ಸಿದ್ಧಸಿರಿ ಕಾರ್ಖಾನೆಗೆ ಅಂಟಿಕೊಂಡಿರುವ ಆರೋಪ ಸತ್ಯಕ್ಕೆ ದೂರವಾದದ್ದು : ವೀರಣ್ಣ ಗಂಗಾಣಿ

ಸಿದ್ಧಸಿರಿ ಕಾರ್ಖಾನೆಗೆ ಅಂಟಿಕೊಂಡಿರುವ ಆರೋಪ ಸತ್ಯಕ್ಕೆ ದೂರವಾದದ್ದು : ವೀರಣ್ಣ ಗಂಗಾಣಿ

ಸರಕಾರ ಬೆಳಗಾವಿಗೆ ಬೆಣ್ಣೆ, ಕಲ್ಯಾಣಕ್ಕೆ ಸುಣ್ಣ, ತಾರತಮ್ಯ ದೂರಗೊಳಿಸಿ, ಬೆಳಗಾವಿ ಮಾದರಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ಕೊಟ್ಟು ಮಾತು ಉಳಿಕೊಳ್ಳಲಿ

ಚಿಂಚೋಳಿ :ಪಟ್ಟಣದ ಸಿದ್ಧಸಿರಿ ಏಥಿನಾಲ್ ಪವರ್ ಕಾರ್ಖಾನೆ ಕಬ್ಬಿನ ತೂಕದಲ್ಲಿ ವ್ಯತ್ಯಾಸ ತಂದು ರೈತರಿಗೆ ಮೋಸ ನಡೆಸುತ್ತಿದೆ ಎಂದು ಕೆಲವರು ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿರುವುದು ಸತ್ಯಕ್ಕೆ ದೂರವಾದದ್ದು, ಕಾರ್ಖಾನೆ ರೈತರಿಗೆ ಯಾವುದೇ ರೀತಿ ಮೊಸ, ವಂಚನೆ ನಡೆಸುತ್ತಿಲ್ಲ ಎಂದು ತಾಲೂಕ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.

ಅವರು ಇಲ್ಲಿನ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು,

ಸಿದ್ಧಸಿರಿ ಏಥಿನಾಲ್ ಪವರ್ ಕಾರ್ಖಾನೆ ತೂಕದಲ್ಲಿ ರೈತರಿಗೆ ಯಾವುದೇ ರೀತಿ ಮೋಸ,ವಂಚನೆ ನಡೆಸುತ್ತಿಲ್ಲ. ಕಾರ್ಖಾನೆಯ ಏಳಿಗೆ ಸಹಿಸದೇ ಇರುವ ಕೆಲವು ವ್ಯಕ್ತಿಗಳಿಂದ ಸುಖ ಸುಮ್ಮನೆ ಆರೋಪಗಳು ಮಾಡುತ್ತಿರುವುದು ರಾಜಕೀಯ ಪ್ರೇಪಿತವಾಗಿದೆ. ಸಿದ್ಧಸಿರಿ ಕಾರ್ಖಾನೆ ಮಾಲೀಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಚಿಂಚೋಳಿ ರೈತರ ಅಭಿವೃದ್ಧಿ ಕನಸಿನೊಂದಿಗೆ ಚಿಂಚೋಳಿ ಕಾರ್ಖಾನೆ ಪ್ರಾರಂಭಿಸಿರುವುದು ಇಲ್ಲಿನ ರಾಜಕೀಯ ವ್ಯಕ್ತಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ದಿನಕ್ಕೊಂದು ಆರೋಪಗಳು ಮಾಡಿ ರೈತರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿ ಕೊಂಡಿದ್ದಾರೆ. ಚಿಂಚೋಳಿ ಪ್ರಭುದ್ಧ ರೈತರು ಇಂತಹ ಆರೋಪಗಳಿಗೆ ಕಿವಿಕೊಡದೇ, ಈ ಭಾಗದ ರೈತರ ಬದುಕು ಬಂಗಾರವಾಗಿಸಲು ಬಂದ ಸಿದ್ಧಸಿರಿ ಕಾರ್ಖಾನೆಯನ್ನು ಉಳಿಸಿಕೊಂಡು ನಡೆಯುವ ಕೆಲಸ ಮಾಡಬೇಕೆಂದು ವೀರಣ್ಣ ಗಂಗಾಣಿ ಮತ್ತು ವೀರೇಶ ಯಂಪಳ್ಳಿ ಅವರು ತಾಲೂಕಿನ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಸರಕಾರ ಒಂದು ಬಾಗಕ್ಕೆ ಬೆಣ್ಣೆ ಮತ್ತೊಂದು ಬಾಗಕ್ಕೆ ಸುಣ್ಣದಂತೆ ಕಾಣದೇ, ಕಲ್ಯಾಣ ಕರ್ನಾಟಕ ಭಾಗದ ಕಬ್ಬು ಬೆಳೆಗಾರ ರೈತರಿಗೆ ಬೆಳಗಾವಿ ಮಾದರಿಯಲ್ಲಿ ಬೆಂಬಲೆ ಬೆಲೆ 3200 ರು ಕೊಟ್ಟು ಮಾತು ಉಳಿಸಿಕೊಳ್ಳಬೇಕು. ರೈತರಿಗೆ ಕೊಟ್ಟ ಮಾತಿನಂತೆ ಸಿದ್ಧಸಿರಿ ಕಾರ್ಖಾನೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ರುದ್ನೂರ್, ಸೂರ್ಯಕಾಂತ ಹುಲಿ, ಚಂದ್ರಕಾಂತ, ರಮೇಶ ಅವರು ಉಪಸ್ಥಿತರಿದರು.