ಆದರ್ಶ ಶಿಕ್ಷಕರು ಮಾತ್ರ ಉತ್ತಮ ಮಾರ್ಗದರ್ಶಕ ಗುರು ಪ್ರಸಾದ ಡಯಟ ಕಾಲೇಜಿನ ಪ್ರಾಚಾರ್ಯ

ಆದರ್ಶ ಶಿಕ್ಷಕರು ಮಾತ್ರ ಉತ್ತಮ ಮಾರ್ಗದರ್ಶಕ    ಗುರು ಪ್ರಸಾದ ಡಯಟ ಕಾಲೇಜಿನ ಪ್ರಾಚಾರ್ಯ

ಆದರ್ಶ ಶಿಕ್ಷಕರು ಮಾತ್ರ ಉತ್ತಮ ಮಾರ್ಗದರ್ಶಕ ಗುರು ಪ್ರಸಾದ ಡಯಟ ಕಾಲೇಜಿನ ಪ್ರಾಚಾರ್ಯ 

ಇಂದು ಹೈ.ಕ.ಶಿ.ಶಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬೀದರ. ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೋ.ಪರಮೇಶ್ವರ ನಾಯಕ ಕುಲಸಚಿವರು (ಮೌಲ್ಯಮಾಪನ) ಬೀದರ ವಿಶ್ವವಿದ್ಯಾಲಯ ಬೀದರ, ಗುರುವಿನ ಶ್ರೇಷ್ಠ ವೃತ್ತಿಯನ್ನು ಹೊಗಳಿದರು.ಜೊತೆಗೆ ಪ್ರಾಥಮಿಕ,ಉನ್ನತ ಹಂತ,ತರಬೇತಿ ಹಂತದ ಶಿಕ್ಷಕರ ಸ್ಥಾನದ ಮಹತ್ವವನ್ನು ಒತ್ತಿ ಹೇಳಿದರು. ಶಿಕ್ಷಕ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವಷ್ಟೆ ಅಲ್ಲ,ಜೀವನದ ಪಾಠಗಳನ್ನು ಕಲಿಸಬೇಕು.ಶಿಕ್ಷಕ ಪ್ರತಿ ವಿದ್ಯಾರ್ಥಿಯ ಬದುಕಿಗೆ ಪ್ರೇರಣೆಯಾಗಬೇಕು. 

ಕಾರ್ಯಕ್ರಮದ ಅತಿಥಿ ವಹಿಸಿದ ಡಯಟ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗುರುಪ್ರಸಾದ ಆವರು ಡಾ,ರಾಧಾಕೃಷ್ಣನವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು ಒಂದು ಸಂತಸದ ವಿಷಯ, ಶಿಕ್ಷಕರು ಕೇವಲ ಪಾಠವನ್ನು ಕಲಿಸುವವರಲ್ಲ,ಅವರು ಸಮಾಜಕ್ಕೆ ಆದರ್ಶ ವ್ಯಕ್ತಿತ್ವವನ್ನು ನೀಡುವವರಾಗಿದ್ದಾರೆ ಎಂದು ಹೇಳಿದರು.ಹೊಸ ಹೊಸ ಬಗೆಯ ವಿಷಯಗಳ ಸಂಗ್ರಹ, ನಿರಂತರವಾಗಿ ಕಲಿಕೆಯಲ್ಲಿ ತೊಡಗಿ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ಸಿದ್ದರಾಗಿರಬೇಕು ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಕಾಲೆಜಿನ ಪ್ರಾಂಶುಪಾಲರು ಡಾ. ಮಲ್ಲಿಕಾರ್ಜುನ ಸಿ, ಕನಕಟ್ಟೆ ಅವರು ಪ್ರಚಲಿತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕನ ಮಹತ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ತನ್ನ ಸಾಮರ್ಥ್ಯದಿಂದ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಬೇಕು.ತನ್ನ ಜ್ಞಾನ ವಿಸ್ತರಣೆಯ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಐ.ಕ್ಯು.ಎ.ಸಿ. ಸಂಯೋಜಕರಾದ ಡಾ. ಸಂತೋಷಕುಮಾರ ಸಜ್ಜನ ಉಪಸ್ಥತರಿದ್ದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ರಾಜಕುಮಾರ ಶಿಂಧೆ, ಡಾ.ಸಿದ್ರಾಮ ನೇಂಗಾ, ಶ್ರೀಮತಿ ಶಿಲ್ಪಾ ಹಿಪ್ಪರಗಿ, ಶ್ರೀಮತಿ ವೀಣಾ ಜಲಾದೆ, ಶ್ರೀಮತಿ ಸಂಗಿತಾ ಪಾಟೀಲ, ಶ್ರೀಮತಿ ಸುವರ್ಣಾ ಪಾಟೀಲ, ಶ್ರೀ ಆಶೋಕ ರೇವಣೆ, ಶ್ರೀಮತಿ ತ್ರೀವೇಣಿ ಪಾಟೀಲ, ನೂರ ಪಾಶಾ.ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರುಪಣೆ ಶಿವಶರಣು ನಡೆಸಿದರೆ,ಸ್ವಾಗತ ಶ್ರೀನಿವಾಸ ಮತ್ತು ವಂದನಾರ್ಪಣೆ ಭಾಗಿರಥಿ ನಡೆಸಿಕೊಟ್ಟರು.

ವರದಿ: ಮಛಂದ್ರನಾಥ ಕಾಂಬಳೆ ಬೀದರ