ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ದಸರಾ ದರ್ಬಾರ್

ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ದಸರಾ ದರ್ಬಾರ್

ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ದಸರಾ ದರ್ಬಾರ್ 

ಮೈಸೂರು ದಸರಾ ಮಾದರಿಯಲ್ಲಿ   ಕೊಲ್ಲಾಪುರ ಮಹಾಲಕ್ಷ್ಮಿ ದೇವಿ ಶಕ್ತಿ ಪೀಠದ ಪರಮಪೂಜ್ಯ ಸಿರೋಮಣಿ ಡಾ. ಅಪ್ಪಾರಾವ್ ದೇವಿ ಮುತ್ಯ ಅವರು ನಿರಂತರವಾಗಿ 12 ವರ್ಷಗಳಿಂದ ದಸರಾ ದರ್ಬಾರ್ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು 

ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿಯ ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ಶಕ್ತಿ ದೇವಿ ಪೀಠದಲ್ಲಿ ಶ್ರೀಮಠದ ಪೀಠಾಧಿಪತಿ ಡಾ. ಅಪ್ಪಾರಾವ್ ದೇವಿ ಮುತ್ಯಾ ಮಹಾರಾಜರ ಸಾನ್ನಿಧ್ಯದಲ್ಲಿ ಎರಡನೇ ಮೈಸೂರು ದರ್ಬಾರ್ ಮಾದರಿಯಲ್ಲಿ ಇಲ್ಲಿ ೧೨ನೇ ದಸರಾ ದರ್ಬಾರ್ ಜರುಗಿತು.

ಒಟ್ಟು ಒಂಬತ್ತು ದಿನಗಳವರೆಗೆ ವಿವಿಧ ಧಾರ್ಮಿಕ, ಅಧ್ಯಾತ್ಮ ಚಟುವಟಿಕೆಗಳೊಂದಿಗೆ ದಸರಾ ಹಬ್ಬದಂದು ಸಂಪನ್ನಗೊಂಡಿತು. ದಸರಾ ಜಂಭು ಸವಾರಿ ಮೆರವಣಿಗೆಯನ್ನು ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಬಂದು ಕಣ್ಣುಂಬಿಕೊಂಡರು. ನಂತರ ಪೀಠಾಧಿಪತಿಗಳ ತುಲಾಭಾರ ಮತ್ತು ಧರ್ಮಸಭೆ ನಡೆಯಿತು.

ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀಮಠದ ಪೀಠಾಧಿಪತಿ ಡಾ. ಅಪ್ಪಾರಾವ್ ದೇವಿ ಮುತ್ಯಾ, ಮೂರು ರಾಜ್ಯಗಳಿಂದ ಬಂದ ಭಕ್ತವೃಂದ ನವರಾತ್ರಿ ಸಡಗರ ವೈಭವ ಕಣ್ಣತುಂಬಿಕೊಂಡಿರುವುದು ಸಂತಸದ ಸಂಗತಿ, ಮಹಾಲಕ್ಷ್ಮೀ ಸಿದ್ದಿ ಮಾಡಲಿ ಎಂದು ಪ್ರಾರ್ಥಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು ,

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಭರತನೂರ ವಿರಕ್ತಮಠದ ಪೂಜ್ಯ ಚಿಕ್ಕ ಗುರುನಂಜೇಶ್ವರ ಸ್ವಾಮಿಜಿ ಅವರು ಮಾತನಾಡಿ ನಯವರಾತ್ರಿ ಸಂದರ್ಭದಲ್ಲಿ ಇಲ್ಲಿ ವೈಭವ, ಸಡಗರ ಸಂಭ್ರಮವು ಆನಂದವನ್ನುಂಟು ಮಾಡಿದೆ. ಭಕ್ತರ ಇಷ್ಟಾರ್ಥ ಪೂರೈಸುವ ಪುಣ್ಯ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಆಶೀರ್ವಚನ ನೀಡಿದರು. 

 ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ತೆಲಂಗಾಣ ವೀರಶೈವ ಮಹಾಸಭಾದ ಅಧ್ಯಕ್ಷ ಮಹೇಶ ಮೇತಿ, ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ್ ಮೂಲಗೆ, ವಿವಿ ಠಾಣೆಯ ಪಿಎಸ್‌ಐ ರೇಣುಕಾ, ಪ್ರಮುಖರಾದ ಸಂಗಣ್ಣಗೌಡ ಸಣ್ಣೂರ, ವೀರಭದ್ರಪ್ಪ ಪಾಟೀಲ್, ಅಂಬಾರಾವ ಮಾಲಿಪಾಟೀಲ್, ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ ಬೆನೂರ ಸೇರಿದಂತೆ ಸಮಸ್ತ ಭಕ್ತವೃಂದದವರು ಭಾಗವಹಿಸಿದ್ದರು. ಆರ್ ಜಿ ನಾಗೇಶ್ವರಿ ಕದಂ ನಿರೂಪಣೆ ಮಾಡಿದರು. ನಂತರ ವಿವಿಧ ಕಲಾತಂಡಗಳ ಸಂಗೀತದ ಜುಗಲ್ ಬಂದಿ ಪ್ರೇಕ್ಷಕರನ್ನು ನಗೆಗೆಡಲಲ್ಲಿ ತೇಲಿಸಿತು.

