ವಚನವಿದ್ರುಮ : ಆಧುನಿಕ ವಚನಗಳ ವಿಮರ್ಶೆ

ವಚನವಿದ್ರುಮ : ಆಧುನಿಕ ವಚನಗಳ ವಿಮರ್ಶೆ

ವಚನವಿದ್ರುಮ : ಆಧುನಿಕ ವಚನಗಳ ವಿಮರ್ಶೆ 

ಆಧುನಿಕ ವಚನಗಳು ಹನ್ನೆರಡನೇ ಶತಮಾನದ ಶರಣರಂತೆ ಆದರ್ಶ ಬದುಕಿಗೆ ಪೂರಕವಾಗಿವೆ.

ಪ್ರಾಚೀನ ವಚನ ಸಾಹಿತ್ಯದಂತೆಯೇ ಆಧುನಿಕ ವಚನ ಸಾಹಿತ್ಯವು ಕೂಡ ಸತ್ವಯೂತವೂ, ಸಮೃದ್ಧವೂ,ವೈವಿಧ್ಯಮಯವೂ, ಸಂಪತ್ಭರಿತವೂ ಆಗಿದೆ.

ಪ್ರಸ್ತುತ ಕನ್ನಡದ ಅನೇಕ ಸಾಹಿತಿಗಳು ಮೌಲ್ಯಯೂತವಾದ ವಚನ ರಚನೆ ಮಾಡಿದ್ದಾರೆ ಹಾಗು ಮಾಡುತ್ತಿರುವರು ಕೂಡ.

ಇಂಥ ಅನೇಕ ಮಹಾನ್ ಬರಹಗಾರರು ವಚನಗಳ ಮಾದರಿಯನ್ನು ಅನುಸರಿಸಿಕೊಂಡು ಅತ್ಯಮೂಲ್ಯ ಸಾಹಿತ್ಯವನ್ನು ರಚಿಸಿದವರಲ್ಲಿ ಒಬ್ಬರಾದ ನಮಗೂ ನಿಮಗೂ ಚಿರಪರಿಚಿತರಾದ ಸಾಹಿತಿಗಳು, ಕವಿಗಳು, ಉತ್ತಮ ಕಥೆಗಾರರಾದ ಬಸವ ಮಾರ್ಗದಲ್ಲಿ ನಡೆಯುವ ಹಿರಿಯರು ಆತ್ಮೀಯರು ಉತ್ತಮ ಬರಹಗಾರರಾದ ಡಾ.ಸೋಮನಾಥ ಯಾಳವಾರರವರು.

ಆಳವಾದ ಅಧ್ಯಯನ, ಘಾಡಚಿಂತನ, ಮರ್ಮಿಕವಾದ ಲೇಖನ, ಮತ್ತು ಉಪನ್ಯಾಸಗಳಿಂದ ಮನೆಮಾತಾಗಿರುವ ಇವರು ಸ್ರಜನಶೀಲ ಸ್ವಭಾವದವರು. ವಿಮರ್ಶೆ, ವಿಶ್ಲೇಷಣೆ, ಸಂಪಾದನೆ, ಮುಂತಾದ ಸಾಹಿತ್ಯದ ಆಯಾಮಗಳನ್ನು ಶುದ್ಧತೆ ಮತ್ತು ಮತ್ತು ಬದ್ಧತೆಯಿಂದ ನಿರ್ವಹಿಸುವ ಘನ ವಿದ್ವಾಂಸರು, ಕಾವ್ಯ, ಕಥೆ, ಲೇಖನ ವಚನ ಮತ್ತು ವ್ಯಕ್ತಿಚಿತ್ರಣ ಮುಂತಾದ ವಾಂಗ್ಗ್ಮಯ, ವೈವಿದ್ಯತೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಪ್ರಭುದ್ದ ಲೇಖಕರು ಸೋಮನಾಥ ಯಾಳವಾರವರು.

