ಶರಣರ ವಚನಗಳು ಸಾರ್ವಕಾಲಿಕ ಪ್ರಸ್ತುತ : ಬಸವರಾಜ ಬಾವಿ

ಶರಣರ ವಚನಗಳು ಸಾರ್ವಕಾಲಿಕ ಪ್ರಸ್ತುತ : ಬಸವರಾಜ ಬಾವಿ

ಶರಣರ ವಚನಗಳು ಸಾರ್ವಕಾಲಿಕ ಪ್ರಸ್ತುತ : ಬಸವರಾಜ ಬಾವಿ

ಕಲಬುರಗಿಯಲ್ಲಿ ನಿವೃತ್ತ ಎಇಇ ನೀಲಕಂಠ ಜಮಾದಾರ್ ಅವರ ಸ್ವಗೃಹದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವಚನ ವೈಭವ ನಡೆಯಿತು.

ಶರಣರ ವಚನಗಳು ಸಾರ್ವಕಾಲಿಕ ಪ್ರಸ್ತುತ

ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಪರ ಸಂಘಟನೆಗಳ ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ನಿವೃತ್ತ ಎಇಇ ನೀಲಕಂಠ ಜಮಾದಾರ್ ಅವರ ಸ್ವಗೃಹದಲ್ಲಿ ಶರಣರ ದರ್ಶನ ಮಾಲಿಕೆ ಕಾರ್ಯಕ್ರಮ ನಡೆಯಿತು. ಶರಣ ಚಿಂತಕ ಬಸವರಾಜ ಬಾವಿ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತ ಅನುಭಾವ ನೀಡಿದರು.

ಹೆಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಹಾಗೂ ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ್, 12ನೇ ಶತಮಾನದಲ್ಲಿ ವೈಜ್ಞಾನಿಕ, ವೈಚಾರಿಕ ಕ್ರಾಂತಿ ಮಾಡಿರುವ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಸಾರ್ವಕಾಲಿಕ ಮೌಲ್ಯಿಕ ವಚನಗಳಾಗಿವೆ. ಈ ದಿಸೆಯಲ್ಲಿ ಇಂದಿನ ದಿನಮಾನಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಬದುಕು ಸಾಗಿಸಬೇಕು ಎಂದು ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿವೃತ್ತ ಎಇಇ ನೀಲಕಂಠ ಜಮಾದಾರ್, ಶರಣ-ಶರಣೆಯರ ತತ್ವಾದರ್ಶಗಳ ಬಗ್ಗೆ ತಿಳಿಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ಸಂಗಡಿಗರಿAದ ಸಂಗೀತ ಸಂಜೆ ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿ ಆರ್.ಜೆ. ಶೆಟಗಾರ್, ಸಂಚಾಲಕ ರವೀಂದ್ರ ಶಾಬಾದಿ, ಪ್ರಮುಖರಾದ ಭಗವಂತಪ್ಪ ಬುಳ್ಳಾ, ಡಾ. ಮಲ್ಲಿಕಾರ್ಜುನ ಮುಕ್ಕಾ, ಪ್ರೊ. ಎಲ್.ಬಿ. ಹಿಟ್ಟಿನ್, ಯಲ್ಲಪ್ಪ ತಳವಾರ, ಧರ್ಮರಾಯ ಜವಳಿ, ಅವ್ವಣ್ಣ ತಳವಾರ, ಚಂದ್ರಕಾAತ ತಳವಾರ ಸೇರಿದಂತೆ ಶರಣ ಶರಣೆಯರು ಭಾಗವಹಿಸಿದ್ದರು.