ಅಪ್ಪಾ ಶಕ್ತಿಶ್ರೀ ಪ್ರಶಸ್ತಿ ಪುರಸ್ಕೃತರು

ಬಸವರಾಜ ಕಲಗುರ್ತಿಮಠ (ಜಲತಜ್ಞ), ದೇವಿಂದ್ರಪ್ಪ ಪಾಟೀಲ್, ಸಿದ್ದರಾಮ ಮುನೋಳಿ, ಧೋಂಡಿಬಾ ಚವ್ಹಾಣ, ರವೀಂದ್ರನಾಥ ಪತ್ತಾರ, ಲೋಹಿತ್ ಭಜಂತ್ರಿ (ಸೈನಿಕರು), ಅಣ್ಣಪ್ಪ ಎಸ್.ಜಿ, ಸಲ್ಲಾವುದ್ದಿನ್ ಮಸೂಲ್ದಾರ (ಪೊಲೀಸ್ ಇಲಾಖೆ), ಡಾ. ಗುರುಪ್ರಕಾಶ ಹೂಗಾರ (ಶಿಕ್ಷಣ), ಡಾ. ಶರಣಪ್ರಕಾಶ ಶಟಗಾರ (ವೈದ್ಯ), ಡಾ. ಶರಣಬಸಪ್ಪ ಎಸ್ಕೆ, (ಶಿಕ್ಷಣ), ಶ್ರೀಮಂತ ದೇಶಮುಖ, ಸಂತೋಷಕುಮಾರ ಜೋರಗಿ (ಕೃಷಿ).

ದಸರಾ ಹಬ್ಬ ಭಾರತದ ದಕ್ಷಿಣ ,ಉತ್ತರ ಭಾಗಗಳಲ್ಲಿಯೂ ದುರ್ಗಾಪೂಜೆಯನ್ನು ಆಚರಿಸುತ್ತಾರೆ. ಒಂಬತ್ತು ದಿನಗಳ ಈ ಹಬ್ಬಕ್ಕೆ ನವರಾತ್ರಿ ಎಂದು ಕರೆಯುತ್ತಾರೆ.

ಆಯುಧಪೂಜೆ, ವಿಜಯದಶಮಿಗಳನ್ನೊಳಗೊಂಡ ಹಲವು ಹಬ್ಬದಾಚರಣೆ ಮೈಸೂರು ಪ್ರಾಂತ್ಯದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.

ಪುರಾಣಗಳಲ್ಲಿ ಶ್ರೀರಾಮನು ರಾವಣನ ಮೇಲೆ ಯುದ್ಧ ಮಾಡುವ ಮುಂಚೆ ನವ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಉಲ್ಲೇಖವಾಗಿದೆ. ದುಷ್ಟ ಶಕ್ತಿಯನ್ನು ಧಮನಿಸಿದ ಶ್ರೀರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. 

ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ, ಮನೆಗಳಲ್ಲಿಯೂ ನಾಡಹಬ್ಬವಾಗಿ ಪ್ರಚಲಿತವಾಯಿತು.

ಇಂದು ಕಲಬುರಗಿ ನಗರದ ಶ್ರೀನಿವಾಸ ಸರಡಗಿಯ ಕೊಲ್ಲಾಪುರ್ ಮಹಾಲಕ್ಷ್ಮಿ ದೇವಿ ಶಕ್ತಿ ಪೀಠದಲ್ಲಿ 12 ವರ್ಷಗಳಿಂದ ದಸರಾ ಹಬ್ಬದ ಆಚರಿಸುತ್ತಿರುವುದು ಉತ್ತರ ಕರ್ನಾಟಕದಲ್ಲಿ ದಸರಾ ದರ್ಬಾರ್ ಹೆಸರು ಮಾಡಿದೆ. ಈ ಸಂಸ್ಕೃತಿಕ ಹಬ್ಬವನ್ನು ಆಚರಿಸಲು ಇಲ್ಲಿಯ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ಜನರು ಹೇಳುತ್ತಾರೆ.