ನವ ಸಂಭ್ರಮ ಹೊತ್ತು ಬಂದ ದಸರಾ ಹಬ್ಬ

ನವ ಸಂಭ್ರಮ ಹೊತ್ತು ಬಂದ ದಸರಾ ಹಬ್ಬ

 ನವ ಸಂಭ್ರಮ ಹೊತ್ತು ಬಂದ ದಸರಾ ಹಬ್ಬ

ಭಾರತ ದೇಶವು ಸಂಸ್ಕೃತಿಯಿಂದ ಕೂಡಿದಾಗಿದೆ ಅದಕ್ಕೆ ತನ್ನದೇ ಆದ ಪರಂಪರೆ ಇದೆ.ಆ ಪರಂಪರೆಯಿಂದ ನಡೆದುಕೊಂಡು ಬಂದಿರುವ ನಮ್ಮ ಪೂರ್ವಜರ ಕೊಡಗೆ ಇಂದಿಗೂ ಪ್ರಚಲಿತವಾಗಿದೆ. ಅಂತೆಯೇ ಭಾರತದಲ್ಲಿ ವರ್ಷಾರಂಭ ಚೈತ್ರ ಮಾಸದಿಂದ ಪಾಲ್ಗುಣದ ತನಕವು ಒಂದಿಲೊಂದು ಹಬ್ಬಗಳು ಜನಪದ ಜೀವನವನ್ನು ಚೈತನ್ಯ ಮುಕ್ತವಾಗಿ ಉಳಿದಿವೆ. ಪಂಚಭೂತಗಳಿಲ್ಲದೆ ಜಗತ್ತೇ ಇಲ್ಲ. ನೀರು ಮಣ್ಣು ಆಕಾಶ ಸೂರ್ಯ ಅಗ್ನಿಗಳೇ ನಮ್ಮ ಪೂರ್ವಜನ ಆರಾಧ್ಯ ದೇವರಾಗಿದ್ದು ಕಂಡುಕೊಳ್ಳಬಹುದು. ಹೀಗಾಗಿ ಭಾರತ ಪರಂಪರೆಯಲ್ಲಿ ಕಂಡು ಬಂದಿರುವುದು ಕಾಣಬಹುದು 

ಅದರಲ್ಲಿರುವ ಐತಿಹಾಸಿಕ ಅಂಬಾ ಭವಾನಿ ಘಟಸ್ಥಾಪನೆ ಒಂದು. ಇದು 9 ದಿವಸಗಳ ಕಾಲ ನಡೆಯುವ ಹಬ್ಬ ಲಲಿತ ಪಂಚಮಿ,ಶಾರದಾ ಪೂಜೆ, ದುರ್ಗಾಷ್ಟಮಿ, ತಯೀಪೂಜೆ , ಲಕ್ಷ್ಮಿ ಪೂಜೆ, ಅಷ್ಠಾವಸಾನ ಶಕ್ತಿಯ ಆರಾಧನೆ ಆಯುಧ ಪೂಜೆ, ಬನ್ನಿ ಪೂಜೆ ಅಪರಾಜಿತಾ ಪೂಜೆ ಇತ್ಯಾದಿಗಳೆಲ್ಲವೂ ಈ ನವರಾತ್ರಿಯಲ್ಲಿ ನಡೆಯುತ್ತಿವೆ. ಈ ಹಬ್ಬದಂದು ದೇವಿ ದುರ್ಗೆಯನ್ನು 9 ಸ್ವರೂಪಗಳಲ್ಲಿ ವಿವಿಧ ಹೆಸರುಗಳಲ್ಲಿ ವಿವಿಧ ಬಣ್ಣದ ಸೀರೆಗಳಿಂದ ಅಲಂಕರಿಸುವ ಸಂಸ್ಕೃತಿ ಕಂಡುಕೊಳ್ಳಬಹುದು.ಒಂಬತು ದಿನಗಳ ಕಾಲ ಸೇರಿ ಸೀಗಿ ಹುಣ್ಣಿಮೆ ವರಗೆ ನಿರಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಪ್ರತಿದಿನ ವಿಶೇಷ ಪೂಜೆ ಮಾಡಲಾಗುತ್ತದೆ. 

