ಅನುಭಾವ ಎಂಬುದು ಅಂತರಂಗದ ರತ್ನ: ಆತ್ಮವಿದ್ಯೆ-ಡಾ. ಶಿವರಾಜ ಶಾಸ್ತ್ರೀ
ಅನುಭಾವ ಎಂಬುದು ಅಂತರಂಗದ ರತ್ನ: ಆತ್ಮವಿದ್ಯೆ-ಡಾ. ಶಿವರಾಜ ಶಾಸ್ತ್ರೀ
ಕಲಬುರಗಿ: ಅನುಭಾವವೆಂದರೆ ಪರಮಜ್ಞಾನ, ಜೀವನಾನುಭವ, ಅನುಭೂತಿ. ಅರಿವು, ಆಚಾರಗಳಿಂದ ಅನುಭಾವ. ಶರಣರ ದೃಷ್ಟಿಯಲ್ಲಿ ಆಚಾರವೇ ಸ್ವರ್ಗ, ಅನಾಚಾರವೇ ನರಕ. ಈ ಆಚಾರ ಮೃದುವಚನ, ಸದುವಿನಯದಿಂದ ಸದಾ
ಶಿವನ ಒಲುಮೆಗೆ ಪಾತ್ರವಾಗುವಂತಿರಬೇಕು. ಶರಣರ ದೃಷ್ಟಯಲ್ಲಿ ಅನುಭಾವ ಎಂಬುದು ಅಂತರಂಗದ ರತ್ನ: ಆತ್ಮವಿದ್ಯೆ, ನಿಜ ನಿವಾಸದಲ್ಲಿರಿಸುವುದು, ಅಂಗಲಿಂಗೈಕ್ಯ ಎಂಬ ಅರ್ಥ ಪಡೆಯುತ್ತದೆ.
ಅನುಭಾವ ಸಾಧಕನ ಒಳಮನಸ್ಸಿಗೆ ಸಂಬಂಧಪಟ್ಟಿದ್ದು. ಭಕ್ತಿಗೆ ಅನುಭಾವವೇ ಬೀಜ. ಶ್ರದ್ದಾ ಭಕ್ತಿಯೊಳಗೆ ಅನುಬಾವ ಬೆರೆಸಿದ್ದಲ್ಲಿ ಆಚಾರದ ಬೆಳಗು.
“ಅಜ್ಞಾನ ಜ್ಞಾನದಿಂದ, ಕತ್ತಲು ಬೆಳಕಿನಿಂದ, ಅಸತ್ಯ ಸತ್ಯದಿಂದ, ಅವಲೋಹ ಪರುಷದಿಂದ ಕೇಡಾದಂತೆ ಕೂಡಲ ಸಂಗನ ಶರಣರ ಅನುಭಾವದಿಂದ ಭವದ ಕೇಡು”. ಹೀಗೆ ಶರಣರದು ಅನುಭಾವ ದರ್ಶನ ಎನ್ನುತ್ತ
ನಾಳೆ ಬರದು ನಮಗಿಂದೆ ಬರಲಿ ಇಂದೆ ಬರದು ನಮಗೀಗಲೆ ಬರಲಿಯಂದು ಅದಕ್ಕೆ ಯಾರು ಅಂಜುವರೇಂದು ಶರಣರು ಮರಣಕ್ಕೆ ಹೆದರರಿಲ್ಲ ಅದನ್ನು ಮಹಾನವಮಿಯಂತೆ ಆಚರಿಸಿದರು ಎಂದು ಮರಣವೇ ಮಹಾನವಮಿ ಎಂಬ ವಿಷಯ ಕುರಿತು ವಿದ್ಯಾನಗರದಲ್ಲಿ ಅಕ್ಟೋಬರ ೨ ರಂದು ದಿ: ಮಡೆಪ್ಪ ನಿಗ್ಗುಡಿಗಿ ಸ್ಮರಣಾರ್ಥ ಹೊಮ್ಮಿಕೊಂಡ “ಮಾಸಿಕ ವಚನೋತ್ಸವ” ಕಾರ್ಯಕ್ರಮದಲ್ಲಿ ಡಾ.ಶಿವರಾಜ ಶಾಸ್ತ್ರೀಜಿ ಉಪನ್ಯಾಸ ಮಾಡಿದರು.