ವಚನಗಳು ಅಂದಾಕ್ಷಣ ನಮ್ಮ ಮನಸಲ್ಲಿ ಅಚೋತ್ತುವದು ಹನ್ನೆರಡನೇ ಶತಮಾನದ ಶರಣರ ವಚನ ಸಾಹಿತ್ಯ, ಅದೇ ಶರಣರ ಹಾದಿಯಲ್ಲಿ ನಡೆಯುತ್ತಿರುವ ಆಧುನಿಕ ವಚನಕಾರರು ಶ್ರೀಯುತ ಯಾಳವಾರರವರು, ಇವರು *ವಚನವಿದ್ರುಮ ಅನ್ನುವ ಆಧುನಿಕ ವಚನ ಸಂಕಲನ ತರುವದರೊಂದಿಗೆ ಓದುಗರರ ಎದೆಗೆ ಲಗ್ಗೆಯಿಟ್ಟಿರುವರಲ್ಲದೆ, ಜನರ ಮನೆ ಮತ್ತು ಮನಸ್ಸಿಗೆ ಹತ್ತಿರವಾಗಿದ್ದಾರೆ.

ವಚನವಿದ್ರುಮ ಆಧುನಿಕ ವಚನಗಳು ಈ ಪುಸ್ತಕ ಸುಮಾರು ನೂರ ಎಪ್ಪತ್ತ್ನಾಲ್ಕು ವಚನಗಳು ಒಳಗೊಂಡಿರುವ ಒಂದು ವಿಶಿಷ್ಟವಾದ ಉತ್ತಮ ಕೃತಿಯಾಗಿದೆ.

ಓದುಗರು ವಚನಗಳ ಒಳಹೊಕ್ಕು ಓದುತ್ತಾ ಹೋದರೆ ಬದುಕು, ಜಾತಿ, ಧರ್ಮಕ್ಕೆ ಸಂಬಂಧಪ್ಪಟ, ಹಾಗು ಮನುಷ್ಯನ ಸಣ್ಣತನಗಳು, ರಾಜಕೀಯ, ಬುದ್ಧ, ಬಸವ, ದೇವರು, ಸತ್ಯ ಅಸತ್ಯ ಹೀಗೆ ಸಾಲು ಸಾಲು ಸಂಗತಿಗಳು ನಮ್ಮ ಕಣ್ಮನ ಸೆಳೆಯುತ್ತವೆ.

ಕಿರಿಯದರರಲ್ಲಿ ಹಿರಿಧರ್ಥ ನೀಡುವ ಶಕ್ತಿ ಶ್ರೀಯುತರು ರಚಿಸಿರುವ ವಚನಗಳಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಆಯ್ದುಕೊಂಡು ಇಲ್ಲಿ ನನ್ನ ಭಾವನೆಗೆ ತಕ್ಕಮಟ್ಟಿಗೆ ವಿಮರ್ಶೆ ಮಾಡಿರುವುದನ್ನು ಓದುಗರಿಗಾಗಿ ಇಲ್ಲಿ ಉಲ್ಲೆಖಿಸಿರುವೆನು.

1} "ಮಸಿ ಇಲ್ಲದೆ ಪೆನ್ನು ಅಕ್ಷರ ಬರೆಯಬಹುದೇ?

       ಹಸಿಯಿಲ್ಲದ ನೆಲ ಸಸಿಯು ಬೆಳಸಬಹುದೇ?

       ಖುಷಿಯಿಲ್ಲದ ವ್ಯಕ್ತಿ ನಸುನಗ ಬಲ್ಲನೆ?

       ಹುಸಿ ಮಾತನಾಡುವವ ಸತ್ಯ ಹೇಳಬಲ್ಲನೆ?

