ಮೌನೇಶ್ವರ ವಚನಗಳಲ್ಲಿ ವಿಶ್ವಧರ್ಮದ ಸಾರವಿದೆ: ಡಾ. ಎಸ್ ಎಮ್. ಹಿರೇಮಠ

ಮೌನೇಶ್ವರ ವಚನಗಳಲ್ಲಿ ವಿಶ್ವಧರ್ಮದ ಸಾರವಿದೆ: ಡಾ. ಎಸ್ ಎಮ್. ಹಿರೇಮಠ

ಮೌನೇಶ್ವರ ವಚನಗಳಲ್ಲಿ ವಿಶ್ವಧರ್ಮದ ಸಾರವಿದೆ: ಡಾ. ಎಸ್ ಎಮ್. ಹಿರೇಮಠ 

ಆಳಂದ: ನಗರದ ಹೃದಯ ಭಾಗದಲ್ಲಿರುವ ಶ್ರೀ ಸಿದ್ದಲಿಂಗ ಶಿವಾಚಾರ್ಯ ಹಿರೇಮಠ ಶಾಲಾ ಆವರಣದಲ್ಲಿ ಆಯೋಜಿಸಿದ ಧರ್ಮ ಚಿಂತನ ಗೋಷ್ಠಿ ಹಾಗೂ ಶ್ರೀ ಮೌನೇಶ್ವರ ವಚನಗಳ ಚಿಂತನ ಮಂ ಮಂಥನ ಕಾರ್ಯಕ್ರಮದಲ್ಲಿ ಗುವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಎಸ್ ಎಮ್. ಹಿರೇಮಠ ಮಾತನಾಡಿ ವಚನ ಸಾಹಿತ್ಯ ಸರ್ವಕಾಲಿಕ ಸತ್ಯದ ಅನುಭವಗಳನ್ನು ತಿಳಿಸುತ್ತವೆ. ಅದರಂತೆ ಮೌನೇಶ್ವರ ವಚನಗಳಲ್ಲಿ ವಿಶ್ವಧರ್ಮದ ಸಾರವಿದೆ ಎಂದು ಅಭಿಪ್ರಾಯ ಪಟ್ಟರು. ಶ್ರೀ ಮಠವು ಅತ್ಯಂತ ಪುರಾತನ ಇತಿಹಾಸ ಹೊಂದಿದೆ ಇಲ್ಲಿನ ಶಿಕ್ಷಣ ಧಾರ್ಮಿಕ ಪರಂಪರೆ ಸರ್ವರಿಗೂ ಸಿಗುವಂತಾಗಲಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ ಜಂಟಿನಿದೇರ್ಶಕ ಶಿವಶರಣಪ್ಪ ಮೂಳೆಗಾಂವ ಆಶಿಸಿದರು. ಇದೇ ಸಂದಭ೯ದಲ್ಲಿ ಸಂಬುದ್ದ ಅಧ್ಯಯನ ಸಂಸ್ಥೆಯ ಸಂಯೋಜನಾಧಿಕಾರಿ ಡಾ. ಮೋನಪ್ಪ ಎಲ್. ಸುತಾರ ಮೌನೇಶ್ವರ ವಚನಗಳ ಕುರಿತು ಉಪನ್ಯಾಸ ನೀಡಿದರು. ಶ್ರೀ ಸಿದ್ದೇಶ್ವರ ಶಿವಾಚಾರ್ಯ 11 ನೇ ವರ್ಷದ ಪಟ್ಟಾಧಿಕಾರದ ಸವಿ ನೆನಪಿಗಾಗಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕ ಘಟಕದ ವತಿಯಿಂದ ಶ್ರೀ ಗಳಿಗೆ ಪುಷ್ಪಾರ್ಚನೆ ಮತ್ತು ಗುರುವಂದನೆ ಸಲ್ಲಿಸಲಾಯಿತು. ಮಲ್ಲಿನಾಥ ಯಲಶೆಟ್ಟಿ, ಡಿ.ಎಂ ಪಾಟೀಲ, ಅಪ್ಪಾಸಾಹೇಬ ತೀರ್ಥೆ, ಬಸವರಾಜ ವಿಶ್ವಕರ್ಮ, ಶಿವಲಿಂಗ ಮಂಟಗಿ, ವೀರಯ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ವರದಿ ಡಾ. ಅವಿನಾಶ .S.D.