 ನವ ದುರ್ಗೆಯರು ನಗರ ಪಟ್ಟಣಗಳಲ್ಲಿ ಘಟಸ್ಥಾಪನೆ ಮಾಡುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ಕಂಡುಕೊಳ್ಳಬಹುದು. ಪಿತೃ ಪಕ್ಷದ ಮಹಾಲಯ ಅಮಾವಾಸ್ಯೆ ಕತ್ತಲನ್ನು ಕಳೆದು ಅಶ್ವೀಜ ಶುದ್ಧ ಪಾಡ್ಯದ ದಿನದಿಂದ ನಿರಂತರ 9 ದಿನ ಆಚರಿಸುವ ನವರಾತ್ರಿ ವಿಜಯದಶಮಿಯೊಂದಿಗೆ ಮುಕ್ತಾಯಗೊಳ್ಳುವ ತನಕ ನಡೆಯುವ ಈ ಹಬ್ಬವಾಗಿದೆ. ಹೀಗಾಗಿ ದೇವಿಯು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಈ ಹಬ್ಬದ ವಾಡಿಕೆ ಇದೆ.

 ಹಬ್ಬದಾಚರಣೆ ವಿಧಾನ . ವಿಜಯದಶಮಿ ಒಂದು ಪವಿತ್ರವಾದ ದಿನ. ಮನೆಯಲ್ಲಿರುವ ಎಲ್ಲವೂ ಸ್ವಚ್ಛಗೊಳಿಸುತ್ತಾರೆ ಈ ಹಬ್ಬದ ಆಚರಣೆಗಾಗಿ ಹೊಲದಿಂದ ಮದ್ನಾ ತೆಗೆದುಕೊಂಡು ಬರುತ್ತಾರೆ. ಕುಂಬಾರ ಮಾಡಿದ ಹೊಸ ಹಣತೆ,ಮಡಿಕೆ ಖರೀದಿಸಿ ತರ-ತರಹದ ಧಾನ್ಯಗಳನ್ನು ಎಣ್ಣೆಯನ್ನು ಹಾಗೂ ತಂಬಿಗೆ,ಇನ್ನಿತರ ಬೇಕಾದ ಸಾಮಾನುಗಳು ಸಂಗ್ರಹಿಸುತ್ತಾರೆ.

 ಘಟಸ್ಥಾಪನೆ.

ಮನೆಯಲ್ಲಿರುವ ಜಗಲಿಯ ಮೇಲೆ ಮದ್ನಾ ಸ್ವಚ್ಛಗೊಳಿಸಿರುವ ಮದ್ನಾದಲ್ಲಿ ತರತರಹದ ಕಾಳುಗಳನ್ನು ಸೇರಿಸುತ್ತಾರೆ. ಎರಡು ಭಾಗ ಮಾಡಿರುತ್ತಾರೆ ಒಂದು ಮಣ್ಣಿನ ಭಾಗದಲ್ಲಿ ಮಣ್ಣಿನ ಚಿಕ್ಕ ಮಡಿಕೆ ಸುಣ್ಣ ಬಳೆದು ಇಟ್ಟಿರುತ್ತಾರೆ. ಇನ್ನೊಂದೆಡೆಯಲ್ಲಿ ಹಿತ್ತಾಳೆಯ ತಂಬಿಗೆ ಇಟ್ಟು ಅದರ ಮೇಲೆ ದೀಪ ಇಡುತ್ತಾರೆ, ದೀಪ ಹಾರದಂತೆ ಎಚ್ಚರಿಕೆ ವಹಿಸುತ್ತಾರೆ. 