       ಸೋಮಲೋಚನಪ್ರೀಯ ಬಸವಣ್ಣ ಕೃಷಿಕನಿರದ 

       ಊರು ಕುಸಮಿಸಬಹುದೇ? ಇಲ್ಲಿ ಕಾಣ ಗುರುವೇ

ಈ ವಚನದ ಬಗ್ಗೆ ವಚನಕಾರರು ಕೃಷಿಕನೆ ನಮ್ಮೆಲ್ಲರ ಬದುಕಿನ ಶಕ್ತಿ ನಮ್ಮೆಲ್ಲರ ಉಸಿರು ಅವನಿಂದಲೆ ಮಾತ್ರ ಜಗವು ಉಸಿರು ಅವನೇ ನಮ್ಮ ನಿಮ್ಮೆಲ್ಲರ ನಿಜವಾದ ಅನ್ನದೇವರು ಅನ್ನುವದನ್ನು ಪ್ರತಿಪಾದಿಸಿದ್ದಾರೆ.

2} ""ಇದ್ದಿದ್ದೇನೆಂದು ಏಳದವರ ಮದ್ಯ ಎಳದಂತಿರಿಸಯ್ಯ.

ಬಿದ್ದಿದ್ದೇನೆಂದು ಬೀಳದವರ ಮದ್ಯ ಬೀಳದಂತಿರಿಸಯ್ಯ.

ಇದ್ದೂ ಇಲ್ಲದಂತಿರುವರ ಮದ್ಯ ಇಲ್ಲದಂತೀರಿಸಯ್ಯ.

ಸದ್ದು ಗದ್ದಲ ಮಾಡುತ ಗುದ್ದಾಡುವರ ಮದ್ಯ ನಿದ್ದೆ ಹೋದವನಂತೆರೀಸಯ್ಯ ಸೋಮಲೋಚನ ಪ್ರೀಯ ಬಸವಣ್ಣ.

ಬದುಕೆಂದರೆ ಆಟ, ಚಿರಾಟ, ಗೋಳಾಟವಿದ್ದು ಈ ಬದುಕಿನಲ್ಲಿ ಸದ್ದು ಗದ್ದಲದ ನಡುವೆ ನಾನು ತೆಪ್ಪಗೆ ಬಾಳಿದರೆ ಸಾಕು ಅನ್ನುವ ಸಂದೇಶವನ್ನು ವಚನಕಾರರು ವಚನದ ಮೂಲಕ ನೀಡಿದ್ದಾರೆ.

3} ""ಬಂತು ನೋಡು ಚುನಾವಣೆ 

ಎಲ್ಲ ಕಡೆಯು ಕಳ್ಳ ಹಣದ ಚಲಾವಣೆ 

ತಂತೂ ನೂರೆಂಟು ಸುಳ್ಳು ಆಶ್ವಾಸನೆ 

ಎಂದೋ ಮಾಡಿದ್ದೂ ನಾವೇ ಮಾಡಿದ್ದೇವೆಂಬ ಘೋಷಣೆ,

ಹೆಂಡ, ಹಣ, ಖಂಡ ವಿತರಣೆ 

ಜಾತಿ ಜಾತಿಗಳ ನಡುವೆ ಘರ್ಷಣೆ 

ಮಾನವ ಸಂಭಂದಗಳ ವಿಘಟನೆ 

ಈ ಚುನಾವಣೆ ನೋಡ ಸೋಮಾಲೋಚನಪ್ರೀಯ ಬಸವಣ್ಣ.

ಪ್ರಸ್ತುತ ಚುನಾವಣೆಗಳು ಪ್ರಜ್ನ್ಯಾವಂತರಿಗೆ ಅಸಹ್ಯ ಹುಟ್ಟಿಸುವ ಚುನಾವಣೆಗಳಾಗಿವೆ. ಮತ ಮಾಡುವ ಮತದಾರರು ಹಣ, ಹೆಂಡ, ಖಂಡಗಳಿಗೆ ಮಾರಾಟವಾಗುತ್ತಿರುವುದು ಭ್ರಷ್ಟ ರಾಜಕಾರಣಿಗಳು ರಾಜಕೀಯ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಜನರು ಜಾಗೃತರಾಗಿ ಮತ ಚಲಾಯಿಸಬೇಕೆಂದು ತನ್ನ ನೋವನ್ನು ವಚನಕಾರರು ಈ ವಚನದ ಮೂಲಕ ವ್ಯಕ್ತಪಡಿಸಿದ್ದಾರೆ.

