ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಲೋಕೇಶ ಅಂಬೆಕಲ್ಲು ಚಾಲನೆ

ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಲೋಕೇಶ ಅಂಬೆಕಲ್ಲು ಚಾಲನೆ

ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಲೋಕೇಶ ಅಂಬೆಕಲ್ಲು ಚಾಲನೆ 

ಕಲಬುರಗಿ : ಕಲಬುರಗಿ ನಗರದ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರಕ್ಕೆ ಭಾಜಪಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಲೋಕೇಶ ಅಂಬೆಕಲ್ಲು ಅವರು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಬಿಜೆಪಿ ಪಕ್ಷ ಬಲಿಷ್ಠ ಪಡಿಸಬೇಕಾಗಿದೆ ಯಲ್ಲಾ ಕಾರ್ಯಕರ್ತರು ಪದಾಧಿಕಾರಿಗಳು ನಿಮ್ಮ ಪಕ್ಷದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ. ದೇಶ ಸದೃಡವಾಗಬೇಕಾದರೆ ತಾವೆಲ್ಲರೂ ಹೆಚ್ಚಿನ ಸದಸ್ಯತ್ವವನ್ನು ಮಾಡಬೇಕು ಎಂದರು 

  ಅಭಿಯಾನದ ಬಗ್ಗೆ ಮಾಜಿ ಸಂಸದರಾದ ಶ್ರೀ ಉಮೇಶ್ ಜಾಧವ್, ಜಿಲ್ಲಾಧ್ಯಕ್ಷರುಗಳಾದ ಶಿವರಾಜ್ ಪಾಟೀಲ್, ಚಂದು ಪಾಟೀಲ, ಗ್ರಾಮಾಂತರ ಜಿಲ್ಲಾ ಸದಸ್ಯತಾ ಅಭಿಯಾನದ ಸಂಚಾಲಕರಾದ ಶ್ರೀ ಬಸವರಾಜ ಮತ್ತಿಮಡು ಮತ್ತು ನಗರ ಜಿಲ್ಲಾ ಸದಸ್ಯತಾ ಅಭಿಯಾನದ ಸಂಚಾಲಕರಾದ ಶ್ರೀ ಅಮರನಾಥ ಪಾಟೀಲ ಅವರುಗಳು ಅಭಿಯಾನದ ಕುರಿತು ಮಾತನಾಡಿದರು.

 ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶಾಸಕರಾದ ಶ್ರೀ ಡಾ ಅವಿನಾಶ ಜಾಧವ್ ಅವರು, ಉಭಯ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಪಾಟೀಲ, ಶಿವಯೋಗಿ ನಾಗನಳ್ಳಿ , ಮಹದೇವ ಬೆಳಮಗಿ , ಅಶೋಕ ಬಗಲಿ, OBC ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅವ್ವಣ್ಣ ಮ್ಯಾಕೇರಿ ಅವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರೂ. 

  ಈ ಕಾರ್ಯಾಗಾರದಲ್ಲಿ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು, ಮತ್ತು ಅಭಿಯಾನದ ಮಂಡಲ ಪ್ರಭಾರಿಗಳು, ಸಂಚಾಲಕರುಗಳು ಮತ್ತು ಸಹ-ಸಂಚಾಲಕರುಗಳು ಡಾ. ಆನಂದ ಸಿದ್ದಮಾಣಿ ಉಪಸ್ಥಿತರಿದ್ದರು.