ಸಾಸಪಾಳ ಗ್ರಾಮದಲ್ಲಿ ನಿಂಗಪ್ಪ ಮುತ್ಯಾ ಜಾತ್ರೋತ್ಸವ..
ಸಾಸಪಾಳ ಗ್ರಾಮದಲ್ಲಿ ನಿಂಗಪ್ಪ ಮುತ್ಯಾ ಜಾತ್ರೋತ್ಸವ..
ಸಿಂದಗಿ ತಾಲೂಕಿನ ಸಾಸಾ ಬಾಳ ಗ್ರಾಮದಲ್ಲಿ. ಅ 12 ರಂದು ಭಾವೈಕ್ಯತೆಯ ಸಂತರಾದ ನಿಂಗಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವವು ನಡೆಯಲಿದೆ.
ಅ 12 ರಂದು ಬೆಳಿಗ್ಗೆ ಶ್ರೀ ನಿಂಗಣ್ಣ ಮುತ್ಯಾ ಪೂಜಾರಿ . ಅವರ ಮನೆಯಿಂದ ಗಂಧ ಲೇಪನ ಬಾಜಾ ಭಜಂತ್ರಿ ಸಕಲ ವಾದ್ಯಗಳೊಂದಿಗೆ ಅತಿ ವಿಜ್ರಮಣಿಯಿಂದ ಗಂಧ ಲೇಪನ ಕಾರ್ಯಕ್ರಮ ನಡೆಯಲಿದೆ
ನಂತರ ರಾತ್ರಿ ಓಂಕಾರ್ ಮೆಲೋಡೀಸ್ ಸಾಸಾ ಬಾಳ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಅ 13 ರಂದು ದೀಪೋತ್ಸವ . ಅಂದು ಬೆಳಿಗ್ಗೆ ಕಬ್ಬಡಿ ಪಂದ್ಯಾವಳಿಗಳು . ಭಜನಾ ಮಂಡಳಿಯ ಕಾರ್ಯಕ್ರಮ ಜರಗಲಿವೆ.
ಸಾಸಾ ಬಾಳ ಗ್ರಾಮದ ಶ್ರೀ ಸಿದ್ದರಾಯ ಡೊಳ್ಳಿನ ಸಂಘದ ವತಿಯಿಂದ ಹಾಗೂ ಬೀರು ಮಾಸ್ತರ ಮತ್ತು ಸಂಗಡಿಗರು ಹಾಗೂ ಇಂಡಿ ತಾಲೂಕಿನ ಹಿಂಗಣಿ ಶ್ರೀ ಮಾಳಿಂಗೇಶ್ವರ ಡೊಳ್ಳಿನ ಸಂಘದ ಮಲ್ಲು ಮಾಸ್ತರ್ ಇವರಿಂದ ಜಿದ್ದಾ ಜಿದ್ದಿನ ಡೊಳ್ಳಿನ ಹಾಡಕ್ಕಿ ಕಾರ್ಯಕ್ರಮ ಜರಗುವುದು.
ಗ್ರಾಮದ ಬಾಬು ಗುಂಡಲಗೇರಿ ಮತ್ತು ರಮೇಶ್ ಗೌಡ ಬಿರಾದರ್. ಇವರಿಂದ ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ . ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಎಂದು ಜಾತ್ರಾ ಮಹೋತ್ಸವ ಸಮಿತಿಯವ್ರು ತಿಳಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