೇಶ ಪಾಟೀಲ, ಮೌನೇಶ ಬೇನಕನಳ್ಳಿ, ಶರಣು ಪಾಂಚಾಳ, ಸಿದ್ದು ಕಲಬಂಡಿ, ಅಪ್ಪುಗೌಡ ಮಾಲಿ ಪಾಟೀಲ, ರೇಣುಕಾ ಅಲ್ಲಮ, ಶಿವಲಿಲಾ, ಶರಣಮ್ಮ ಸೇರಿದಂತೆ ಇತರರು ಇದ್ದರು.