ಚಿಂಚೋಳಿ: ಮಕ್ಕಳ ತಜ್ಞನಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಡಾ. ಸಂತೋಷ ಪಾಟೀಲ

ಚಿಂಚೋಳಿ: ಮಕ್ಕಳ ತಜ್ಞನಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಡಾ. ಸಂತೋಷ ಪಾಟೀಲ
ಚಿಂಚೋಳಿ: ಚಿಂಚೋಳಿಗೆ ವೈದ್ಯಾಧಿಕಾರಿಯಾಗಿ ನಾನು ಚಿಂಚೋಳಿ ಆಸ್ಪತ್ರೆಯಲ್ಲಿ ಸೇವೆಗೆ ಬಂದಾಗ ರಾತ್ರಿ ತಿನ್ನಲು ಊಟ ಸಿಗುತ್ತಿರಲಿಲ್ಲ ಪಾವ್ ಭಜಿ ತಿಂದು ರಾತ್ರಿ ಕಳೆದಿದ್ದೇನೆ. ಒಂದುವರೆ ದಶಕದಲ್ಲಿ ಚಿಂಚೋಳಿ ಈಗ ಅಭಿವೃದ್ಧಿ ಹೊಂದಿದೆ ಇಲ್ಲಿ ವೈದ್ಯಾಧಿಕಾರಿಯಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ಶಹಾಬಾದ ಸಮುದಾಯ ಆಸ್ಪತ್ರೆಗೆ ವರ್ಗವಾಗಿರುವ ಚಿಂಚೋಳಿ ತಾಲ್ಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಕ್ಕಳ ತಜ್ಞ ಡಾ.ಸಂತೋಷ ಪಾಟೀಲ ತಿಳಿಸಿದರು.
ಅವರು ತಾಲ್ಲೂಕಾ ಆಸ್ಪತ್ರೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಇಲ್ಲಿ ವೈದ್ಯಾಧಿಕಾರಿ ಸೇವೆ ಸಲ್ಲಿಸುವಾಗ ಸುಮಾರು 6 ವರ್ಷ ಕೇವಲ ಇಬ್ಬರು ವೈದ್ಯರು ಮಾತ್ರ ಇದ್ದೇವು. ನನಗೆ ಕನ್ನಡ ಬರುತ್ತಿರಲಿಲ್ಲ. ಕನ್ನಡ ಕಲಿತೆ. ಅನೇಕರು ಚಿಂಚೋಳಿ ಎಂದರೆ ನನಗೆ ಭಯ ಹುಟ್ಟಿಸಿದರು ಆದರೆ ಇಲ್ಲಿ ಅಂತಹ ವಾತಾವರಣ ಇರದೇ ಉತ್ತಮ ವಾತಾವರಣವಿದೆ. ನಾನು ಚಿಂಚೋಳಿಯವನಾಗಿಯೇ ಜನರ ಸೇವೆ ಮಾಡಿದ್ದೇನೆ. ಜನರು, ಮುಖಂಡರು, ಅಧಿಕಾರಿ ವರ್ಗದವರು ಒಳ್ಳೆಯವರಿದ್ದಾರೆ. ಸುಮಾರು 14 ವರ್ಷ ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದೆ. ನನ್ನ ತಂದೆ ಒಂದು ಮಾತು ಹೇಳಿದ್ದರು ಯಾವಾಗಲೂ ಒಳ್ಳೆಯದುಮಾಡುತ್ತ ಹೋಗು ನಿನಗೂ ಒಳ್ಳೆಯದಾಗುತ್ತೆ ಎಂದಿದ್ದರು ಇದನ್ನೂ ವೇದವಾಕ್ಯದಂತೆ ಪಾಲಿಸಿಕೊಂಡುಬಂದಿದ್ದೇನೆ ಎಂದು ಡಾ. ಸಂತೋಷ ಪಾಟೀಲ ತಿಳಿಸಿದರು. ಕಾರ್ಯಕ್ರಮದಲ್ಲಿ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಲಾಜಿ ಪಾಟೀಲ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಟಿಎಚ್ಒ ಡಾ ಮಹಮದ ಗಫಾರ, ಮುಖಂಡರಾದ ಕೆ.ಎಂ. ಬಾರಿ, ಲಕ್ಷ್ಮಣ ಅವುಂಟಿ, ಡಿ. ಶಾಮರಾವ್, ವಿಜಯಾ ಮೊದಲಾದವರು ಮಾತನಾಡಿದರು. ಡಾ. ಅಬ್ದುಲ್ ಅಜೀಜ್, ಡಾ. ಶಿವರಾಜ ಸಜ್ಜನಶೆಟ್ಟಿ, ಡಾ. ರಾಜೇಶ, ಡಾ. ಪ್ರೇಮ, ಡಾ. ಐಶ್ವರ್ಯರಡ್ಡಿ, ಡಾ. ದೀಪಾ, ಸಿಪಿಐ ಕಪಿಲದೇವ,ಅಬ್ದುಲ್ ಬಾಷೀತ, ಭೀಮಶೆಟ್ಟಿ ಮುರುಡಾ ಜಗನ್ನಾಥ ಶೇರಿಕಾರ, ಮೊಯಿಜ್ ಪಟೇಲ, ಶಿವರಾಜ, ಮಹಿಬೂಬಶಾ, ಮೊದಲಾದವರು ಇದ್ದರು. ವರ್ಗಾವಣೆ ಪ್ರಯುಕ್ತ ಡಾ. ಸಂತೋಷ ಪಾಟೀಲ ಡಾ. ಶಿವಗೀತಾ ಪಾಟೀಲ ದಂಪತಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.