 ವಿಶೇಷ ವೈಶಿಷ್ಟತೆ:

ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಅಂಬಾ ಭವಾನಿ ಎಂದು ಘಟ ಸ್ಥಾಪನೆ ಮಾಡುತ್ತಾರೆ. ದೀಪ ಹಚ್ವುವುದು ಸಸಿ ಹಾಕುವುದು ಕೆಲವರು ಎರಡು ದಿನ ಐದು ದಿನ ಏಳು ದಿನ ಒಂಬತ್ತು ದಿನ 10 ದಿನಗಳಾಗಿರಬಹುದು ದೇವಿ ಹೆಸರಿನ ಮೇಲೆ ಉಪವಾಸ ಮಾಡುವದು ಕಾಲಿಗೆ ಚಪ್ಪಲಿ ಹಾಕದಿರುವುದು ಹಚ್ಚಿದ ದೀಪ ಹಗಲಿರುಳು ಆರದಂತೆ ನೋಡಿಕೊಳ್ಳುವುದು ಈ ಹಬ್ಬದ ವೈಶಿಷ್ಟ್ಯತೆ ಆಗಿದೆ. 

 ಆಯುಧ ಪೂಜೆ:

ಗೋಧಿ ಹಿಟ್ಟಿನಿಂದ ಪೂರಿಯಂತೆ ಕಡಕನಿ ಮಾಡಿ ಘಟ ಸ್ಥಾಪನೆ ಯಾಗಿರುವ ತಳಿಯ ತೋರಣದಿಂದ ಕಟ್ಟಿರುತ್ತಾರೆ.ದಿವಡಿ ಉದ್ದಿನಬ್ಯಾಳಿ ಸಾರು ಅನ್ನ ಕೊಡಬ್ಯಾಳಿ ಮುಂತಾದ ತಿಂಡಿ ತಿನಿಸು ಪರಡಿಯಲ್ಲಿ ತುಂಬುತ್ತಾರೆ ಘಟ್ಟಕೆ ಪೂಜೆ ನೈವೇದ್ಯ ತೋರಿಸಿ ಆರತಿ ಮಾಡಿ ನಮಸ್ಕರಿಸುವರು. ನಂತರದಲ್ಲಿ ಉಪವಾಸ ಮುಗಿಸಿ ಆಹಾರ ಸೇವನೆ ಮಾಡಲಾಗುತ್ತದೆ.

 ವಿಜಯದಶಮಿ ದಿನ:

 ಈ ದಿನ ಬನ್ನಿ ಮುಡಿಯುವ ದಿನ ಬಹಳ ಪ್ರಾಮುಖ್ಯ ಹೊಂದಿದೆ. ದಿನನಿತ್ಯದ ಕೆಲಸ ಕಾರ್ಯಗಳು ಮುಗಿಸಿಕೊಂಡು ಹೊಸ ಬಟ್ಟೆ ತೊಟ್ಟು ಕೊಂಡು ದೇವರ ಜಗಲಿ ಮೇಲಿರುವ ನೀಳ ಪಕ್ಷಿಯನ್ನು ಕಿತ್ತುಕೊಂಡು ಗ್ರಾಮದ ದೇವಮಂದಿರಗಳಿಗೆ ಹೋಗಿ ದೇವರಿಗೆ ನಮಸ್ಕರಿಸುತ್ತಾರೆ. ನಂತರದಲ್ಲಿ ಊರ ಪಕ್ಕದಲ್ಲಿರುವ ಬನ್ನಿ ಗಿಡಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಬನ್ನಿ ಪತ್ರಿ ತೆಗೆದುಕೊಂಡು ಮನೆ ಮನೆಗೆ ತೆರಳುತ್ತಾರೆ. ಬನ್ನಿ ತೆಗೆದುಕೊಂಡು ಬಂದವರನ್ನು ಮುತ್ತೈದೆಯರು ಹಣೆಗೆ ವಿಜಯದ ಸಂಕೇತವಾಗಿ ಕುಂಕುಮ ಹಣೆಗೆ ಹಚ್ಚಿ ಆರತಿ ಬೆಳಗುತಾರೆ. ಆ ಮೇಲೆ ಗುರುಹಿರಿಯರು ಬಂಧು ಮಿತ್ರರಿಗೆ ಹಿರಿಯ ಕಿರಿಯರಿಗೆ ಒಬ್ಬರು ಇನ್ನೊಬ್ಬರು ಬನ್ನಿ ಎಲೆ ವಿನಿಮಯ ಮಾಡಿ ಕೊಳ್ಳುತ್ತಾರೆ. ಶುಭಾಷಯ ಗಳನ್ನು ಕೋರುವರು. ಇದರಿಂದ ಪರಸ್ಪರ ಪ್ರೀತಿ-ಭಾಂದವ್ಯ ಬೆಳೆದುಕೊಳ್ಳಬಹುದು.

