ಹೋತಪೇಟ ಮೈಲಾರಲಿಃಗೇಶ್ವರ ಜಾತ್ರೆ

ಹೋತಪೇಟ ಮೈಲಾರಲಿಃಗೇಶ್ವರ ಜಾತ್ರೆ

ಹೋತಪೇಟ ಮೈಲಾರಲಿಃಗೇಶ್ವರ ಜಾತ್ರೆ

ನಾಳೆ ಹೋತಪೇಟ ಗ್ರಾಮದಲ್ಲಿ ಶ್ರೀ ಮೈಲಾರಲಿಃಗೇಶ್ವರ ಜಾತ್ರೆ..

ಪ್ರತಿವರ್ಷ ದಂತೆ ಈ ವರ್ಷ ವೂ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಹೋತಪೇಟ ಗ್ರಾಮದಲ್ಲಿ ಶ್ರೀ ಮೈಲಾರಲಿಃಗೇಶ್ವರ ಜಾತ್ರೆ ನೆರವೇರಲಿದೆ. ಈ ಜಾತ್ರೆಯ ಪ್ರಮುಖ ಆಕಷ೯ಣೆ ಪವಾಡಸದೃಶವಾಗಿ ಮೈಲಾರಲಿಃಗೇಶ್ವರ ನ ಸರಪಳಿ ಹರಿಯುವುದು.

 ಮಧ್ಯಾಹ್ನ ಒಂದು ಗಂಟೆಯ ನಂತರ ಪೂಜಾರಿಮೈಮನದಲ್ಲಿ ಶ್ರೀ ಮೈಲಾರಲಿಃಗೇಶ್ವರ ಆಹ್ವಾನ ಗೊಂಡು ಆಶ್ಚರ್ಯ ವೆಂಬಂತೆ ನೋಡುನೋಡುತ್ತಲೇ ಕ್ಷಣಾಧ೯ದಲ್ಲಿ ಸರಪಳಿ ಹರಿದು ಎರಡು ತುಂಡಾಗುವುದೆ ಒಂದು ಪವಾಡ 

ಇದನ್ನು ಪ್ರತ್ಯಕ್ಷವಾಗಿ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಶಹಪೂರ ಪಟ್ಟಣದ ಭಕ್ತರು ಸಾವಿರ ಸಾವಿರ ಸಂಖ್ಯೆಯಲ್ಲಿ ಧಾವಿಸುತ್ತಾರೆ.

  ಹೋತಪೇಟ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಃಗೇಶ್ವರನ ಸರಪಳಿ ಬೆಸೆದು ಕೊಡುವವ ಕಮ್ಮಾರ ಇಸ್ಲಾಂ ಧಮ೯ದವರು ದೇವರ ಅಚ೯ಕರು ನಿಮ್ನವಗ೯ದವರು ಹೀಗೆ ಜಾತಿ ಮತಪಂಥವನ್ನು ಮೀರಿ ಭಾವೈಕ್ಯತೆ ಸಾಕಾರಮೂತಿ೯ ಶ್ರೀ ಮೈಲಾರಲಿಃಗೇಶ್ವರ ಜಾತ್ರೆ.

 ಎಲ್ಲಾ ಕಡೆಗೆ ದಸರಾ ಹಬ್ಬದ ದಿವಸ ಸರಪಳಿ ಹರಿದರೆ ಹೋತಪೇಟ ದಲ್ಲಿ ಏಕಾದಶಿಗೆ ಸರಪಳಿ ಹರಿಯುವ ಜಾತ್ರೆ ನಡೆಯುತ್ತದೆ. ಕಾರಣವೇನಂದರೆ ಸುತ್ತಲಿನ ಭಕ್ತರು ಕೂಡ ಜಾತ್ರೆಯಲ್ಲಿ ಭಾಗವಹಿಸಲು ಅನುಕೂಲ ವಾಗಲೆಂಬುದು ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಬನ್ನಿ ಬಂಗಾರ ಪರಸ್ಪರ ಮುಡಿದು ಪಾವನರಾಗುವ ಈ ಸರಪಳಿ ಹಬ್ಬದ ಜಾತ್ರೆಗೆ ತಮಗೆಲ್ಲರಿಗೂ ಆದರಣೀಯ ಸ್ವಾಗತವಿದೆ. ಬನ್ನಿರಿ ಬನ್ನಿ ಬಂಗಾರ ಮುಡಿದು ಮೈಲಾರಲಿಃಗೇಶ್ವರನ ದರ್ಶನ ಪಡೆದು ಪಾವನರಾಗಬೇಕೆಂದು ಸಿದ್ಧು ಪಟ್ಟೇದಾರ ತಿಳಿಸಿದರು.