4} "ಧರ್ಮದ ಹೆಸರಲ್ಲಿ ಬಡಿದಾಡುವರ ಕಂಡು ಮನ ನೊಂದಿದೆ ಅಯ್ಯ.

ಯಾವುದು ಧರ್ಮ -ಯಾವುದು ಅಧರ್ಮ?

ಇವರಿಗೆ ತಿಳಿಸುವುದು ಕಷ್ಟವಯ್ಯ.

ದಯವೇ ಧರ್ಮದ ಮೂಲವೆಂದ ನಿನ್ನ ನುಡಿಯನು ಅವರ ಮತಿಯಲಿ ಮತ್ತೆ ಮತ್ತೆ ಬಿತ್ತು..

ಸೋಮಾಲೋಚನಪ್ರೀಯ ಬಸವಣ್ಣ.

ದೇವರ ಧರ್ಮ ಜಾತಿ ಹೆಸರಲ್ಲಿ ಹೊಡೆದಾಡಿ ಬಡಿದಾಡಿ ಸಾಯುತ್ತಿರುವವರ ಕಂಡು ವಚನಕಾರರು ಇಲ್ಲಿ ಜಾತಿ ಮೇಲು ಕೀಳು ದ್ವೇಷ ಸಾಧಿಸುವ ಧರ್ಮ ಧರ್ಮವಲ್ಲ. ಸಕಲ ಜೀವರಾಶಿಗಳಲ್ಲಿ ದಯವನ್ನು ಕಾಣುವದೆ ನಿಜವಾದ ಮನುಷ್ಯಧರ್ಮವೆಂದು ಅರ್ಥೈಸಿದ್ದಾರೆ.

5} "ನಡೆ ನುಡಿಗೆ ಒಡೆಯ ತಾವೆಂಬರು.

ನಡೆಯುವುದು, ನುಡಿಯುವುದು ಅರಿಯರಯ್ಯ.

ನಡೆಯoಬುದು ನೀನು 

ನುಡಿಯಂಬುದು ನೀನು 

ಆನು ನೀನು ಒಂದಾದ ಬದುಕು ಇದಲ್ಲವೇ?

ಅನೆಂಬುದು ಸೋಹಮ್, ನೀನೆಂಬುದು ದಾಸೋಹಮ್,

ಒಡೆಯನೆಂಬುದು ಹಾಲು ಜೇನು ಬೆರಸಿದಂತೆ ಕಾಣ ಸೋಮಾಲೋಚನ ಪ್ರೀಯ ಬಸವಣ್ಣ.

ಬದುಕಿನಲ್ಲಿ ಶುದ್ಧವಾದ ನಡೆ ನುಡಿಗಳು ಮುಖ್ಯ ನಾನೆಂಬ ಅಹಂ (ಅಹಂಕಾರ) ಅಳೆದು ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ನಾವು ನೀವು ಒಂದಾದ ಬಳಿಕ ಬದುಕು ಹಾಲು ಜೇನಿನಂತೆ ಅನ್ನುವುದು ವಚನದ ಸಾರ.

6} "ಹೆಣ್ಣು ಬೆನ್ನು ಹತ್ತಿದವರು ಮಣ್ಣಾದರು

ಮಣ್ಣು ಬೆನ್ನು ಹತ್ತಿದವರು ತಣ್ಣಗೆ ಮಲಗಿದರು.

ಹೊನ್ನು ಬೆನ್ನು ಹತ್ತಿದವರು ಕಣ್ಣು ಮುಚ್ಚಿದರು 

ಮೂರನ್ನು ಮೂಲೆಗೊತ್ತಿ ನಿಂತವರು ಮಹಾನುಭಾವರಾದರು ಸೋಮಾಲೋಚನ ಪ್ರೀಯ ಬಸವಣ್ಣ.

