ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ :.. ಡಾ. ರಶೀದ

ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ :.. ಡಾ. ರಶೀದ

ಎಲ್ ಎಲ್ ಎಫ ಸಂಸ್ಥೆಯಿಂದ ಸ್ವಚ್ಛತಾ ಅಭಿಯಾನ| 

ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ :ಡಾ. ರಶೀದ. 

ಶಹಾಬಾದ :..ನಗರದ ಶಿಬರ ಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಶೋಕ ಲೈಲ್ಯಾಂಡ್ - ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು 

ಈ ಕಾರ್ಯಕ್ರಮವನ್ನು ನಗರ ಸಭೆಯ ಅಧ್ಯಕ್ಷರಾದ ಚಂಪಾಬಾಯಿ ರಾಜು ಮೇಸ್ತ್ರಿ ಅವರು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿದರು. 

ಕಾಡಾ ಅಧ್ಯಕ್ಷರಾದ ಡಾ. ಎಂಎ ರಶೀದ ಮಾತನಾಡಿ, ಸ್ವಚ್ಛತೆ ಜೀವನದಲ್ಲಿ ಬಹಳ ಮುಖ್ಯ ಮತ್ತು ಮಹತ್ವದ ಪಾತ್ರ ವಹಿಸುತ್ತದೆ ಆದ್ದರಿಂದ ಎಲ್ಲರೂ ವೈಯಕ್ತಿಕ ಸ್ವಚ್ಛತೆ ಜೊತೆಗೆ ಸಮುದಾಯ ಮಟ್ಟದಲ್ಲಿಯೂ ಸ್ವಚ್ಛತೆ ಹೊಂದುವುದು ಅವಶ್ಯಕ, ಸ್ವಚ್ಛ ಭಾರತ್ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಎಂದು ಹೇಳಿದರು. 

ಎಲ್ ಎಲ್ ಎಫ್ ನ ಸುವರ್ಣ ಪಾಟೀಲ ರವರು ಮಾತನಾಡಿ, ರೋಡ್ ಟೂ ಸ್ಕೂಲ್ ಮತ್ತು ಎಲ್ ಎಲ್ ಎಫ್ ಕಾರ್ಯದ ಬಗ್ಗೆ ಹಾಗೂ ಶಾಲೆಯ ಪಾಠ ಬೋಧನೆ, ಶೈಕ್ಷಣಿಕ ಚಟುವಟಿಕೆಗಳು ಬಗ್ಗೆ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಲ್ಲಿಕಾರ್ಜುನ ವಾಲಿ ನಗರಸಭೆ ಸದಸ್ಯರು ಹಾಗೂ ಡಾ ಜಮೀಲ್ ಬೇಗ್ ವೈದ್ಯಾಧಿಕಾರಿಗಳು, ಮೈನೂದ್ದಿನ್ ನೈರ್ಮಲ್ಯ ನೀರಿಕ್ಷಕರು, ಸಂಗಮ್ಮ ಪಾಟೀಲ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನೆ, ಯುವ ಮುಖಂಡರಾದ ಧನರಾಜ ಪವಾರ, ಎಸ.ಡಿ.ಎಮ.ಸಿ ಅಧ್ಯಕ್ಷ ಅಂಬಾದಾಸ ದೇವಕರ ವೇದಿಕೆ ಮೇಲೆ ಇದ್ದರು. 

ಎಲ್ ಎಲ್ ಎಫ್ ಸಂಸ್ಥೆಯ ಜೊತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ನಗರ ಸಭೆ, ಆರೋಗ್ಯ ಇಲಾಖೆಯ ಸಂಯೋಜನೆಯೊಂದಿಗೆ ಹಮ್ಮಿಕೊಳ್ಳಲಾಗಿತ್ತು. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಲ್ ಎಫ್ ಎಫ್ ನ ಎಸ್. ಆರ್. ಪಿ, ಪಿ.ಎ.ಎಸ್.ಡಿ, ಆರ್.ಪಿ, ಎಸ್.ಎಫ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 

ಮಹೇಶ ತೆಗ್ಗೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಭಾಗ್ಯಶ್ರೀ ಸ್ವಾಗತಿಸಿದರು, ಶ್ರೀದೇವಿ ವಂದಿಸಿದರು. 

ಅಭಿಯಾನದಲ್ಲಿ ಎ.ಎಲ್ - ಎಲ್ ಎಲ್ ಎಫ್ ನ ಶರಣಯ್ಯ ಹಿರೇಮಠ, ಅಶ್ವಿನಿ ಅನಿಲ ಮೈನಾಳಕರ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಹಾಬಾದ ವರದಿ:- ನಾಗರಾಜ್ ದಂಡಾವತಿ