 ಹಿನ್ನೆಲೆ:ತ್ರೇತಾಯುಗದಲ್ಲಿ  ಶ್ರೀರಾಮನು ರಾವಣನು ವದಿಸಿದ್ದು ಮತ್ತು ಇನ್ನೊಂದೆಡೆಯಲ್ಲಿ ದ್ವಾಪರ ಯುಗದಲ್ಲಿ ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ್ದು ಅಂದರೆ ದಿಗ್ವಿಜಯ್ ಸಾಧಿಸಿದ ದಿನವೇ ವಿಜಯದಶಮಿ ಎನ್ನಲಾಗಿದೆ. ಅ ಧರ್ಮಕ್ಕೆ ಸೋಲು ಧರ್ಮಕ್ಕೆ ಜಯ ದೊರೆಯುವ ಸಂದೇಶವನ್ನು ಈ ಹಬ್ಬದಲ್ಲಿ ಅಡಗಿದೆ.ಅಶ್ವತೇಜ ಮಾಶ

ಸದ ಪಕ್ಷದ ದಿನವನ್ನೇ ನವರಾತ್ರಿ ಎಂದು 10ನೇ ದಿನವನ್ನು 'ವಿಜಯದಶವೀ' ಎಂದು ಆಚರಿಸುತ್ತಾರೆ.

ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಆಚರಿಸಲಾಗುತ್ತದೆ. ಇದರಿಂದ ನಮ್ಮ ಬದುಕಿನ ಒಳ್ಳೆಯ ಸಂಬಂಧಗಳು ಆತ್ಮೀಯತೆ ಬೆಳವಣಿಗೆಗಳು ಗಟ್ಟಿಯಾಗಿರುವುದನ್ನು ಕಂಡುಕೊಳ್ಳಬಹುದು. ಇಂಥ ಪರಂಪರೆಯ ಹಬ್ಬಗಳು ಉಳಿಯಬೇಕಾದರೆ ಅವುಗಳು ನಮ್ಮ ಬದುಕಿನಲ್ಲಿ ಆಚರಣೆ ಮಾಡಬೇಕು ಆಚರಿಸಬೇಕು ಅದರಂತೆ ನಡೆದುಕೊಳ್ಳಬೇಕು. ಇತ್ತಿತ್ತಲಾಗಿ ನಗರಗಳಲ್ಲಿ ಕಡಿಮೆಯಾಗಿದ್ದು ಗ್ರಾಮೀಣ ಭಾಗದಲ್ಲಿ ಜೀವಂತವಾಗಿ ಇರುವುದನ್ನು ಕಂಡುಕೊಳ್ಳಬಹುದು. ಇದಕ್ಕೆಲ್ಲ ಹಳ್ಳಿಯಲ್ಲಿರುವ ಪೂರ್ವಜರ ಪರಂಪರೆಯು ಜೀವಂತವಾಗಿ ಇಟ್ಟಿರುವುದು ಕಂಡುಕೊಳ್ಳಬಹುದು.

ಲೇಖಕ -ಸಂಗಮೇಶ್ವರ ಎಸ್ ಮುರ್ಕೆ ಹೊಳೆಸಮುದ್ರ ತಾಲೂಕು ಕಮಲನಗರ