ವಚನಕಾರರು ತಮ್ಮ ವಚನದ ಮೂಲಕ ಹೆಣ್ಣು ಹೊನ್ನು ಮತ್ತು ಮಣ್ಣಿಗಾಗಿ ಹೊಡೆದಾಡಿ ಸತ್ತಿರುವವರು ಮತ್ತು ಸಾಯುತ್ತಿರುವವರು ನಮ್ಮ ಮದ್ಯದಲ್ಲಿ ಅನೇಕರಿದ್ದಾರೆ.

"ಪಂಪ ಹತ್ತನೇಯ ಶತಮಾನದಲ್ಲಿ ಈ ರೀತಿಯೂ ಹೇಳಿರುವನು.""ಸೋದರೊಳ್ ಸೋದರರು ಕಾದಿಸುವುದು"" ಅನ್ನುವುದನ್ನು ಉಲ್ಲೆಖಿಸಿದ್ದು ಮನುಷ್ಯ ಆಳಿದ ಮೇಲೆ ಉಳಿಯುವುದು ಅವನ ಆಸ್ತಿ ಅಂತಸ್ತು ಅಲ್ಲ. ಅವನ ವ್ಯಕ್ತಿತ್ವ, ಹಾಗಾಗಿ ಹೆಣ್ಣು, ಹೊನ್ನು, ಮಣ್ಣು ಮೂರನ್ನು ಮೂಲೆಗೊತ್ತಿದವರು ಮಹಾನುಭಾವರಾಗುತ್ತಾರೆ ಅನ್ನುವುದು ವಚನದ ಮೂಲಾರ್ಥ.

ಒಟ್ಟಾರೆಯಾಗಿ ಹೇಳುವದಾದರೆ ಇಲ್ಲಿಯ ವಚನಗಳಲ್ಲಿ ಸರಳತೆ, ಸೌಂದರ್ಯತೆ ಹಾಗು ರಸಾನಂದವಿದೆ. ಅನೇಕ ಉತ್ತಮ ಸಂಗತಿಗಳು ಇಲ್ಲಿಯ ವಚನಗಳು ಓದುಗರಿಗೆ ಚಿಂತನೆಗೆ ಹಚ್ಚುತ್ತವೆ ಜಾಗೃತಗೊಳಿಸುತ್ತವೆ. ಯಾಳವರವರು ತಮ್ಮ ಸಾಹಿತ್ಯದ ಮೂಲಕ ನಮ್ಮೆಲ್ಲರ ಪ್ರತಿನಿಧಿಯಾಗಿ ಸಮಾಜವನ್ನು ಎಚ್ಚರಿಸುವಂತ ಕಾರ್ಯವನ್ನು ಮಾಡುತಿದ್ದಾರೆ. ಈ ವಿಚಾರದಲ್ಲಿ ವಚನವಿದ್ರಮ ವಚನ ಸಂಕಲನ ಕೃತಿಯೂ ಆಗ್ರಸ್ಥಾನದಲ್ಲಿದೆಯಂದು ಹೇಳಿದರೆ ತಪ್ಪಾಗಲಾರದು. ಇದುವರೆಗೂ ಒಳ್ಳೆ ಮೌಲ್ಯಯುತವಾದ ಕೃತಿಗಳನ್ನು ಸದಾ ಓದುಗರಿಗಾಗಿ ನೀಡುತ್ತಾ ಬಂದಿರುವ ಡಾ. ಸೋಮನಾಥ ಯಾಳವಾರವರು ಇನ್ನೂ ಹೆಚ್ಚಿನ ಕೃತಿಗಳು ರಚಿಸಲೆಂದು ಆಶೀಸೋಣ. 

ಕೃತಿ :-ವಚನವಿದ್ರುಮ

ಲೇಖಕರು:-ಡಾ. ಸೋಮನಾಥ ಯಾಳವಾರ.

ಮುದ್ರಣ :-2016

ಬೆಲೆ :-ಎಪ್ಪತ್ತು ರೂಪಾಯಿ( 70ru )

  ವಿಮರ್ಶೆ:   ಓಂಕಾರ ಪಾಟೀಲ

ಕಾರ್ಯದರ್ಶಿಗಳು :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.