ಪ್ರತಿಯೊಬ್ಬ ಶಿಕ್ಷಕರು ನಿತ್ಯ ನಿರಂತರ ಕಲಿಯುವ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಗುರಿಯ ಬಗ್ಗೆ ತಿಳಿಸಿ ನವೀರದ ಅನುಭವದ ಅದ್ಭತ ಜ್ಞಾನವನ್ನು ಹೊಂದಿ ಅರಿವಿನಿ ಹನಿಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ವಿದ್ಯರ್ಥಿಗಳಿಗೆ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿ ಅಕ್ಷರ ಕಲಿಸಿದ ನನ್ನ ಅನೇಕ ಗುರುಗಳಲ್ಲಿ
ದಿ. ಮಡೆಪ್ಪ ನಿಗ್ಗುಡಿಗಿ ಅವರು ನನ್ನನ್ನು ಮಗನಂತೆ ಪ್ರೀತಿ ತೋರಿಸಿ ವಿಶೇಷ ವಿದ್ಯಾದಾನ ಮಾಡಿದ ಗುರುಗಳಾಗಿದ್ದಾರೆ ಎಂದು ಗರುವಿನ ಸ್ಮರಣೆ ಮಾಡುತ್ತ ಅವರ ಪುಣ್ಯಸ್ಮರಣೆ ನಿಮಿತ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ನನ್ನ ಪುಣ್ಯದ ಫಲವೇಂದು ಉಮೇಶ ಶೆಟ್ಟಿಯವರು ಮಾಸಿಕ ವಚನವೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ವಚನೋತ್ಸವ ಪ್ರತಿಷ್ಠಾನ ಯುವ ಘಟಕ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದರು, ವಕೀಲರಾದ ಜಗದೇವ ನಿಗ್ಗುಡಿಗಿ, ಉಮಾಕಾಂತ ನಿಗ್ಗುಡಿಗಿ ವೇದಿಕಯ ಮೇಲೆ ಉಪಸ್ಥಿತರಿದ್ದರು.
ಉಮಾಕಾಂತ ನಿಗ್ಗುಡಗಿ ಸ್ವಾಗತಿಸಿದರು, ಬಸವರಾಜ ಧೂಳಾಗುಂಡಿ, ಕಲ್ಯಾಣಪ್ಪ ಬಿರಾದಾರ, ಓಂಕಾರ ಪಠಣ ಮಾಡಿದರು, ಅಕ್ಷತಾ ಕುಸನೂರ ಡಾ. ಅಮೃತಾ ಅವರಾದಿ ಪ್ರಾರ್ಥಿಸಿದರು, ವಿನೋದಕುಮಾರ ಜೇನವೇರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಕಾಶ ನಿಗ್ಗುಡಗಿ, ವೀರಾದಿತ್ಯ ಕುಸನೂರು, ಡಾ. ಕಿರಣ ಅವರಾದಿ, ಸಂತೋಷ ಮುದ್ದಾ, ಮಲ್ಲಿನಾಥ ದೇಶಮುಖ, ಬಸವರಾಜ ಪುಣ್ಯಶಟ್ಟಿ, ಸುಭಾಷ ಮಂಠಾಳೆ, ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಮಲ್ಲಿಕಾರ್ಜುನ ಕಾಳೆ, ವೀರೇಶ ಮಾಲಿ ಪಾಟಿಲ್, ನೀಲಗಂಗಮ್ಮ ಮುದ್ದಾ, ಜಯಶ್ರೀ ಮುದ್ದಾ, ವಿನಾಯಕ ಮುದ್ದಾ, ರೇವಣಸಿದ್ದಪ್ಪ ಜೀವಣಗಿ ಉಪಸ್ಥಿತರಿದ್ದರು.
ಫೋಟೊ:
ದಿ. ಮಡೆಪ್ಪ ನಿಗ್ಗುಡಗಿ ಸ್ಮರಣಾರ್ಥ ಹಮ್ಮಿಕೊಂಡ ಮಾಸಿಕ ವಚನೋತ್ಸವ ಕಾರ್ಯಕ್ರಮದಲ್ಲಿ ಉಮೇಶ ಶಟ್ಟಿ ಉಧ್ಘಾಟಿಸುತ್ತಿರುವ ಚಿತ್ರ, ಡಾ. ಶಿವರಾಜ ಶಾಸ್ತ್ರೀಜಿ ಶಿವರಾಜ ಅಂಡಗಿ, ಉಮಾಕಾಂತ ನಿಗ್ಗುಡಗಿ, ಜಗದೇವ ನಿಗ್ಗುಡಿಗಿ ಶಕುಂತಲಾ, ಡಾ. ಅಮೃತಾ ಉಪಸ್ಥಿತರಿದ್ದರು.
ಫ ದಿ. ಮಡೆಪ್ಪ ನಿಗ್ಗುಡಗಿ ಸ್ಮರಣಾರ್ಥ ಹಮ್ಮಿಕೊಂಡ ಮಾಸಿಕ ವಚನೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ ಧೊಳಗುಂಡಿ, ಕಲ್ಯಾಣಪ್ಪ ಬಿರಾದಾರ, ಓಂಕಾರ ಮಾಡುತ್ತಿರುವ ಚಿತ್ರ ಉಮೇಶ ಶೆಟ್ಟಿ, ಡಾ. ಶಿವರಾಜ ಶಾಸ್ತ್ರೀಜಿ, ಶಿವರಾಜ ಅಂಡಗಿ, ಉಮಾಕಾಂತ ನಿಗ್ಗುಡಗಿ, ವಿನೋದ ಕುಮಾರ ಜೇನೆವೆರಿ ಉಪಸ್ಥಿತರಿದ್ದರು.