ಒಳ‌ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ ಮಾಪಣ್ಣ ಹದನೂರ

ಒಳ‌ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ ಮಾಪಣ್ಣ ಹದನೂರ

ಒಳ‌ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ

ಕಲಬುರಗಿ: ಒಳ‌ ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಸ್ವಾಗತಾರ್ಹ. ಆದ್ರೆ, ಎಸ್ಸಿ- ಎಸ್ಟಿ ಪಂಗಡದ ಮೀಸಲಾತಿ ವರ್ಗಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪನ್ನು ವಿರೋಧಿಸಿ ಉತ್ತರ ಭಾರತ ಸಂಘಟನೆಗಳು ಆ.21ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿವೆ. ಅದನ್ನು ಯಾರೂ ಬೆಂಬಲಿಸಬಾರದು ಎಂದು ಮಾದಿಗ-ದಂಡೋರಾ ಮೀಸಲಾತಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹದನೂರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಾತನಾಡಿದರು. ಶೋಷಣೆಗೆ ಒಳಗಾದವರು, ಅಸಹಾಯಕರಿಗೆ ಅನುಕೂಲವಾಗಲಿ ಎಂದು ಒಳಮೀಸಲಾತಿಗೆ ಆಗ್ರಹಿಸಿ ಸುಮಾರು 35 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸುಪೀಂಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ. ಸರಕಾರ ಶೀಘ್ರ ಒಳಮೀಸಲಾತಿ ಜಾರಿಗೆ ತರಬೇಕು. ಅಲ್ಲಿಯವರೆಗೆ ಸರ್ಕಾರ ಹೊರಡಿಸಿದ ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

 ಬಸವರಾಜ ಮೇತ್ರಿ, ಚಂದ್ರಕಾಂತ ಸಗರಕರ್, ಮಲ್ಲಪ್ಪ ಚಿಗನೂರ, ಶಿವರಾಜ ಜಿನಕೇರಿ ಇದ್ದರು.